ಬೆಳಗಾವಿ
ಸೆ.15 ಅಖಿಲಭಾರತ ಕನ್ನಡ ಭವನ ಉದ್ಘಾಟನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೆರವೆರಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.
ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉದ್ಘಾಟನೆಗೆ ಕಸಾಪದ ಅಧ್ಯಕ್ಷ ಮನು ಬಳಿಗಾರ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದರು.
3.ಕೋಟಿ 40 ಲಕ್ಷ ರು.ಗಳಲ್ಲಿ ಭವನ ನಿರ್ಮಾಣವಾಗಿದೆ. ಇದರ ಸದುಪಯೋಗ ಪಡೆಸಿಕೊಳ್ಳಬೇಕಿದೆ. ಕನ್ನಡ ಕಾರ್ಯಕ್ರಮಗಳನ್ನು ನಡೆಸುವಾಗ ಇಂತಿಷ್ಟ ಬಾಡಿಗೆ ರೂಪದಲ್ಲಿ ನೀಡಲಾಗುವುದು. ಕಾರಣ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು.
ಕನ್ನಡ ಸಂಸ್ಕೃತಿ, ನಾಟಕಗಳನ್ನು ನಡೆಸುವುದಕ್ಕೆ ಈ ಭವನ ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದರು.
ಬಿಜೆಪಿಗೆ ರಮೇಶ ಜಾರಕಿಹೊಳಿ ಬಂದರೆ ಅತ್ಯಂತ ಸ್ವಾಗತವಿದೆ. ರಾಜಕೀಯವಾಗಿ ಜಾರಕಿಹೊಳಿ ಸಹೋದರರು ನನ್ನ ಸಂಪರ್ಕದಲ್ಲಿ ಇಲ್ಲ.
ಮೂಲ ಕಾಂಗ್ರೆಸಿಗರೂ ಆ ಪಕ್ಷದಲ್ಲಿ ಯಾರೂ ಇಲ್ಲ. ವೀರೇಂದ್ರ ಪಾಟೀಲರ ಸರಕಾರ ಕೆಳಗಿಳಿಸಲು ವಸಂತರಾವ್ ಪಾಟೀಲ ರಾಜೀನಾಮೆಯೇ ಕಾರಣ.
ಬೆಳಗಾವಿಯಿಂದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ಬೆಳಗಾವಿಯದ್ದೆ ಇದೆ. ಆದರೆ ಬೆಳಗಾಯಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ