ಧಾರವಾಡ
ಛಾಯಾಗ್ರಹಣ ಕಲೆ ವಿಶಿಷ್ಠ ಕಲೆ. ನಿಸರ್ಗದ ಹಲವಾರು ಚಿತ್ರಗಳ ವೈಶಿಷ್ಠ್ಯತೆಗಳನ್ನು ಬಿಂಬಿಸುವದ್ದಾಗಿದೆ. ಈ ಕಲೆಯಲ್ಲಿ ಛಾಯಾಗ್ರಾಹಕನ ಕಲ್ಪನೆಯ ಮೇರೆಗೆ ಎಷ್ಟೋ ವಿಷಯಗಳನ್ನು ಕ್ರೂಡಿಕರಿಸಲು ಸಾಧ್ಯ ಅಲ್ಲದೆ ಹಲವಾರು ಅವಿಷ್ಮರಣಿಯ ಕ್ಷಣಗಳನ್ನು ಈ ಛಾಯಾಗ್ರಹಣದಲ್ಲಿದೆ ಎಂದರೆ ತಪ್ಪಾಗಲಾರದು. ಛಾಯಾಗ್ರಹಣ ಅಷ್ಟು ಸುಲಭವಾದ ಕಾರ್ಯವಲ್ಲ ಅದರಲ್ಲಿ ಪರಿಪಕ್ವತೆಯನ್ನು ಹೊಂದಿದಾಗ ಮಾತ್ರ ಅದರಲ್ಲಿ ಒಂದು ವೈಶಿಷ್ಠ್ಯತೆಯನ್ನು ಕಾಣಬಹುದು ಅಂತೆಯೇ ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಧಾರವಾಡದಲ್ಲಿ ಆರ್‍ಕೆ ಛಾಯಾ ಫೌಂಡೇಶನ್ ದೃಷ್ಠಿ-ಸೃಷ್ಠಿ ಸಂಘಟನೆ ಜಂಟಿಯಾಗಿ ಅಗಷ್ಟ 19ರಿಂದ 20ರವರೆಗೆ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಛಾಯಾಗ್ರಹಣ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಮಕ್ಕಳ ಪ್ರೇಮಿ ರಾಮಚಂದ್ರ ಕುಲಕರ್ಣಿರವರ ಆಸಕ್ತಿಯಿಂದ ಆರ.ಕೆ. ಛಾಯಾ ಪೌಂಡೇಶನ್‍ನಿಂದ ಛಾಯಾಚಿತ್ರ ಪ್ರದರ್ಶನ ಪ್ರಾರಂಭವಾಗಿತ್ತು. ಆಗ ಕೇವಲ 7 ಜನ ಮಾತ್ರವಿದ್ದರು ನಂತರ ಹಲವಾರು ಹಿರಿಯ ಛಾಯಾಗ್ರಾಹಕರ ಪ್ರೇರಣೆಯಿಂದ ಛಾಯಾಗ್ರಾಹಕ ಅನೀಲಕುಮಾರ ಕಿತ್ತೂರರವರ ವಿಶೇಷ ಆಸಕ್ತಿವಹಿಸಿ ದೃಷ್ಠೀ ಸೃಷ್ಠಿ ಹಾಗೂ ಆರ್.ಕೆ.ಛಾಯಾ ಪೌಂಡೇಶನ್ ಕೂಡಿಕೊಂಡು 20ಕ್ಕೂ ಜನ ಸದಸ್ಯರನ್ನು ಹೊಂದಿ ಸದ್ಯ ಐದನೇಯ ವರ್ಷದಲ್ಲಿ ಸಾಗುತ್ತಿರುವ ಈ ತಂಡ 40 ಕ್ಕೂ ಹೆಚ್ಚು ಜನ ಸದಸ್ಯರನ್ನು ಹೊಂದಿದೆ ಅಲ್ಲದೆ ಈ ತಂಡ ಪ್ರತಿವರ್ಷ ಇಬ್ಬರು ಛಾಯಾಗ್ರಾಹಕರನ್ನು “ಹಿರಿಯ ಛಾಯಾ ಪ್ರೇಮಿ ಪ್ರಶಸ್ತಿ” ಹಾಗೂ ಸನ್ಮಾನಿಸುತ್ತಿದ್ದು 2013ರಲ್ಲಿ ಹಿರಿಯ ಛಾಯಾಗ್ರಾಹಕ ವiಹಾದೇವ ಪಾಟೀಲ, 2014ರಲ್ಲಿ ಕುಮಾರ ಕಾಟೇನಹಳ್ಳಿ ಮತ್ತು ಕಿರಣ ಬಾಕಳೆ, 2015 ರಲ್ಲಿ ಎಂ.ಆರ್. ಮಂಜುನಾಥ ಹಾಗೂ ಕರಿಯಪ್ಪಾ ಹಂಚಿನಮನಿ ರವರನ್ನು ಗೌರವಿಸಿದೆ.ಅದರಂತೆ 2016ರಲ್ಲಿ ಶಿವಶಂಕರ ಬಣಗಾರ ಹಾಗು ಸಲೀಮ ಬಳಬಟ್ಟಿರವರಿಗೆ ಗೌರವಿಸಿದೆ.
ಈ ಬಾರಿಯ ಪ್ರಶಸ್ತಿಯನ್ನು ಧಾರವಾಡದ ದೇವೇಂದ್ರ ಎಂ. ಬಡಿಗೇರ ರವರಿಗೆ”ಛಾಯಾ ಚಿತ್ರ ಪ್ರೇಮಿ ಪ್ರಶಸ್ತಿ” ಹಾಗೂ ಬೆಳಗಾವಿಯ ಪುಂಡಲಿಕ ಕಾಳಪ್ಪ ಬಡಿಗೇರ ರವರಿಗೆ”ಬಿಂಬ-ಭಾವ ಪ್ರಶಸ್ತಿ” ನೀಡಿ ಗೌರವಿಸಲಿದ್ದು, ಈ ಇಬ್ಬರು ಪ್ರತಿಭೆಗಳು ಛಾಯಾಗ್ರಹಣದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ ಇವರಿಗೆ ದಿನಾಂಕ 20 ರಂದು ಪ್ರಶಸ್ತಿ ಪ್ರದಾನ ಮಾಡಲಗುತ್ತಿದೆ. ಮನುಷ್ಯನ ಕಲ್ಪನೆಯ ಶಕ್ತಿಯನ್ನು ಹೊರಸೂಸುವ ಶಕ್ತಿ ಛಾಯಾಗ್ರಹಣದಲ್ಲಿದೆ. ಮೆದುಳಿನ ಕ್ರಿಯೆಯಿಂದ ಮಾನವನ ಸಾಧನೆ, ನಿರೀಕ್ಷೆ, ಗುರಿ ರೂಪಿತವಾಗಿದೆ. ಮನುಷ್ಯನಿಗೆ ಕಣ್ಣನ್ನು ಭಗವಂತ ನೀಡಿದ್ದಾನೆ ಅದರಲ್ಲಿ ಶಕ್ತಿ ಇದೆ ಅದನ್ನು ಸೂಕ್ತವಾಗಿ ನೈಜವಾಗಿ ಬಿಂಬಿಸಿದಾಗ ಮಾತ್ರ ಸೂಕ್ತವಾದ ಯಶ್ಸಸ್ಸು ಪಡೆಯಲು ಸಾದ್ಯ ಆಸಕ್ತ ಛಾಯಾ ಚಿತ್ರ ಪ್ರೇಮಿಗಳು ಆರ್ಟಗ್ಯಾಲರಿಗೆ ಬಂದು ವೀಕ್ಷಿಸಬಹುದು.
ಈ ಛಾಯಾಗ್ರಹಣಗಳ ಪ್ರದರ್ಶನಗಳಲ್ಲಿ ಕುಷ್ಟಗಿ, ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಹೀಗೆ ಹಲವಾರು ಕಡೆಗಳಿಂದ ಆಗಮಿಸಿದ ಛಾಯಾಚಿತ್ರಗಾರರು ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶನ ನೀಡುತ್ತಿದ್ದಾರೆ ಹೀಗಾಗಿ ಉತ್ತರಕರ್ನಾಟಕದಲ್ಲಿ 2005ರಿಂದ ಇಲ್ಲಿಯವರೆಗೆ ಯುವ ಹಾಗೂ ಎಲೆಮರೆಯ ಛಾಯಾಗ್ರಾಹಕರಿಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
ಇತ್ತಿಚೆಗೆ ಮೊಬೈಲ ಹಾವಳಿಯಿಂದ ಅನೇಕರು ಸೇಲ್ಪಿಗೆ ಮಾರುಹೊಗುತ್ತಿದ್ದು ಛಾಯಾಚಿತ್ರಗಳು ಹೆಚ್ಚು ಜನಪ್ರೀಯವಾಗುತ್ತಿವೆ ಆದರೆ ಅವುಗಳ ಬಳಕೆ ಸರಿಯಾಗಿ ಯಾಗುತ್ತಿಲ್ಲ ಒಬ್ಬ ಛಾಯಾಚಿತ್ರಗಾರನ ಕಲ್ಪನೆಯಲ್ಲಿ ಕ್ರಿಯಾಶೀಲತೆ ಇಲ್ಲದೆ ಉತ್ತಮ ಚಿತ್ರಗಳು ಮೂಡಿಬರುತ್ತಿಲ್ಲವೆಂಬ ಕೊರಗು ಇದೆ. ಅದನ್ನು ನಿಗಿಸುವ ನಿಟ್ಟಿನಲ್ಲಿ ಇಂತಂಹ ಛಾಯಾಚಿತ್ರಗಳ ಪ್ರದರ್ಶನ ಅಗತ್ಯವಾಗಿದ್ದು ಅದನ್ನು ದೃಷ್ಠಿ-ಸೃಷ್ಠಿ ಸಂಘಟನೆ ಮತ್ತು ಆರ್‍ಕೆ ಛಾಯಾ ಫೌಂಡೇಶನ್ ಮಾಡುತ್ತಿದ್ದು ಶ್ಲಾಂಘನೀಯ. 25 ಕ್ಕೂ ಹೆಚ್ಚು ಛಾಯಾಚಿತ್ರಗಾರರ 150 ಕ್ಕೂ ಹೆಚ್ಚು ಈ ಪ್ರದರ್ಶನದಲ್ಲಿ ಕಾಣಿಸುತ್ತಿದ್ದು ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಪುಷ್ಠಿಕೊಡುವಂತಾಗುವುದು ನಿಜ ಎಂದು ದೃಷ್ಠಿ ಸೃಷ್ಠಿಯ ಅನೀಲ ಕಿತ್ತೂರರವರು ಪ್ರಕಟನೆಯಲ್ಲಿ ಕೊರಿದ್ದಾರೆ.
ದಿನಾಂಕ:-11-08-2017
ದಿನಾಂಕ 20 ರಂದು “ಬಿಂಬ-ಭಾವ ಪ್ರಶಸ್ತಿ” “ಛಾಯಾ ಚಿತ್ರ ಪ್ರೇಮಿ ಪ್ರಶಸ್ತಿ” ಪ್ರಶಸ್ತಿ ಪ್ರಧಾನ ಸಮಾರಂಭ ಸಂಜೆ 4 ಘಂಟೆಗೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ
ಸ್ಥಳ: ಸುವರ್ಣ ಸಾಂಸ್ಕøತಿಕ ಸಮುಚ್ಛಯ ಭವನ ಧಾರವಾಡ.