Breaking News

ಸೆಪ್ಟೆಂಬರನಲ್ಲಿ ವಿವೇಕಾನಂದ ಸಿಸ್ಟರ ನಿವೇದಿತಾ ಸಾಹಿತ್ಯ ಸಮ್ಮೇಳನ

ಸೆಪ್ಟೆಂಬರನಲ್ಲಿ ವಿವೇಕಾನಂದ ಸಿಸ್ಟರ ನಿವೇದಿತಾ
ಸಾಹಿತ್ಯ ಸಮ್ಮೇಳನ:

ಬೆಳಗಾವಿ: ಯುವಾ ಬ್ರಿಗೇಡ್ ವತಿಯಿಂದ ಸ್ವಾಮಿ ವಿವೇಕಾನಂದ; ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಸೆ. 10,11 ರಂದು ಎರಡು ದಿವಸ ನಗರದ ಜೆಎನ್‍ಎಂಸಿ ಜೀರಗೆ ಸಭಾ ಭವನದಲ್ಲಿ ನಡೆಯಲಿದೆ ಎಂದು ಯುವ ಬ್ರಿಗೇಡನ ಅಧ್ಯಕ್ಷ ಸೂಲಿಬೆಲೆ ಚಕ್ರವರ್ತಿ ತಿಳಿಸಿದ್ದಾರೆ.
ಶುಕ್ರವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾನನಾಡಿದ ಅವರು, ತಮ್ಮ ಚಿಂತನೆಗಳಿಂದ ಮತ್ತು ಸೇವೆಯಿಂದ ಭಾರತವನ್ನಷ್ಟೆ ಅಲ್ಲ ಇಡೀ ಜಗತ್ತನ್ನೇ ಪ್ರಭಾವಕ್ಕೆ ಒಳಪಡಿಸಿದವರು ಸಂತ ವಿವೇಕಾನಂದರು. ಜಗತ್ತಿಗೆ ಭಾರತದ ಧರ್ಮವನ್ನು ಪಸರಿಸಿದವರು ಅವರಾಗಿದ್ದರು. ವಿವೇಕಾನಂದರ ಚಿಂತನೆಗೆ ಪ್ರಭಾವಿತರಾಗಿದ್ದ ಅವರ ಶಿಷ್ಯೆ ಸಿಸ್ಟರ್ ನಿವೇದಿತಾ ತನ್ನ ದೇಶ ಐರ್ಲೆಂಡ್ ಬಿಟ್ಟು ಭಾರತದ ಸೇವೆಗೆ ಇಡಿ ಜೀವನ ಸವೆಸಿದರು.
ಕ್ಷಾಮ, ಪ್ರವಾಹ ಮತ್ತು ಪ್ಲೇಗನಂತಹ ಸಂದರ್ಭ ನಿವೇದಿತಾ ಸೇವೆ ಅಪಾರವಾಗಿತ್ತು. ಈ ವರ್ಷ ಸಿಸ್ಟರ್ ನಿವೇದಿತಾ 150 ನೇ ಜಯಂತಿ. ಅದರನ್ವಯ ಯುವ ಬ್ರಿಗೇಡ್ ಹಾಗೂ ಸಿಸ್ಟರ್ ನಿವೇದಿತಾ ಪ್ರತಿಷ್ಠಾನ ವತಿಯಿಂದ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತ್ಯದ ಯಾತ್ರೆ ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಕಾಸರಗೋಡು, ಬೆಂಗಳೂರು, ಮಂಡ್ಯ, ಮೈಸೂರು, ಹುಬ್ಬಳ್ಳಿ ಮೂಲಕ ಬೆಳಗಾವಿಯಲ್ಲಿ ಸಮಾರೋಪಗೊಳ್ಳಲಿದೆ ಎಂದರು.
ಗೋಪಾಲ ಜಿನಗೌಡ, ಸುಬ್ರಾಯ ವಾಳ್ಕೆ, ಇತರರು ಉಪಸ್ಥಿತರಿದ್ದರು

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *