Breaking News

ಚಿರತೆ ಬಂದೈತಿ, ಓಡಲೇ….ಓಡಲೇ… ಓಡಲೇ…!

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ.ಇಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಹಿಂಡಲಗಾ ಗಣಪತಿ ಮಂದಿರದ ಬಳಿ ಇರುವ ಮಿಲಿಟರಿ ಕ್ವಾಟರ್ಸ್ ಹತ್ತಿರ ಚಿರತೆ ಕಾಣಿಸಿಕೊಂಡಿದೆ.

ಹಿಂಡಲಗಾ ಗಣಪತಿ ಮಂದಿರದ ಹತ್ತಿರದಲ್ಲೇ ಇರುವ ಹನುಮಾನ ನಗರದ ಡಬಲ್ ರಸ್ತೆಯಲ್ಲಿರುವ ಮಿಲಿಟರಿ ಕ್ವಾಟರ್ಸ್ ಗೇಟ್ ಬಳಿ ಚಿರತೆ ಕಾಣಿಸಿಕೊಂಡು ಮತ್ತೆ ಗಾಲ್ಫ್ ಮೈದಾನದಲ್ಲಿ ಪರಾರಿಯಾಗಿದೆ.

ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಗೆ ಜಿಸಿಬಿಯಿಂದ ಕಾರ್ಯಾಚರಣೆ ನಡೆಯುತ್ತಿರುವಾಗ,ಗಿಡಗಂಟೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಜಂಪ್ ಮಾಡಿ,ಮಿಲಿಟರಿ ಕ್ವಾಟರ್ಸ ಹತ್ತಿರ ಬಂದಿದೆ,ಅರಣ್ಯ ಇಲಾಖೆಯ ಕಾರ್ಯಾಚರಣೆಯ ಪಡೆ ಚಿರತೆ ಬೆನ್ನಟ್ಟಿ ಚಿರತೆಗೆ ಬಲೆ ಹಾಕುವ ಪ್ರಯತ್ನ ಕೊನೆಗೂ ವಿಫಲವಾಗಿದೆ.

ಕಾರ್ಯಪಡೆ ಈಗ ಚಿರತೆಯ ಬೆನ್ನಟ್ಟಿ ಗಾಲ್ಫ್ ಅರಣ್ಯಕ್ಕೆ ನುಗ್ಗಿದ್ದು ಸಂಜೆಯೊಳಗಾಗಿ ಈ ಖತರ್ನಾಕ್ ಚಿರತೆ ಬಲೆಗೆ ಬೀಳುವ ಲಕ್ಷಣಗಳು ಕಂಡು ಬಂದಿವೆ.ಗಾಲ್ಫ್ ಮೈದಾನದಲ್ಲಿ ಈಗ ಚಿರತೆ ಬಂದೈತಿ ಓಡಲೇ..ಎನ್ನುತ್ತ ಕಾರ್ಯಪಡೆ ಚಿರತೆ ಬೆನ್ನಟ್ಟಿ ಓಡಾಡುತ್ತಿದೆ..

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *