Breaking News

ಪ್ರಭಾಶುಗರ ಅಧ್ಯಕ್ಷರಾಗಿ ಅಶೋಕ ಪಾಟೀಲ, ಉಪಾಧ್ಯಕ್ಷರಾಗಿ ರಾಮಣ್ಣಾ ಮಹಾರಡ್ಡಿ ಪುನರಾಯ್ಕೆ

ಗೋಕಾಕ* : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಸೋಮವಾರದಂದು ಸಕ್ಕರೆ ಕಾರ್ಖಾನೆಯ ಸಭಾಂಗಣದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ ಅವರು ಪ್ರಕಟಿಸಿದರು.

ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಶೋಕ ಪಾಟೀಲ ಹಾಗೂ ರಾಮಣ್ಣಾ ಮಹಾರಡ್ಡಿ ಮಾತನಾಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ನಿರ್ದೇಶಕ ಮಂಡಳಿ ಸದಸ್ಯರಾದ ಕೆಂಚನಗೌಡ ಶಿವನಗೌಡ ಪಾಟೀಲ, ಗಿರೀಶ ವೆಂಕಪ್ಪ ಹಳ್ಳೂರ, ಜಗದೀಶ ಕೃಷ್ಣಪ್ಪ ಬಂಡ್ರೊಳ್ಳಿ, ಬಸನಗೌಡ ಶಿವನಗೌಡ ಪಾಟೀಲ, ಭೂತಪ್ಪ ತಮ್ಮಣ್ಣ ಗೋಡೇರ, ಮಲ್ಲಿಕಾರ್ಜುನ ಭೀಮಪ್ಪ ಕಬ್ಬೂರ, ಮಹಾದೇವಪ್ಪ ರಾಜಪ್ಪ ಭೋವಿ, ಮಾಳಪ್ಪ ಉದ್ದಪ್ಪ ಜಾಗನೂರ, ಯಲ್ಲವ್ವ ಭೀಮಪ್ಪ ಸಾರಾಪೂರ, ಲಕ್ಕವ್ವಾ ಲಕ್ಷ್ಮಣ ಬೆಳಗಲಿ, ಲಕ್ಷ್ಮಣ ಯಲ್ಲಪ್ಪ ಗಣಪ್ಪಗೋಳ, ಶಿದ್ಲಿಂಗಪ್ಪ ಸಿದ್ದಪ್ಪ ಕಂಬಳಿ, ಶಿವಲಿಂಗಪ್ಪ ವೆಂಕಪ್ಪ ಪೂಜೇರಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ರಾವುತನವರ ಅವರು ಉಪಸ್ಥಿತರಿದ್ದರು.

*

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *