ಬೆಳಗಾವಿ- ಬೆಳಗಾವಿಯ ಕುಂದಾ,ಕರದಂಟು,ಫೇಮಸ್ ಇದೆ.ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ಸಿದ್ಧಪಡಿಸಲಾಗುತ್ತಿರುವ ಓಲ್ಡ್ ಮ್ಯಾನ್ ಕೂಡಾ ಫೇಮಸ್ ಆಗುತ್ತಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಓಲ್ಡ್ ಮ್ಯಾನ್ ಮಾರ್ಕೆಟ್ ಶುರುವಾಗಿದೆ.
ವರ್ಷದ ಕೊನೆಯ ದಿನ ರಾತ್ರಿ ಹನ್ನೆರಡು ಗಂಟೆಗೆ ಮುಗಿದು ಹೋದ ವರ್ಷದ ಓಲ್ಡ್ ಮ್ಯಾನ್ ದಹನ ಮಾಡಿ ಹೊಸ ವರ್ಷವನ್ನು ಸ್ವಾಗತಿಸುವದು ಸಂಪ್ರದಾಯವೋ ಅಥವಾ ಪಕ್ಕದ ಗೋವಾ ರಾಜ್ಯದಿಂದ ನುಸುಳಿದ ಸಂಸ್ಕೃತಿಯೋ ಗೊತ್ತಿಲ್ಲ.ಆದ್ರೆ ಬೆಳಗಾವಿಯಲ್ಲಿ ಈ ಪದ್ದತಿಯನ್ನು ಅನುಸರಿಸುತ್ತಾರೆ. ಮಕ್ಕಳು ಯುವಕರು ಮದ್ಯರಾತ್ರಿ ಹನ್ನೆರಡು ಗಂಟೆಗೆ ಗಲ್ಲಿ ಗಲ್ಲಿಗಳಲ್ಲಿ ಓಲ್ಡ್ ಮ್ಯಾನ್ ಪ್ರತಿಕೃತಿ ಗಳನ್ನು ದಹನ ಮಾಡಿ ಹ್ಯಾಪೀ ನ್ಯು ಇಯರ್ ಎಂದು ಕೂಗಿ ಹೊಸ ವರ್ಷವನ್ನು ವೆಲ್ ಕಮ್ ಮಾಡುವದು ಬೆಳಗಾವಿ ಮಹಾನಗರದ ಸ್ಪೇಶ್ಯಾಲಿಟಿ.
ಡಿಸೆಂಬರ್ 31 ರ ದಿನದಂದು ಮಕ್ಕಳು ಯುವಕರು ಓಲ್ಡ್ ಮ್ಯಾನ್ ಗಳನ್ನು ಖರೀಧಿ ಮಾಡ್ತಾರೆ.ವರ್ಷ ಕಳೆದಂತೆ ಓಲ್ಡ್ ಮ್ಯಾನ್ ಗಳ ಬೇಡಿಕೆ ಹೆಚ್ಚಾಗಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಎರಡ್ಮೂರು ಕುಟುಂಬಗಳು ಓಲ್ಡ್ ಮ್ಯಾನ್ ಗಳನ್ನು ತಯಾರಿಸಿ ಮಾರಾಟ ಮಾಡ್ತಾರೆ. ಬಗೆ ಬಗೆಯ ಓಲ್ಡ್ ಮ್ಯಾನ್ ಗಳು ಈಗ ಮಾರಾಟಕ್ಕೆ ರೆಡಿಯಾಗಿವೆ. ಕ್ಯಾಂಪ್ ನಲ್ಲಿ ಓಲ್ಡ್ ಮ್ಯಾನ್ ಗಳ ಮಾರ್ಕೆಟ್ ಶುರುವಾಗಿದೆ.