ಬೆಳಗಾವಿ-ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾ ಸಂಖ್ಯೆ 10ರಲ್ಲಿ ಚಿರತೆ ಸೆರೆಯಾಗಿದೆ.ನಿನ್ನೆ ರಾತ್ರಿ 10.22ಗಂಟೆಗೆ ಸುಮಾರಿಗೆ ಕ್ಯಾಮರಾದಲ್ಲಿ ಚಿರತೆ ಗಾಲ್ಫ್ ಮೈದಾನದಲ್ಲಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದ್ದು ಅರಣ್ಯ ಇಲಾಖೆ ಈಗ ಫುಲ್ ಅಲರ್ಟ್ ಆಗಿದೆ.ಚಿರತೆ ಪೋಟೋ ಆಧರಿಸಿ ಆದೇ ಭಾಗದಲ್ಲಿ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ನಿರ್ಧಾರಿಸಿದೆ.
ಚಿರತೆ ಗಾಲ್ಪ್ ಮೈದಾನದಲ್ಲಿಯೇ ಓಡಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು,ಗಾಲ್ಪ್ ಮೈದಾನದ ಸುತ್ತ ಬೆಳೆದ ಗಿಡಗಂಟಿ ಎರಡು ಜೆಸಿಬಿ ಸಹಾಯದಿಂದ ಕ್ಲೀನ್ ಮಾಡುತ್ತಿದ್ದಾರೆ.
ಸ್ಥಳದಲ್ಲಿಯೇ ಡಿಎಫ್ ಓ ಆ್ಯಂಥೋನಿ ಮರಿಯಪ್ಪ, ಎಸಿಎಫ್ ಮಲ್ಲಿನಾಥ್ ಕುಸನಾಳ ಬೀಡು ಬಿಟ್ಟಿದ್ದಾರೆ.ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಚಿರತೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಕಾರ್ಯಾಚರಣೆಗೆ ಜೆಸಿಬಿ ಬಳಕೆ….
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆ ಪತ್ತೆಗೆ, ಬೇಟೆ ನಾಯಿಗಳ ಕಾರ್ಯಾಚರಣೆ,ಗಜಪಡೆಯ ಕಾರ್ಯಾಚರಣೆ ಬಳಿಕೆ ಇವತ್ತು ಕಾರ್ಯಾಚರಣೆಗೆ ಜೆಸಿಬಿ ಗಳನ್ನು ಬಳಕೆ ಮಾಡಲಾಯಿತು.ಗಜಪಡೆ ಕಾರ್ಯಾಚರಣೆ ಮುನ್ನ ಐದು ಜೆಸಿಬಿಗಳಿಂದ ಗಿಡಗಂಟೆಗಳ ತೆರವು ಮಾಡಲಾಯಿತು.
ಗಾಲ್ಫ್ ಮೈದಾನದ ಒಳಭಾಗದ ತಡೆ ಗೋಡೆ ಸುತ್ತಲೂ ಗಿಡಕಂಟೆ ತೆರವು ಮಾಡಿ ಕಚ್ಚಾ ರಸ್ತೆ ನಿರ್ಮಾಣ ಮಾಡುವ ಮೂಲಕ,ದಟ್ಟವಾದ ಗಿಡಗಂಟೆಗಳಿರುವ ಪ್ರದೇಶದಲ್ಲಿ ಸ್ವಚ್ಛತಾ ಕಾಮಗಾರಿಯೂ ನಡೆಯಿತು.7 ಕಿಲೋಮೀಟರ್ ಸುತ್ತಲೂ ಬೆಳೆದ ಗಿಡಗಂಟೆಗಳ ತೆರವು ಮಾಡಿ ಕಾರ್ಯಾಚರಣೆಗೆ ದಾರಿ ಮಾಡಿಕೊಡಲಾಯಿತು.
7 ಕಿಮೀ ಸುತ್ತಲ ಪ್ರದೇಶದಲ್ಲಿ ಗಿಡಗಂಟೆಗಳ ತೆರವು ಬಳಿಕ ‘ಆಪರೇಷನ್ ಗಜಪಡೆ’ ಶುರುವಾಗಲಿದೆ.ಚಿರತೆ ಹೆಜ್ಜೆ ಗುರುತು ಪತ್ತೆಯಾಗಿರುವ ಪ್ರದೇಶದಲ್ಲಿ ಶೋಧಕಾರ್ಯಕ್ಕೆ ನಿರ್ಧರಿಸಲಾಗಿದೆ.ಶೀಘ್ರದಲ್ಲೇ ಚಿರತೆ ಪತ್ತೆಗೆ ಎರಡನೇಯ ದಿನದ ಗಜಪಡೆ ಕಾರ್ಯಾಚರಣೆ ಆರಂಭವಾಗಲಿದೆ.