Breaking News

ನಮ್ಮ ತಿರಂಗಾ ನಮ್ಮ ಗಂಡು ಮೆಟ್ಟಿನ ನೆಲದಲ್ಲೇ ರೆಡಿ ಆಗತೈತ್ರೀ….

ಬೆಳಗಾವಿ- ನಮ್ಮ ದೇಶದ ಸಂಸತ್ತ ಭವನ,ರಾಷ್ಟ್ರಪತಿ ಭವನ,ಕೆಂಪುಕೋಟೆ ಸೇರಿದಂತೆ ದೇಶದ ಪ್ರಮಯಖ ಸ್ಥಳಗಳಲ್ಲಿ ಹಾರಾಡುವ ನಮ್ಮ ಹೆಮ್ಮೆಯ ರಾಷ್ಟ್ರಧ್ವಜ ತಯಾರೋಗುದು ನಮ್ಮ ಹೆಮ್ಮೆಯ ಗಂಡುಮೆಟ್ಟಿನ ನೆಲ ಉತ್ತರ ಕರ್ನಾಟಕದಲ್ಲಿ

ದೇಶದಲ್ಲಿ ಅನೇಕ ಕಡೆಗಳಲ್ಲಿ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ ಆದರೆ BIS ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಮಾನ್ಯತೆ ಪಡೆದ ದೇಶದಲ್ಲಿ ಇರುವ ಏಕೈಕ ಘಟಕ ಹುಬ್ಬಳ್ಳಿಯ ಬೆಂಗೇರಿಯಲ್ಲಿದೆ

ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾಧಿ ಗ್ರಾಮದ್ಯೋಗ ಸಂಯುಕ್ತ ಸಂಘ ಫಡ್ರೇಶನ್ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಿ ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡುತ್ತದೆ ಭಾರತ ಸರ್ಕಾರ ಸೇರಿದಂತೆ ದೇಶದ ಎಲ್ಲ ರಾಜ್ಯ ಸರ್ಕಾರಗಳಿಗೆ ಸರ್ಕಾರಿ ಕಚೇರಿಗಳ ಮೇಲೆ ಹಾರಾಡುವ ನಮ್ಮ ಹೆಮ್ಮೆಯ ಧ್ವಜ ರೆಡಿಯಾಗೋದು ನಮ್ಮ ನೆಲದಲ್ಲಿ ಅನ್ನೋದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ

ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ನಮ್ಮ ಉತ್ತರ ಕರ್ನಾಟಕ ಅನೇಕ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ ಬ್ರಿಟೀಷರ ವಿರುದ್ಧ ಮೊದಲು ಪುಕಾರು ಹಾಕಿ ಅವರ ವಿರುದ್ಧ ಹೋರಾಡಿ ಬ್ರಿಟೀಷ್ ಅಧಿಕಾರಿಯ ರುಂಡ ಚೆಂಡಾಡಿದ್ದು ವೀರ ರಾಣಿ ಕಿತ್ತೂರು ಚೆನ್ನಮ್ಮ, ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಮೊಟ್ಟಮೊದಲು ಮತ್ತು ಕೊನೆಯ ಕಾಂಗ್ರೆಸ್ ಅಧಿವೇಶನ ನಡೆದಿದ್ದು ಬೆಳಗಾವಿಯಲ್ಲಿ ಹೀಗೆ ಅನೇಕ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿರುವ ನಮ್ಮ ಉತ್ತರ ಕರ್ನಾಟಕದಲ್ಲೇ ನಮ್ಮ ರಾಷ್ಟ್ರ ಧ್ವಜ ಸಿದ್ದಗೊಳ್ಳುವುದು ಈ ನೆಲದ ಇನ್ನೊಂದು ಹೆಮ್ಮೆ

ರಾಷ್ಟ್ರ ಧ್ವಜ ತಯಾರಿಸುವ ಬೆಂಗೇರಿಯ ಘಟಕಕ್ಕೆ ಬೆಳಗಾವಿ ಸುದ್ಧಿ ಭೇಟಿ ನೀಡಿದಾಗ ಸಂಸ್ಥೆಯ ಸಕ್ರೇಟರಿ ಶಿವಾನಂದ ಮಠಪತಿ ಧ್ವಜಗಳ ತಯಾರಿಕೆ ಮತ್ತು ಪೂರೈಕೆಯ ಬಗ್ಗೆ ಮಾಹಿತಿ ನೀಡಿದರು ಬೆಂಗೇರಿಯ ಧ್ವಜ ತಯಾರಿಕಾ ಘಟಕದಲ್ಲಿ 9 ವಿವಿಧ ಅಳತೆಯ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತಿದೆ 170 ರೂಪಾರಿಯಿಂದ 17800 ರೂ ಬೆಲೆಯ ಧ್ವಜಗಳನ್ನು ತಯಾರಿಸಲಾಗುತ್ತದೆ ಎಂದು ಮಠಪತಿ ತಿಳಿಸಿದರು

ಧ್ವಜ ತಯಾರಿಸುವ ಮಟಿರಿಯಲ್ ಬಾಗಲಕೋಟೆಯ ತುಳಸಿಗೇರಿ ಘಟಕದಲ್ಲಿ ತಯಾರಾಗುತ್ತದೆ ಧ್ವಜದ ಕಲರಿಂಗ್,ಅಶೋಕ ಚಕ್ರದ ಮುದ್ರಣ ,ಕಟಿಂಗ್ ಟೇಲರಿಂಗ್ ,ಸೇರಿದಂತೆ ಧ್ವಜವನ್ನು ಸಂಪೂರ್ಣವಾಗಿ ಸಿದ್ಧಪಡಿಸುವ ಎಲ್ಲ ಯುನಿಟ್ ಗಳು ಬೆಂಗೇರಿ ಘಟಕದಲ್ಲಿವೆ

ಈ ಘಟಕದಲ್ಲಿ ನೂರಕ್ಕೂ ಹೆಚ್ವು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಘಟಕದಲ್ಲಿ ಧ್ವಜ ಹೊಲಿಯುವ 30 ಜನ ನುರಿತ ಟೇಲರ್ ಗಳಿದ್ದಾರೆ

ರಾಷ್ಟ್ರ ಧ್ವಜ ತಯಾರಿಕಾ ಘಟಕದಲ್ಲಿ ವರ್ಷದ ಹನ್ನೆರಡು ತಿಂಗಳು ಧ್ವಜಗಳನ್ನು ತಯಾರಿಸಲಾಗುತ್ತದೆ ವರ್ಷದಲ್ಲಿ ಮೂರು ಕೋಟಿ ರೂಗಳ ವಹಿವಾಟು ನಡೆಯುತ್ತದೆ .ಕ್ರಿಕೆಟ್ ,ಫುಟ್ಬಾಲ್ ಪಂದ್ಯಗಳು ನಡೆದಾಗ ಧ್ವಜಗಳ ಬೇಡಿಕೆ ಹೆಚ್ಚಾಗಿರುತ್ತದೆ ,ಪ್ಲಾಸ್ಟಿಕ್ ಧ್ವಜಗಳನ್ನು ಬ್ಯಾನ್ ಮಾಡಿರುವ ಹಿನ್ನಲೆಯಲ್ಲಿ ಧ್ವಜಗಳ ಬೇಡಿಕೆ ಹೆಚ್ಚಾಗಿದೆ ಎಂದು ಬೆಂಗೇರಿ ಘಟಕದ ಸಕ್ರೇಟ್ರಿ ಶಿವಾನಂದ ಮಠಪತಿ ತಿಳಿಸಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *