Breaking News

ಮಳೆಗಾಲದ ಪ್ರಯುಕ್ತ ಒಂದು ದಿನದ ಪ್ರವಾಸ..!!

ಹುಬ್ಬಳ್ಳಿ: ಮಳೆಗಾಲದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ವಾರಾಂತ್ಯ ಹಾಗೂ ಸಾರ್ವಜನಿಕ ರಜಾ ದಿನಗಳಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಆರಂಭಿಸಲಾದ ಒಂದು ದಿನದ ವಿಶೇಷ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವ್ಯವಸ್ಥೆಯನ್ನು ಬೇರೆ ಸ್ಥಳಗಳಿಗೂ ವಿಸ್ತರಿಸುವಂತೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಮತ್ತಷ್ಟು ಒಂದು ದಿನದ ಟೂರ್ ಪ್ಯಾಕೇಜ್ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

*ಈ ವಿಶೇಷ ಬಸ್ಸುಗಳಿಗೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ*

ಪ್ರತಿ ಭಾನುವಾರ, 2ನೇ ಮತ್ತು 4ನೇ ಶನಿವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಈ ವಿಶೇಷ ಬಸ್ಸುಗಳ ಸೇವೆ ಲಭ್ಯವಿದೆ.

*ಬೆಳಗಾವಿ-ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ದೇವಸ್ಥಾನ* ವೋಲ್ವೋ ಎಸಿ ಬಸ್ಸು ಬೆಳಿಗ್ಗೆ 8 ಕ್ಕೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ ಕನ್ನೆರಿ ಮಠ ದರ್ಶನ ಮುಗಿಸಿಕೊಂಡು ಸಂಜೆ 7:30ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ‌ 600.

*ಬೆಳಗಾವಿ-ದಾಂಡೇಲಿ* ವೇಗದೂತ ಬಸ್ಸು ಬೆಳಗ್ಗೆ 7:30ಕ್ಕೆ ಹೊರಡುತ್ತದೆ. ಕಕ್ಕೇರಿ ಬಿಷ್ಟದೇವಿ ದೇವಸ್ಥಾನ, ದಾಂಡೇಲಿ ಮೊಸಳೆ ಪಾರ್ಕ್, ಮೌಳಂಗಿ ಪಾರ್ಕ್, ಕೂಳಗಿ ನೇಚರ್ ಪಾರ್ಕ್ ವೀಕ್ಷಣೆ ಮುಗಿಸಿಕೊಂಡು ಸಂಜೆ 7:45 ಕ್ಕೆ ಹಿಂದಿರುತ್ತದೆ. ಪ್ರಯಾಣ ದರ ರೂ‌. 360.

*ಬೆಳಗಾವಿ ನಗರ ಪ್ರವಾಸ* ಮಿಡಿ ನಗರ ಸಾರಿಗೆ ಬಸ್ ಬೆಳಗೆ 8:45 ಕ್ಕೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುತ್ತದೆ. ಬೆಳಗಾವಿ ರಾಜಹಂಸಾಗಡ, ಮಿಲಿಟರಿ ಶ್ರೀ ಮಹಾದೇವ ದೇವಸ್ಥಾನ, ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ ಹಾಗೂ ಹುಚೇವಾರಿ ಮಠ ಶ್ರೀ ರೇವಣಸಿದ್ದೇಶ್ವರ ಮಂದಿರ ವೀಕ್ಷಣೆ ಮುಗಿಸಿಕೊಂಡು ಸಂಜೆ 5-45 ಕ್ಕೆ ಹಿಂದಿರುತ್ತದೆ. ಪ್ರಯಾಣದರ ರೂ. 150.

*ಬೆಳಗಾವಿ ನವಿಲು ತೀರ್ಥ ಡ್ಯಾಮ್*
ವೇಗದೂತ ಬಸ್ ಬೆಳಿಗ್ಗೆ 7-45ಕ್ಕೆ ಹೊರಡುತ್ತದೆ. ಗಂಗಾಂಬಿಕ ಐಕ್ಯ ಸ್ಥಳ, ಎಂ ಕೆ ಹುಬ್ಬಳ್ಳಿಯ ಶ್ರೀ ಅಶ್ವಥ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ, ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ, ಸೊಗಲ ಶ್ರೀ ಸೋಮೇಶ್ವರ ದೇವಸ್ಥಾನ ಹಾಗೂ ಮುನವಳ್ಳಿ ನವಿಲುತೀರ್ಥ ಡ್ಯಾಮ್ ವೀಕ್ಷಣೆ ಮುಗಿಸಿಕೊಂಡು ಸಂಜೆ 7:15ಕ್ಕೆ ಹಿಂದಿರುಗುತ್ತದೆ. ಪ್ರಯಾಣ ದರ ರೂ. 350.

*ಬೆಳಗಾವಿ-ಮಹಿಪಾಲಘಡ* ವೇಗದೂತ ಬಸ್ ಬೆಳಿಗ್ಗೆ 7.45 ಕ್ಕೆ ಹೊರಡುತ್ತದೆ. ಬೆಳಗಾವಿಯ ರಾಜಹಂಸ ಘಡ, ಬೆಳಗುಂದಿಯ ಶ್ರೀ ಸಿದ್ದೇಶ್ವರ ಸ್ವಾಮಿ ವಿಶ್ರಾಂತ ಆಶ್ರಮ, ರಕ್ಕಸಕೊಪ್ಪ ಡ್ಯಾಮ್, ಧಾಮಣಿ ಫಾಲ್ಸ್/ ನೇಚರ್ ಕ್ಯಾಂಪ್ ಹಾಗೂ ಮಹಿಪಾಲ ಘಡ ಶ್ರೀ ವೈಜನಾಥ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 5:30ಕ್ಕೆ ಹಿಂದಿರುತ್ತದೆ ಪ್ರಯಾಣದರ ರೂ 200.

*ಬೆಳಗಾವಿ-ಬದಾಮಿ* ವೇಗದೋತ ಬಸ್ ಬೆಳಗ್ಗೆ 8ಕ್ಕೆ ಹೊರಡುತ್ತದೆ. ಗೋಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಬದಾಮಿಯ ಮೇಣ ಬಸದಿ, ಗುಹಾಂತರ ದೇವಾಲಯಗಳು, ಬನಶಂಕರಿ ದೇವಸ್ಥಾನ ಹಾಗೂ ಶ್ರೀ ಶಿವಯೋಗ ಮಂದಿರ ವೀಕ್ಷಣೆ ಮುಗಿಸಿಕೊಂಡು ಸಂಜೆ 5 -15ಕ್ಕೆ ಹಿಂದಿರುಗುತ್ತದೆ. ಪ್ರಯಾಣದರ ರೂ.270.

*ಬೆಳಗಾವಿ-ಕಕ್ಕೇರಿ* ವೇಗದೂತ ಬಸ್ ಬೆಳಗ್ಗೆ 7:45 ಕ್ಕೆ ಹೊರಡುತ್ತದೆ. ಬೆಳಗಾವಿಯ ರಾಜಹಂಸ ಘಡ, ಅಸೋಗಾ ಹೊಳೆದಂಡೆ, ನಂದಗಡ ಸಂಗೊಳ್ಳಿ ರಾಯಣ್ಣನ ಸಮಾಧಿ, ಹಲಸಿ ಭೂ ವರಹಾ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಹಾಗೂ ಕಕ್ಕೇರಿ ಶ್ರೀ ಬಿಷ್ಟಾದೇವಿ ದೇವಸ್ಥಾನ ವೀಕ್ಷಣೆ ಮುಗಿಸಿಕೊಂಡು ಸಂಜೆ 5 15ಕ್ಕೆ ಹಿಂದಿರುತ್ತದೆ. ಪ್ರಯಾಣ ದರ ರೂ.230.

ಮಾಹಿತಿಗೆ ಮೊ.7760991631 /9945536685 ಸಂಪರ್ಕಿಸಬಹುದು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *