ಬೆಳಗಾವಿ ಆ., 28- ವೀರಶೈವ ಸಮಾಜದ ಹಿರಿಯರಾದ ಪ್ರಫುಲ್‍ಕುಮಾರ ವಿರುಪಾಕ್ಷಪ್ಪಾ ಜತ್ತಿ(78) ಯವರು ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ರಾಜ್ಯ ಸರಕಾರದ ನೀರಾವರಿ ಇಲಾಖೆಯಲ್ಲಿ ಮುಖ್ಯ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ವೀರಶೈವ ಮಹಾಸಭೆಯ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಪಿ.ವಿ.ಜತ್ತಿಯವರು ಹೆಂಡತಿ, ಇಬ್ಬರು ಗಂಡು ಮಕ್ಕಳು, ಮಗಳು, ಸೊಸೆ, ಅಳಿಯಂದಿರು, ಇಬ್ಬರು ಮೊಮ್ಮಕ್ಕಳನ್ನು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆಯು ನಗರದ ಸದಾಶಿವನಗರದ ರುದ್ರಭೂಮಿಯಲ್ಲಿ ಸಂಜೆ ಜರುಗಿತು. ಅಂತ್ಯಕ್ರಿಯೆಯಲ್ಲಿ ಕಾರಂಜಿ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು, ಭಾಗವಹಿಸಿದ್ದರು.
