ದಾಣಗೇರೆ ಉತ್ಸವದ ಆಯ್ತು....ಇನ್ಮುಂದೆ ಬೆಳಗಾವಿಯಲ್ಲೂ ಉತ್ಸವ…!!
ಬೆಳಗಾವಿ-ದಾವಣಗೇರೆಯಲ್ಲಿ ಸಿದ್ರಾಮೋತ್ಸವ ನಡೆದ ಬೆನ್ನಲ್ಲಿಯೇ ಈಗ ಬೆಳಗಾವಿಯಲ್ಲೂ ಮತ್ತೊಂದು ಉತ್ಸವ ನಡೆಸಲು ಎಲ್ಲ ರೀತಿಯ ತಯಾರಿ ನಡೆಯುತ್ತಿದೆ.
ಬಿಜೆಪಿ ಮುಖಂಡ,ಮಾಜಿ ರಾಜ್ಯಸಭಾ ಸದಸ್ಯ, ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ,ಲಿಂಹಾಯತ ಸಮುದಾಯದ ಕೆಎಲ್ಇ ಸಂಸ್ಥೆಯನ್ನು ಹಳ್ಳಿಯಿಂದ ದುಬೈವರೆಗೂ ವಿಸ್ತರಿಸಿ,ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ಪ್ರಭಾಕರ ಕೋರೆ ಅವರ 75 ನೇಯ ಜನ್ಮೋತ್ಸವವನ್ನು ಸಿದ್ರಾಮೋತ್ಸವದ ಮಾದರಿಯಲ್ಲೇ ಆಯೋಜಿಸಲು ಪ್ರಭಾಕರ ಕೋರೆ ಅಭಿಮಾನಿಗಳು ನಿರ್ಧರಿಸಿದ್ದಾರೆ.
ಪ್ರಭಾಕರ ಕೋರೆ ಅವರು ಅಗಸ್ಟ 1ರಂದು ಸರಳವಾಗಿ 75 ನೇಯ ಜನುಮ ದಿನವನ್ನು ಆಚರಿಸಿಕೊಂಡಿದ್ದಾರೆ.ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮೀತ ಶಾ ಅಥವಾ ಪ್ರಧಾನಿ ನರೇಂದ್ರ ಮೋದಿ,ಮತ್ತು ನಿತೀನ್ ಗಡ್ಕರಿ ಅವರನ್ನು ಅಹ್ವಾನಿಸಿ ಪ್ರಭಾಕರ ಕೋರೆ ಅವರ 75 ನೇಯ ಜನ್ಮೋತ್ಸವವನ್ನು ಆಚರಿಸಲು ಗಣ್ಯರಿಂದ ಡೇಟ್ ಪಡೆಯಲಾಗುತ್ತಿದೆ.
ಪ್ರಭಾಕರ ಕೋರೆ ಅವರ ಜನ್ಮೋತ್ಸವ ಆಚರಿಸುವ ಮೂಲಕ ಬಿಜೆಪಿ ಕೂಡಾ ರಾಜ್ಯದಲ್ಲಿ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ನಿನ್ನೆ ದಾವಣಗೇರೆಯಲ್ಲಿ ನಡೆದ ಸಿದ್ರಾಮೋತ್ಸವ ಕೆಲವರಿಗೆ ನಡುಕ ಹುಟ್ಟಿಸಿದ್ದು ಇನ್ನು ಕೆಲವರಿಗೆ ದಾವಣಗೇರೆಯ ಉತ್ಸವ ಸ್ಪೂರ್ತಿ ನೀಡಿದೆ.
ಅತೀ ದೊಡ್ಡ ಸಮಾವೇಶಕ್ಕೆ ದಾವಣಗೇರೆ ಸಾಕ್ಷಿಯಾದಂತೆ,ಬೆಳಗಾವಿಯೂ ಮತ್ತೊಂದು ದೊಡ್ಡ ಉತ್ಸವಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿವೆ.