Breaking News

ದೈರ್ಯವಂತ ಕನಕಪೂರ ಬಂಡೆಗೆ ಸಿಬಿಐ ಎದುರಿಸಲು ಆಗಲ್ವೆ…

ಬೆಳಗಾವಿ-ನೀವು ಧೈರ್ಯವಂತ.. ಕನಕಪೂರದ ಬಂಡೆ.. ಎಲ್ಲವನ್ನೂ ಎದುರಿಸೋರು ಸಿಬಿಐ ಎದುರಿಸಕ್ಕಾಗಲ್ವೆ ನಿಮಗೆ ಎಂದು ನಳಿನ್‌ಕುಮಾರ್ ಕಟೀಲ್,ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಟಾಂಗ್ ಕೊಟ್ಟರು.

ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕೋರ್ ಕಮೀಟಿ ಸಭೆ ನಡೆಸಿದ ಬಳಿಕ, ಮಾದ್ಯಮಗಳ ಜೊತೆ ಮಾತನಾಡಿದ್ರು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಸಿಬಿಐ ಸ್ವತಂತ್ರ ಸಂಸ್ಥೆ, ಕಾಂಗ್ರೆಸ್ ಕಾಲಘಟ್ಟದಲ್ಲಿ ನಿರ್ಮಾಣ ಆಗಿರೋದು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಹಳಷ್ಟು ಜನರ ಮೇಲೆ ಸಿಬಿಐ ರೇಡ್ ಆಗಿದೆ, ಲಾಲೂಪ್ರಸಾದ್, ಜಯಲಲಿತಾರಂತ ಘಟಾನುಘಟಿ ನಾಯಕರ ಮನೆ ಮೇಲೆ ಸಿಬಿಐ ದಾಳಿಯಾಗಿದೆ, ಇದನ್ನು ಕಾಂಗ್ರೆಸ್ ರಾಜಕಾರಣ ಮಾಡಿ ಸಿಬಿಐ ದಾಳಿ ಮಾಡಿಸಿದ್ದಾ? ಕಾಂಗ್ರೆಸ್ ಅದನ್ನೆಲ್ಲಾ ರಾಜಕೀಯ ದ್ವೇಷಕ್ಕಾಗಿಯೇ ಮಾಡಿಸಿತ್ತಾ?, ಕಾಂಗ್ರೆಸ್ ಸಿಬಿಐನ್ನು ದಾಳವಾಗಿ ಮಾಡಿಕೊಂಡು ಆಟವಾಡಿಸಿತ್ತಾ?, ಅವರೇ ಮಾಡಿಸಿದ್ರೆ ಇದು ಹಾಗೇ ಅಂತಾ ತಿಳಿದುಕೊಳ್ಳೋಣ.ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಯಾಗಿದೆ, ಐಟಿ ತನಿಖೆಯಾಗಿದೆ, ನಿಮಗೇಕೆ ಭಯ ಬೇಕು? ಯಾಕೆ ಜನ ಸೇರಿಸಬೇಕು, ಜೈಲಿಂದ ಬರುವಾಗ ಮೆರವಣಿಗೆ.. ಜೈಲಿಗೆ ಹೋಗುವಾಗ ಮೆರವಣಿಗೆ,ನೀವು ಸರಿ ಇದ್ರೆ ಕಾನೂನು ಹೋರಾಟ ಮಾಡಿ ಎಂದು ಡಿಕೆಶಿಗೆ ನಳೀನ್ ಕುಮಾರ್ ಕಟೀಲು ಸವಾಲ್ ಹಾಕಿದ್ರು.

ಕಾನೂನಾತ್ಮಕ ಹೋರಾಟ ಮಾಡಿ ಪರಿಶುದ್ಧರಾಗಿ ಹೊರ ಬನ್ನಿ,ಕಾನೂನಿಗೆ ಹೆದರೋದು ಏಕೆ? ನೀವು ಧೈರ್ಯವಂತ.. ಬಂಡೆ.. ಎಲ್ಲರನ್ನೂ ಎದುರಿಸೋರು ಸಿಬಿಐ ಎದುರಿಸಕ್ಕೆ ಆಗಲ್ವಾ? ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಪ್ರಶ್ನೆ ಮಾಡಿದ್ರು.

ಆರ್‌.ಆರ್.ನಗರ, ಶಿರಾ ಬಿಜೆಪಿ ಅಭ್ಯರ್ಥಿ ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡ್ತೀವಿ, ನಮ್ಮ ಹಿರಿಯರು, ಹೈಕಮಾಂಡ್ ಚರ್ಚೆ ಮಾಡಿ ಅಭ್ಯರ್ಥಿ ಘೋಷಿಸುತ್ತಾರೆ,ಎಂದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರ ಪ್ರಸ್ತಾಪಿಸಿದ ಅವರು, ಚುನಾವಣೆ ಘೋಷಣೆ ಆದ ಮೇಲೆ ನಾವು ಅದಕ್ಕೆ ತಯಾರಿ ಮಾಡ್ತೇವೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಆಕಾಂಕ್ಷಿಗಳು ಹೆಚ್ಚಿರುವ ವಿಚಾರ, ಆಕಾಂಕ್ಷಿಗಳು ಜಾಸ್ತಿ ಇದಾರೆ ಅಂದ್ರೆ ಪಕ್ಷ ಬೆಳೆದಿದೆ ಎಂದು ಅರ್ಥ, ಆಕಾಂಕ್ಷಿಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು ಅಭ್ಯರ್ಥಿ ಘೋಷಣೆ ಮಾಡ್ತೀವಿ, ಆಕಾಂಕ್ಷಿಗಳನ್ನೆಲ್ಲಾ ಸಮಾಧಾನ ಮಾಡುವ ಶಕ್ತಿ ಬಿಜೆಪಿಗಿದೆ ಎಂದರು ನಳೀನ್ ಕುಮಾರ್ ಕಟೀಲು.

ಆಕಾಂಕ್ಷಿಗಳನ್ನೆಲ್ಲಾ ಸಮಾಧಾನ ಮಾಡಿ ಬೆಳಗಾವಿ ಲೋಕಸಭಾ ಗೆಲ್ತೇವೆ, ಎಂದು ವಿಶ್ವಾಸ ವ್ಯೆಕ್ತಪಡಿಸಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಚಾರವಾಗಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ವಿಚಾರಕ್ಕೆ ತಿರಗೇಟು ನೀಡಿದ ಅವರು, ಬೆಳಗಾವಿಯಲ್ಲಿ ವಿಠ್ಠಲ್ ಅರಭಾಂವಿ ಅಂತಾ ರೈತ ಆತ್ಮಹತ್ಯೆ ಮಾಡಿಕೊಂಡ, ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ 3000 ರೈತರ ಆತ್ಮಹತ್ಯೆ ಮಾಡಿಕೊಂಡರು.ನಿಮ್ಮ ಅಧಿಕಾರಾವಧಿಯಲ್ಲಿ ರೈತರಿಗೆ ಕಣ್ಣೀರು ಹಾಕಿಸಿದ್ರಿ, ಕಣಿಕರ ತೋರಲಿಲ್ಲ, ಇಂದು ಎಪಿಎಂಸಿ ತಿದ್ದುಪಡಿ ಕಾಯ್ದೆ ಬಗ್ಗೆ ಹೇಳೋಕೆ ಅರ್ಹತೆ ಇದೆಯಾ ಹೊಸದಾದ ಕಾಯ್ದೆಯಿಂದ ರೈತರು ಆನಂದವನ್ನು ಕಾಣಬಹುದು ನೇರವಾಗಿ ಮಾರುಕಟ್ಟೆಯಲ್ಲಿ ತಮ್ಮ ಬೆಳೆಗೆ ಬೆಲೆ ನಿಗದಿ ಮಾಡಬಹುದು, ರೈತರ ಹೆಸರಿನಲ್ಲಿ ರಾಜಕೀಯ ಮಾಡಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಯಾವತ್ತೂ ರೈತರ ಪರವಾಗಿ ಚಿಂತನೆ ಮಾಡಿಲ್ಲ, ಅಧಿಕಾರ ಇದ್ದಾಗ ರೈತರಿಗೆ ಕಾಂಗ್ರೆಸ್ ಯಾವುದೇ ಕೊಡುಗೆ ಕೊಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದರು.

ಕೇಂದ್ರ ಸರ್ಕಾರ ಮೋದಿ ನೇತೃತ್ವದಲ್ಲಿ ಫಸಲ್ ಭಿಮಾ ಯೋಜನೆ ಜಾರಿ ತಂದ್ರು, ಯಡಿಯೂರಪ್ಪ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದ್ರು, ಬಿಎಸ್‌ವೈ ತಂದ ಸಾವಯವ ಕೃಷಿ ಆಯೋಗವನ್ನ ಸಿದ್ದರಾಮಯ್ಯ ರದ್ದು ಮಾಡಿಸಿದ್ರು, ಗೋವು ಕೃಷಿಗೆ ಸಂಬಂಧಿಸಿದ್ದು, ಗೋಹತ್ಯೆ ನಿಷೇಧ ಕಾನೂನು ತಗೆದ್ರು,ನಾಟಕ ಮಾಡಿ ಮಾಡಿ ಮನೆಗೆ ಹೋಗಿದ್ದಾರೆ.ಒಂದು ವಿರೋಧ ಪಕ್ಷವಾಗಲೂ ಕಾಂಗ್ರೆಸ್ ನಾಲಾ ಯಕ್ ಅಂತಾ ಜನ ತೋರಿಸಿಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ರು.

ನಾನು ಇನ್ನೂ ರಿಟಾಯರ್ಡ್ ಆಗಿಲ್ಲ ಎಂದ ಕೋರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರ,ಪರೋಕ್ಷವಾಗಿ ತಾವು ಸ್ಪರ್ಧಿಸುವ ಇಂಗಿತವನ್ನು ಪ್ರಭಾಕರ ಕೋರೆ ವ್ಯೆಕ್ತ ಪಡಿಸಿದರು.
ಬಿಜೆಪಿ ಟಿಕೆಟ್ ಕೊಟ್ರೆ ಸ್ಪರ್ಧಿಸುತ್ತೀರಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಾಹೇಬ್ರು, ಈ ವೇಳೆ ನಾನು ರಾಜಕಾರಣದೊಳಗೆ ಇನ್ನೂ ನಿವೃತ್ತಿಯಾಗಿಲ್ಲ ಎಂದರು. ನಿವೃತ್ತಿಯಾದ ಮೇಲೆ ಅದನ್ನೆಲ್ಲಾ ವಿಚಾರ ಮಾಡೋಣ ಅಂದ್ರು

ಯಾರಾದರೂ ಯುವಕರಿಗೆ ಟಿಕೆಟ್ ಕೊಟ್ಟರೂ ತೊಂದರೆ ಇಲ್ಲ ಪ್ರತಿಯೊಂದು ಇಸ್ಯೂ ಬಂದ್ರೆ ಪ್ರಭಾಕರ ಕೋರೆ ಹೆಸರು ಬರುತ್ತೆ, ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ನೀಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಬೆಳಗಾವಿಯಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ ಹೇಳಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *