ಬೆಳಗಾವಿ – ವಿನಾಯಕನ ಸ್ವಾಗತಕ್ಕೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮುದ್ದಾದ ನವಜಾತ ಶಿಶುವನ್ನು ತಾಯಿಯೊಬ್ಬಳು ವಿಘ್ನ ವಿನಾಯಕನಿಗೆ ಸಮರ್ಪಿಸಿದ ಘಟನೆ ನಡೆದಿದೆ,
ತಾಯಿಯೊಬ್ಬಳು ನಾಲ್ಕು ದಿನದ ಹಿಂದೆ ಜನಿಸಿದ ಹೆಣ್ಣು ಶಿಶುವನ್ನು ಬಿಮ್ಸ ವೈದ್ಯಕೀಯ ಕಾಲೇಜಿನ ಬದಿಯಲ್ಲಿರುವ ಗಣಪತಿ ಮಂದಿರದ ಮುಖ್ಯದ್ವಾರದಲ್ಲಿ ಬಿಟ್ಟು ಹೋಗಿದ್ದಾಳೆ
ಮಂದಿರದ ಬಳಿ ಮಗು ಅಳುತ್ತರುವದನ್ನು ಗಮನಿಸಿದ ಕೆಲವರು ಕೂಡಲೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಮಗುವನ್ನು ಪರೀಕ್ಷೆ ಮಾಡಿ ಮಗು ಆರೋಗ್ಯವಾಗಿದೆ ನಾಲ್ಕು ದಿನದ ಹಿಂದೆ ಜನಿಸಿರಬಹುದು ಎಂದು ತಿಳಿಸಿದ್ದಾರೆ
ಮಗು ಮುದ್ದಾಗಿದ್ದು ಮಗುವನ್ನು ಆಸ್ಪತ್ರೆಯ ಹೆರಿಗೆ ಘಟಕದಲ್ಲಿ ಇಡಲಾಗಿದೆ
ಬಹುಶ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ತಾಯಿ ವಿನಾಯಕನ ಸನ್ನದಿಗೆ ಸಮರ್ಪಿಸಿರಬಹುದೆಂದು ಶಂಕಿಸಲಾಗಿದೆ.
Check Also
ಜೇಬಿನಲ್ಲಿ ಪಟಾಕಿ ಸಿಡಿದು ಯುವಕನಿಗೆ ಗಂಭೀರ ಗಾಯ…..!!
ಬೆಳಗಾವಿ-ಬೆಳಗಾವಿಯಲ್ಲಿ ಗಣೇಶ ಚತುರ್ಥಿ ಹಿನ್ನಲ ಪಟಾಕಿ ಸಿಡಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯರಾಮನಗರದಲ್ಲಿ ಈ ಘಟನೆ …