ಬೆಳಗಾವಿಯಲ್ಲಿ,ಖಾಕಿಗೆ ಖಾಕಿ ಸಾಥ್…
ಸಾರಿಗೆ ನೌಕರರ ಜೋಳಿಗೆಯಲ್ಲಿ ಖಾಸ್ ಬಾತ್..
ಬೆಳಗಾವಿ- ಬೆಳಗಾವಿಯಲ್ಲಿ ಸಾರಿಗೆ ನೌಕರರ ಮುಷ್ಕರ ಇಂದು ಬೆಳಿಗ್ಗೆಯಿಂದಲೇ ಮುಂದುವರೆದಿದ್ದು ಇವರ ಹೋರಾಟ ಕ್ಷಣ ಕ್ಷಣಕ್ಕೂ ಹೊಸ ಆಯಾಮ,ಹೊಸ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಸಾರಿಗೆ ನೌಕರರು ರಾಜ್ಯವ್ಯಾಪಿ ಹೋರಾಟ ನಡೆಸಿದ್ದು,ಬೆಳಗಾವಿಯಲ್ಲೂ ಇವರ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿದೆ.
ಇಂದು ಬೆಳಿಗ್ಗೆಯಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ,ಊಟ,ಉಪಹಾರದ ವ್ಯೆವಸ್ಥೆ ಮಾಡಲು ಜೋಳಗಿ ಹಿಡಿದು ಸಾರಿಗೆ ನೌಕರರಿಂದ ಚಂದಾ ಸಂಗ್ರಹಿಸಲಾಯಿತು.
ಧರಣಿ ನಿರತ ನೌಕರರು ಜೋಳಗಿಯಲ್ಲಿ ದುಡ್ಡು ಹಾಕಿದ್ರು,ಈ ಧರಣಿಯ ಬಂದೋಬಸ್ತಿಗಾಗಿ ಅಲ್ಲಿಯೇ ಇದ್ದ ಪೋಲೀಸಪ್ಪ,ಜೋಳಿಗೆ ಅವನ ಎದುರು ಬರುತ್ತಿದ್ದಂತೆಯೇ ಜೇಬಿನಿಂದ ನೂರರ ನೋಟು ತೆಗೆದು ಜೋಳಿಗೆಯಲ್ಲಿ ಹಾಕುತ್ತಿದ್ದಂತೆಯೇ ಧರಣಿ ನಿರತ ನೌಕರರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಖಾಕಿಗೆ,ಖಾಕಿ ಯಾವಾಗಲೂ ಸಾಥ್ ಕೊಡುತ್ತದೆ ಎನ್ನುವದನ್ನು ಪೋಲೀಸಪ್ಪನ ಉದಾರತೆ ಸಾಭೀತು ಪಡಿಸಿತು,