Breaking News

ಜನೆವರಿ 3 ರಂದು ಕೆಎಲ್ಇ ಡಾ.  ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆ

ಬೆಳಗಾವಿ-ಕೆಎಲ್ಇ ಡಾ. ಸಂಪತಕುಮಾರ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನೆಯ ಸಮಾರಂಭವನ್ನು 30 ಡಿಸೆಂಬರ್ 2024 ರಂದು ನಿಗದಿಪಡಿಸಲಾಗಿತ್ತು. ಆದರೆ ಭಾರತದ ಮಾಜಿ ಪ್ರಧಾನಿಗಳಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ನಿಧನದ ಕಾರಣದಿಂದ, ಈ ಆಸ್ಪತ್ರೆಯ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ 3 ಜನವರಿ, 2025ಕ್ಕೆ ಮರುನಿಗದಿಪಡಿಸಲಾಗಿದೆ.

ಭಾರತದ ಗೌರವಾನ್ವಿತ ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಆಸ್ಪತ್ರೆಯನ್ನು ಶುಕ್ರವಾರ, 3 ಜನವರಿ, 2025 ರಂದು ಮಧ್ಯಾಹ್ನ 4.೦೦ ಗಂಟೆಗೆ ಉದ್ಘಾಟಿಸಲಿದ್ದಾರೆ.

ಈಗಾಗಲೇ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿದ್ದು, ಅದನ್ನು ಶುಕ್ರವಾರ 3 ಜನವರಿ, 2025 ಎಂದು ತಿಳಿಯಬೇಕು. ಅಲ್ಲದೆ ಸಮಾರಂಭವ ಪ್ರವೇಶ ಪತ್ರವು ಕೂಡ ಆಮಂತ್ರಣ ಪತ್ರಿಕೆಯೇ ಆಗಿರುತ್ತದೆ. ನೀರಿನ ಬಾಟಲ್, ಕೈಚೀಲ, ಛತ್ರಿ, ಮೊಬೈಲ್ ಇನ್ನಿತರ ವಸ್ತುಗಳನ್ನು ನಿಷೇದಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಆಮಂತ್ರಿತರು ಮಧ್ಯಾಹ್ನ 3.೦೦ ಗಂಟೆಯೊಳಗಾಗಿ ಆಗಮಿಸಲು ಕೋರಲಾಗಿದೆ.
ಕೆಎಲ್ಇ ಸಂಸ್ಥೆಯ ಗೌರವಾನ್ವಿತ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Check Also

ಉಳವಿ ಭಕ್ತರ ಮನವಿಗೆ ಸ್ಥಳದಲ್ಲೇ ಸ್ಪಂದಿಸಿದ ಸತೀಶ್ ಜಾರಕಿಹೊಳಿ

ಬೆಳಗಾವಿ – ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ನಿರಂತರವಾಗಿ ಸಾವಿರಾರು ಭಕ್ತರು ಹೋಗ್ತಾರೆ,ಅದರಲ್ಲೂ ಬೆಳಗಾವಿ,ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು …

Leave a Reply

Your email address will not be published. Required fields are marked *