ಪಂಡರಿ ಪರಬ ವಿರುದ್ಧ ಉಪ ಮೇಯರ್ ಮಂಡೋಳ್ಕರ್ ಬಂಡಾಯ

ಉಪ ಮೇಯರ್ ಗೈರು
ಬೆಳಗಾವಿ ಮಹಾನಗರ ಪಾಲಿಕೆಯ ಉಪ ಮೇಯರ್ ನಾಗೇಶ್ ಮಂಡೋಳ್ಕರ್ ಅವರು ಪಾಲಿಕೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಗೈರು ಹಾಜರಾಗುವ ಮೂಲಕ ಚರ್ಚೆಗೆ ಗ್ರಾಸವಾದರು
ಉಪ ಮೇಯರ್ ನಾಗೇಶ ಮಂಡೋಳ್ಕರ್ ಅವರು ಆಡಳಿತ ಪಕ್ಷದ ನಾಯಕ ಪಂಡರಿ ಪರಬ ಅವರ ವಿರುದ್ಧ ಬಂಡೆದ್ದು ಸಭೆಯಿಂದ ದೂರ ಉಳಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ
ಆಡಳಿತ ಪಕ್ಷದ ನಾಯಕ ಪಂಡರಿ ಪರಬ ಅವರನ್ನು ಬದಲಿಸುವವರೆಗೂ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವದಿಲ್ಲ ಎನ್ನುವ ನಿರ್ಧಾರವನ್ನು ನಾಗೇಶ ಮಂಡೋಳ್ಕರ್ ಎಂಈಎಸ್ ನಾಯಕರಿಗೆ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ

ಸೋಮವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಉಪ ಮೇಯರ್ ಖುರ್ಚಿ ಖಾಲಿ ಉಳಿದುಕೊಂಡಿತ್ತು ಎಂಈಎಸ್ ನಾಯಕ ಪಂಡರಿ ಪರಬ ಅವರು ಎರಡು ವರ್ಷದಿಂದ ಆಡಳಿತ ಪಕ್ಷದ ನಾಯಕರಾಗಿದ್ದಾರೆ ಪ್ರತಿ ವರ್ಷ ಆಡಳಿತ ಪಕ್ಷದ ನಾಯಕನನ್ನು ಬದಲಿಸಬೇಕು ಎನ್ನುವ ನಿಯಮ ಇದ್ದರೂ ಪಂಡರಿ ಪರಬ ಅವರನ್ನು ಬದಲಿಸಿಲ್ಲ ಎನ್ನುವದು ನಾಗೇಶ ಮಂಡೋಳ್ಕರ್ ಅವರ ಆಕ್ರೋಶವಾಗಿದೆ

ಪಾಲಿಕೆಯ ಪ್ರಥಮ ಸಭೆಯಲ್ಲಿಯೇ ಉಪೇಯರ್ ನಾಗೇಶ ಮಂಡೋಳ್ಕರ್ ಎಂಈಎಸ್ ಧೋರಣೆಯ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *