ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೋಮಟೇಶ್ ವಿದ್ಯಾಪೀಠದ ಜಾಗೆ ವಿವಾದ ಪ್ರತಿಧ್ವನಿಸಿತು ನಗರ ಸೇವಕ ವಿನಯ ಗುಂಜಟಕರ ಅವರು ಗೋಮಟೇಶ ವಿದ್ಯಾಪೀಠದ ಕಟ್ಟಡ ರಸ್ತೆಯ ಮೇಲೆ ನಿರ್ಮಿಸಲಾಗಿದೆ ಅದನ್ನು ತೆರವುಗೊಳಿಸುವಂತೆ ಒತ್ತಾಯಿಸಿದಾಗ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಸಭೆಯಲ್ಲಿದ್ದ ಶಾಸಕ ಸಂಜಯ ಪಾಟೀಲ ಇದಕ್ಕೆ ಪ್ರತಿಯಾಗಿ ಮಾತನಾಡಿ ಈ ಜಾಗೆಗೆ ಸಮಂಧಿಸಿದಂತೆ ವ್ಯಾಜ್ಯ ನ್ಯಾಯಾಲಯದಲ್ಲಿದೆ ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಿರಿ ಎಂದು ಹೇಳಿದ ಅವರು ನಗರದಲ್ಲಿ ಬಹಳಷ್ಟು ಅನಧಿಕೃತ ಕಟ್ಟಡಗಳು ಇವೆ ಮೊದಲು ಆ ಕಟ್ಟಡಗಳನ್ನು ತೆರವು ಮಾಡಿ ನಗರದಲ್ಲಿ ಅನುಮತಿ ಇಲ್ಲದೇ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ ಇದರ ವಿರುದ್ಧ ಕ್ರಮ ಏಕಿಲ್ಲ ಎಂದು ಸಂಜಯ ಪಾಟೀಲ ಪ್ರಶ್ನಿಸಿ ಉದ್ದೇಶ ಪೂರ್ವಕವಾಗಿ ತಮ್ಮನ್ನು ಟಾರ್ಗೇಟ್ ಮಾಡಲಾಗುತ್ತಿದೆ ಎಂದು ಸಂಜಯ ಪಾಟೀಲ ಆರೋಪಿಸಿದರು
ಮದ್ಯಪ್ರವೇಶಿಸಿದ ಶಾಸಕ ಫಿರೋಜ್ ಸೇಠ ತರಕಾರಿ ಮಾರುಕಟ್ಟೆ ಕಡ್ಟಡವನ್ನು ನೆಲ ಸಮ ಮಾಡಿ ಎಂದು ಪತ್ರಿಕಾ ಹೇಳಿಕೆ ನೀಡಿದವರೇ ಈಗ ಈ ಕಟ್ಟಡದ ರಕ್ಷಣೆಗೆ ಮುಂದಾಗಿದ್ದಾರೆ ಗಾಜಿನ ಮನೆಯಲ್ಲಿ ಕುಳಿತುಕೊಂಡು ಬೇರೆಯವರ ಮನೆಗೆ ಕಲ್ಲು ಎಸೆಯಬೇಡಿ ನನಗೂ ಎಲ್ಲರ ಹಕಿಕತ್ತು ಗೊತ್ತಿದೆ ಅನುಮತಿ ಇಲ್ಲದೇ ಯಾರು ಎಲ್ಲಿ ಕಟ್ಟಡ ನಿರ್ಮಿಸಿದ್ದಾರೆ ಅನ್ನೋದು ನನಗೆ ಗೊತ್ತಿದೆ ಎಂದು ಶಾಸಕ ಫಿರೋಜ್ ಸೇಠ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು
ಅಲ್ಪಸಂಖ್ಯಾತ ಸಮಾಜದ ಶಿಕ್ಷಣ ಸಂಸ್ಥೆಗೆ ಪಾಲಿಕೆ ಜಾಗೆ ನೀಡುವ ವಿಷಯ ಅಜೆಂಡಾದಲ್ಲಿದೆ ಅಲ್ಪಸಂಖ್ಯಾತ ಸಮಾಜ ಯಾವಾಗ ಏನೂ ಬೇಡಿಲ್ಲ ಇದಕ್ಕೆ ಅನುಮೋದನೆ ನೀಡಬೇಕು ಎಂದು ಶಾಸಕ ಸೇಠ ಮಹಾಪೌರರಲ್ಲಿ ಮನವಿ ಮಾಡಿಕೊಂಡು ಸಭೆಯಿಂದ ನಿರ್ಗಮಿಸಿದರು
ನಗರಸೇವಕ ದೀಪಕ ಜಮಖಂಡಿ ಮಾತನಾಡಿ ನ್ಯಾಯಾಲಯದಲ್ಲಿರುವ ಪ್ರಕರಣಗಳ ಕುರಿತು ಪಾಲಿಕೆ ಸಭೆಯಲ್ಲಿ ಚರ್ಚೆಗೆ ಅವಕಾಶ ಇರುವದಿಲ್ಲ ಪಾಲಿಕೆಯ ಕಾನೂನು ಸಲಹೆಗಾರರು ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಒತ್ತಾಯಿಸಿ ಚರ್ಚೆಗೆ ತೆರೆ ಎಳೆದರು