ಬೆಳಗಾವಿ- ಬೆಳಗಾವಿಯ ಗಾಲ್ಫ್ ಮೈದಾನ ಈಗ ಚಿರತೆಯ ಅಡ್ಡೆಯಾಗಿದೆ.ಈ ಅಡ್ಡೆಗೆ ಎರಡು ಆನೆಗಳು ಕಾರ್ಯಾಚರಣೆಗೆ ದಾರಿಯ ಜೊತೆಗೆ ಸವಾರಿಯ ವ್ಯವಸ್ಥೆ ಮಾಡಿದ್ರೂ ಸಹ,ಚಿರತೆ ಕಾರ್ಯಪಡೆಯ ಕಣ್ಣಿಗೆ ಬೀಳದೇ ಪರಾರಿಯಾಯಿತು.
ಬೆಳ್ಳಂ ಬೆಳಗ್ಗೆ ಚಿರತೆ ಗಾಲ್ಫ್ ಮೈದಾನದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತುಗಳು ಮೂಡಿದ್ದವು ಚಿರತೆ ಅಲ್ಲೆ ಇರುವದು ಖಾತ್ರಯಾಗಿತ್ತು,ಸುಮಾರು ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆದ್ರೂ ಚಿರತೆಯ ಸುಳಿವು ಸಿಗಲಿಲ್ಲ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಿರತೆ ಪತ್ತೆ ಕಾರ್ಯಾಚರಣೆ ಆರಂಭವಾಯಿತು,ಕಾರ್ಯಾಚರಣೆ ಯಲ್ಲಿ ಅರ್ಜುನ,ಆಲೆ ಎಂಬ ಎರಡು ಆನೆಗಳು,ಗ್ರಾಮೀಣ ಪ್ರದೇಶದಲ್ಲಿ ಹಂದಿ ಹಿಡಿಯುವ ಪರಣಿತರು, ಅರಣ್ಯ ಇಲಾಖೆ,ಹಾಗೂ ಪೋಲೀಸ್ ಇಲಾಖೆಯ ಸಿಬ್ಬಂಧಿಗಳನ್ನು ಒಳಗೊಂಡ ಕಾರ್ಯಪಡೆ ಗಾಲ್ಫ ಅರಣ್ಯಕ್ಕೆ ನುಗ್ಗಿ ಸುಮಾರು ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಂಜೆ ಐದು ಗಂಟೆಗೆ ಬರಿಗೈಲಿ ಮರಳಿತು.
ಕಳೆದ ಇಪ್ಪತ್ತು ದಿನಗಳಿಂದ ನಡೆದ ಕಾರ್ಯಾಚರಣೆ ಫಲ ನೀಡಿರಲಿಲ್ಲ,ನಿನ್ನೆ ಬೇಟೆ ನಾಯಿಗಳ ಕಸರತ್ತು ವ್ಯರ್ಥವಾಗಿತ್ತು,ಇವತ್ತು ಎರಡು ಆನೆಗಳನ್ನು ತಂದು ಕಾರ್ಯಾಚರಣೆ ನಡೆಸಿದ್ರೂ ಯಾವುದೇ ಪ್ರಯೋಜನ ಆಗಲಿಲ್ಲ.
ಈ ಚಾಲಾಕಿ ಚಿರತೆ ಪತ್ತೆಗೆ ಎಲ್ಲಿಲ್ಲದ ಪ್ರಯತ್ನಗಳು ನಡೆದಿವೆ,ನಾಳೆ ಬೆಳಗ್ಗೆಯೂ ಕಾರ್ಯಾಚರಣೆ ಮುಂದುವರೆಯಲಿದ್ದು ನಾಳೆಯೂ ಕಾರ್ಯಪಡೆಗೆ ಚಿರತೆ ಕೈಕೊಡುತ್ತಾ ಅಥವಾ ಬಲೆಗೆ ಬೀಳುತ್ತಾ ಕಾದು ನೋಡಬೇಕು.