:ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ್ಗೆಯಿಂದ ಮತ್ತೆ ಸೈರನ್ ಮೊಳಗುತ್ತಿದ್ದು, ಲಾಹೋರ್ ಮತ್ತು ಕರಾಚಿಯಲ್ಲಿ ‘ಆತ್ಮಹತ್ಯಾ ಡ್ರೋನ್’ ದಾಳಿ ನಡೆಯುತ್ತಿದೆ.
ಭಾರತದ ಆಪರೇಷನ್ ಸಿಂಧೂರ್ ಡ್ರೋಣ್ ದಾಳಿಯಿಂದ ಪಾಕಿಸ್ತಾನದ ರಾವಲ್ಪಿಂಡಿಯ ಕ್ರಿಕೆಟ್ ಸ್ಟೇಡಿಯಂ ಉಡೀಸ್ ಆಗಿದೆ. ಪಾಕಿಸ್ತಾನದ ವಾಯು ನೆಲೆಯೂ ನಾಶವಾಗಿದೆ. ಭಾರತದ ದಾಳಿಯಿಂದ ಚಿಂದಿ ಚಿಂದಿಯಾಗುತ್ತಿರುವ ಪಾಕಿಸ್ತಾನದ ಲಾಹೋರ್ ಇಸ್ಲಾಮಾಬಾದ್ ನಲ್ಲಿ ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳಿ ಎನ್ನುವ ಸೈರನ್ ಸದ್ದು ಕೇಳಿಬರುತ್ತಿದೆ. ಭಾರತೀಯ ಸೇನೆಯಿಂದ ಒಟ್ಟು ಹದಿನೈದು ಡ್ರೋಣಗಳಿಂದ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ಆಪರೇಷನ್ ಸಿಂಧೂರ್ ದಾಳಿಯಾಗಿದ್ದು ಪಾಕಿಸ್ತಾನ ದಿವಾಳಿಯಾಗಿದೆ.
ಗುರುವಾರ ಪಾಕಿಸ್ತಾನದ ಲಾಹೋರ್‌ನಲ್ಲಿ ದೊಡ್ಡ ಸರಣಿ ಸ್ಫೋಟಗಳು ಕೇಳಿ ಬಂದಿದ್ದರಿಂದ ಸೈರನ್‌ಗಳು ಮೊಳಗಲಾರಂಭಿಸಿವೆ. ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಅಜ್ಞಾತ ಸ್ಥಳಗಳಿಂದ ಹಾರಿ ಬಂದ ಆತ್ಮಹತ್ಯಾ ಡ್ರೋನ್ ಗಳು ಕರಾಚಿ ಮತ್ತು ಲಾಹೋರ್ ನ ನಿಗಧಿತ ಪ್ರದೇಶ ಮತ್ತು ಕಟ್ಟಡಗಳಿಗೆ ನುಗ್ಗಿ ಸ್ಫೋಟಗೊಳ್ಳುತ್ತಿವೆ ಎಂದು ವರದಿ ಮಾಡಿವೆ.