ಬೆಳಗಾವಿ- ಬೆಳಗಾವಿ ಜಿಲ್ಕೆಯಲ್ಲಿ ನ್ಯಾಶನಲ್ ಹಾಯವೇ ಪಕ್ಕದ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳನ್ನು ಹಾಯವೇ ಬಿಟ್ಟು ಬೇರೆ ಕಡೆಗೆ ಶಿಪ್ಟ ಮಾಡಲು ಜೂನ್ ಮೂವತ್ತರ ಗಡುವು ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ತಿಳಿಸಿದ್ದಾರೆ
ಬೆಳಗಾವಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 426 ,ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳನ್ನು ಗುರುತಿಸಲಾಗಿದೆ ಆದರೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ಹಳ್ಳಿಗಳಲ್ಲಿರುವ ಮದ್ಯದ ಅಂಗಡಿಗಳಿಗೆ ರಿಯಾಯಿತಿ ಕೊಡಬೇಕು ಎಂದು ತಿಳಿಸಿದ ಕಾರಣ ಬೆಳಗಾವಿ ಜಿಲ್ಲೆಯಲ್ಲಿ 25 ಅಂಗಡಿಗಳು ಹಾಯವೇ ಪಕ್ಕದಲ್ಲಿಯೇ ಉಳಿಯಲಿದ್ದು 401 ಮದ್ಯದ ಅಂಗಡಿಗಳು ಹಾಯವೇ ದಿಂದ ದೂರ ಶಿಪ್ಟ ಆಗಲಿವೆ
ಪಕ್ಕದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮದ್ಯದ ಅಂಗಡಿಗಳನ್ನು ಯಾವುದೇ ಮುಲಾಜಿಲ್ಲದೇ ಶಿಪ್ಟ ಮಾಡಿದೆ ಆದರೆ ಕರ್ನಾಟಕದಲ್ಲಿ ಹಾಯವೇ ಪಕ್ಕದ ಮದ್ಯದ ಅಂಗಡಿಗಳನ್ನು ಶಿಪ್ಟ ಮಾಡಲು ಜೂನ್ ಮೂವತ್ತರ ಗಡುವು ನೀಡಲಾಗಿದೆ ಅಷ್ಟರಲ್ಲ ಅಂಗಡಿಗಳನ್ನು ಶಿಪ್ಟ ಮಾಡದಿದ್ದರ ಅವರ ಲೈಸನ್ಸ ರಿನಿವಲ್ ಆಗೋದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ತಿಳಿಸಿದ್ದಾರೆ
ಹೆದ್ದಾರಿಗಳಲ್ಲಿ ಓಡಾಡುವ ವಾಹನ ಚಾಲಕರು ಹಾಯವೇ ಪಕ್ಕದ ಮದ್ಯದ ಅಂಗಡಿಗಳಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತರುವದರಿಂದ ಹೆದ್ದಾರಿ ಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವದನ್ನು ಗಮನಿಸಿ ಮಾನ್ಯ ಸರ್ವೋಚ್ಛ ನ್ಯಾಯಾಲಯ ಹೆದ್ದಾರಿ ಪಕ್ಕದ ಮದ್ಯದ ಅಂಗಡಿಗಳನ್ನು ಶಿಪ್ಟ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು