ಬೆಳಗಾವಿ-
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೊಸ ವರ್ಷವನ್ನ ವಿಭಿನ್ನವಾಗಿ ಆಚರಿಸಿ ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತಾರೆ. ವರ್ಷದ ಕೆಟ್ಟ ಘಟನೆ ಹಾಗೂ ಕಹಿ ನೆನಪುಗಳನ್ನ ಓಲ್ಡ್ ಮ್ಯಾನ್ ಎಂಬ ಮೂರ್ತಿಯನ್ನು ಮಾಡಿ ಸುಡುವುದರ ಮೂಲಕ ಹೊಸ ವರ್ಷವನ್ನ ಬರಮಾಡಿಕೊಳ್ಳುತ್ತಾರೆ.
ಇನ್ನು ಮೂವತ್ತು ವರ್ಷಗಳ ನಿರಂತರವಾಗಿ ಬೆಳಗಾವಿಯ ಅಮೀತ ಕಾಂಬಳೆ ಕುಟುಂಬ ಓಲ್ಡ್ ಮ್ಯಾನ್ ಮೂರ್ತಿ ಮಾಡಿ ತಯಾರಿಸಿ ಮಾರುತ್ತಾರೆ. ಹಾಗಿದ್ರೆ ಯಾವುದು ಆ ಕುಟುಂಬ ಹೇಗೆ ತಯಾರಿಸುತ್ತಾರೆ ಅಂತಿರಾ ಹಾಗಿದ್ರೆ ಈ ಸ್ಟೋರಿ ಓದಿ.
– ಡಿಸೆಂಬರ್ ೩೧ ಬಂದ್ರೆ ಸಾಕು ಎಲ್ಲೆಡೆ ಹೊಸವರ್ಷಾಚರಣೆ ಮಾತು. ಅದರಲ್ಲಿಂತು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೊಸ್ ವರ್ಷವನ್ನ ವಿಭಿನ್ನವಾದ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಬೆಳಗಾವಿಯ. ಪತ್ರಿ ಗಲ್ಲಿ, ಓಣಿ , ವಠಾರ. ಪ್ರಮಖ ಬಿದಿಗಳಲ್ಲಿ ಓಲ್ಡ್ ಮ್ಯಾನ ಮಾಡಿ ಸುಟ್ಟು ಸಂಭ್ರಮಿಸುತ್ತಾರೆ. ಹೀಗೆ ಓಲ್ಡ್ ಮ್ಯಾನ ತರಾರಿಕೆಯಲ್ಲಿ ನಿರವಾಗಿರುವನ ಹೆಸರು ಅಮೀತ ಕಾಂಬಳೆ. ಇವರ ತಂದೆಯ ವೃತ್ತಿಯನ್ನೇ ಮುಂದುವರೆಸುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಓಲ್ಡ್ ಮ್ಯಾನ್ ಮಾಡುತ್ತಿರುವ ಅಮೀತ ಕಾಂಬಳೆ ಕುಟುಂಬ. ಇದಕ್ಕೆ ಬೇಕಾಗುವ ಸಾಮಗ್ರಿ ಒಣ ಹುಲ್ಲು. ಬಿದಿರು ಬಾಂಬು. ಹಳೆ ಪೇಪರ್, ಕಲರ ಪೇಪರ್ ಹಲವಾರು ರೀತಿಯ ಬಣ್ಣ, ಸೇರಿದಂತೆ ಹಲವಾರು ಸಾಮಗ್ರಿಗಳನ್ನು ೧೫ ದಿನ ಮುಂಚಿತವಾಗಿಯೇ ತುಅರಿ ಮಾಡಿಕೊಳ್ಳುತ್ತಾರೆ. ಕಳೆದ ಬಾರಿ ಇಪ್ಪತ್ತು ಓಲ್ಡ್ ಮ್ಯಾನ್ ಮಾಡಿ ಮಾರಲಾಗಿತ್ತು. ಈ ಬಾರಿ ೩೦ ಕ್ಕೂ ಹೆಚ್ಚು ಓಲ್ಡ್ ಮ್ಯಾನ್ ಬೇಡಿಕೆ ಬಂದಿದೆ. ಅದೇ ರೀರಿ ಅವುಗಳನ್ನ ತಯಾರಿ ಮಾಡಲಾಗಿದೆ. ಇನ್ನು ಒಂದು ಓಲ್ಡ್ವಮ್ಯಾನ್ ತಯಾರ ಮಾಡಲು ಕನಿಷ್ಟ ಮೂರರಿಂದ ನಾಲ್ಕು ತಾಸು ಬೇಕು. ಮೂರು ಅಡಿ ನಾಲ್ಕುವಾಡಿ ಎತ್ತರದಿಂದ ಹಿಡಿದು ೧೫ ಅಡಿ ಎತ್ತರದ ವರೆಗೆ ಓಲ್ಡ್ ಮ್ಯಾನ್ ತಯಾರ ಮಾಡಲಾಗುತ್ತದೆ. ಸಾವಿರದಿಂದ ಎರಡು ಸಾವಿರ ರೂಪಾಯಿ ವರೆಗೆ ಮಾರಲಾಗುವುದು. ಅಂತಾರೆ ಕಾಂಬಳೆ
ಇನ್ನು ಅಮೀತ ಮಾಡುವ ಓಲ್ಡ್ ಮ್ಯಾನ್ ತಯಾರಿಕೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಸಹಾಯ ಮಾಡುತ್ತರೆ. ಅಮೀತ್ ಕಾಂಬಳೆ ಓಲ್ಡ್ ಮ್ಯಾನ್ ನ ದೇಹ ಕೈ -ಕಾಲು ಮುಖ ಸೇರಿದಂತೆ ಅಂಗಾಗ ತಯಾರ ಮಾಡಿದ್ರೆ ಉಟುಂಬದ ಸದಸ್ಯರು ಎಲ್ಲರೂ ಸೇರಿ ಅದಕ್ಕೆ ಪೇಪರ್ ಅಂಟಿಸಿ ತಲೆಗೆ ಹ್ಯಾಟ್ ಸೇರಿದಂತೆ ಸಣ್ಣ ಪುಟ್ಟ ಸಹಾಯ ಮಾಡುತ್ತಾರೆ. ಒಂದು ಓಲ್ಡ್ ಮ್ಯಾನ್ ಮಾಡಲು ಮೂರುತಾಸು ಬೇಕು.
ಒಟ್ಟಿನಲ್ಲಿ ಓಲ್ಡ್ ಮ್ಯಾನ್ ಮಾಡಿ ಸುಡುವುದರ ಮೂಲಕ ವರ್ಷದ ಕೆಟ್ಟ ಘಟನೆ ಹಾಗೂ ಕಹಿ ನೆನಪುಗಳನ್ನು ಸುಟ್ಟು ಸಂಭ್ರಮದಿಂದ ಹೊಸ ವರ್ಷವನ್ನ ಬರಮಾಡಿಕೊಳ್ಳುವು ವಿಷೇಶವಾಗಿದೆ.