ಬೆಳಗಾವಿಯಲ್ಲಿ ಕೊಲೆ ಆರೋಪಿ ಮೇಲೆ ಫೈರಿಂಗ್..
ಬೆಳಗಾವಿ-*ಬೆಳಗಾವಿಯಲ್ಲಿ ಕೊಲೆ ಆರೋಪಿ ಮೇಲೆ ತಡರಾತ್ರಿ ಪೋಲೀಸರು ಫೈರಿಂಗ್ ನಡೆಸಿದ ಕಾರಣ ಮೋಸ್ಟ್ ವಾಂಟೆಡ್ ಕೊಲೆ ಸುಲಿಗೆ ನಡೆಸಿದ ಆರೋಪಿ
ಕಾಲಿಗೆ ಗುಂಡೇಟು ತಗಲಿದೆ.
ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಕೊಲೆ ಮಾಡಿದ ಆರೋಪಿ
ವಿಶಾಲ್‌ಸಿಂಗ್ ಚೌಹಾನ್ ಪರಾರಿಯಾಗುತ್ತಿದ್ದಾಗ ಎಸಿಪಿ ನಾರಾಯಣ ಭರಮಣಿ ಅವರು ಆರೋಪಿ ಕಾಲಿಗೆ ಶೂಟ್ ಮಾಡಿದ ಘಟನೆಬೆಳಗಾವಿಯ ವೀರಭದ್ರೇಶ್ವರ ನಗರದ ಕೋಯ್ಲಾ ಹೋಟೆಲ್ ಬಳಿ ನಡೆದಿದೆ.
ಬೆಳಗಿನ ಜಾವ 3:30ರ ಸುಮಾರಿಗೆ ಘಟನೆ ನಡೆದಿದ್ದು,
ಕೊಲೆ ಆರೋಪಿ ಹಿಡಿಯಲು ಎಸಿಪಿ ನಾರಾಯಣ ಭರಮಣಿ ಮತ್ತು ತಂಡ ಹೋಗಿತ್ತು,
ಬೈಕ್ ಮೇಲೆ ಪರಾರಿ ಆಗುತ್ತಿದ್ದ ಆರೋಪಿ ವಿಶಾಲ್‌ಸಿಂಗ್ ಚೌಹಾನ್ ಮೇಲೆ ಎಸಿಪಿ ಭರಮಣಿ ಅವರು ಫೈರಿಂಗ್ ನಡೆಸಿದರು.ಈ ಸಂಧರ್ಭದಲ್ಲಿ ವಿಶಾಲ ಕಾಲಿಗೆ ಗುಂಡು ತಗಲಿದೆ.
ಆರೋಪಿ ವಿಶಾಲ್‌ಸಿಂಗ್ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಪೇದೆ ಮೇಲೆ ವಿಶಾಲಸಿಂಗ್
ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪೋಲೀಸರಿಂದ ತಪ್ಪಿಸಿಕಿಂಡು ಓಡುತ್ತಿರುವಾಗ ಎಸಿಪಿ ಭರಮಣಿ ವಿಶಾಲ ಮೇಲೆ ಶೂಟ್ ಮಾಡಿದ್ದಾರೆ.ಎರಡು ಸುತ್ತಿನ ಗುಂಡಿನ ದಾಳಿಯಲ್ಲಿ ವಿಶಾಲ್ ಕಾಲಿಗೆ ಗುಂಡು ತಗಲಿದೆ.ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಖ್ಯಾಂಶಗಳು…
*ರೌಡಿಶೀಟರ್ ವಿಶಾಲ್‌ಸಿಂಗ್ ಚೌಹಾನ್ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು*
ಕೊಲೆ, ಸುಲಿಗೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಶಾಲ್‌ಸಿಂಗ್ ಚೌಹಾನ್
*ಮೂರು ತಂಡ ಮಾಡಿಕೊಂಡು ಕೊಲೆ ಆರೋಪಿಗೆ ಬಲೆ ಬೀಸಿದ್ದ ಪೊಲೀಸರು*
ಎಸಿಪಿ ನಾರಾಯಣ ಭರಮಣಿ, ಇಬ್ಬರು ಸಿಪಿಐ, ಓರ್ವ ಪಿಎಸ್ಐ ತಂಡದಿಂದ ಕಾರ್ಯಾಚರಣೆ
ಖಚಿತ ಮಾಹಿತಿ ಮೇರೆಗೆ ವೀರಭದ್ರ ನಗರದ ಕೋಯ್ಲಾ ಹೋಟೆಲ್ ಬಳಿ ತೆರಳಿದ್ದ ಪೊಲೀಸರು
*ರೌಡಿಶೀಟರ್ ವಿಶಾಲ್‌ಸಿಂಗ್ ಬಂಧಿಸುವ ವೇಳೆ ಪೇದೆ ಮೇಲೆ ಹಲ್ಲೆ*
ಸಿಸಿಬಿ ಪೊಲೀಸ್ ಪೇದೆ ಯಾಸೀನ್ ನದಾಫ್ ಎಡಗೈ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಪೇದೆ ಯಾಸೀನ್ ನದಾಫ್ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ
ಈ ವೇಳೆ ಆರೋಪಿ ವಿಶಾಲ್‌ಸಿಂಗ್ ಮೇಲೆ ಎಸಿಪಿ ನಾರಾಯಣ ಭರಮಣಿ ಫೈರಿಂಗ್
ಆರೋಪಿ ವಿಶಾಲ್‌ಸಿಂಗ್ ಮೇಲೆ ಕರ್ನಾಟಕ ಮಹಾರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ವು
ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಶಾಲ್‌ಸಿಂಗ್ ಚೌಹಾನ್
ಪೊಲೀಸ್ ಪೇದೆ ಯಾಸೀನ್ ನದಾಫ್, ರೌಡಿಶೀಟರ್ ವಿಶಾಲ್‌ಸಿಂಗ್ ಚೌಹಾನ್ ಜಿಲ್ಲಾಸ್ಪತ್ರೆಗೆ ದಾಖಲು
ಮಾರ್ಚ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಹತ್ಯೆಯಾಗಿತ್ತು
ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ನಡೆದಿದ್ದ ಘಟನೆ
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು