Breaking News

ಪ್ರಕಾಶ್ ಹುಕ್ಕೇರಿ ವಿರುದ್ಧ, ಖತ್ತಲ್ ರಾತ್ರಿಯಲ್ಲಿ ಹಣ ಹಂಚಿಕೆಯ ಆರೋಪ….!!!

ಬೆಳಗಾವಿ- ಉತ್ತರ ಕರ್ನಾಟಕದ ಭಾಗದಲ್ಲಿ ಮತದಾನದ ಮುನ್ನಾ ದಿನದ ರಾತ್ರಿಯನ್ನು ಖತ್ತಲ್ ರಾತ್ರಿ ಎಂದು ಕರೆಯುತ್ತಾರೆ.ಯಾಕಂದ್ರೆಈ ರಾತ್ರಿ ಮತದಾರರನ್ನು ಸಂತೈಸಲು ಅಭ್ಯರ್ಥಿಗಳು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ.ವಿಶೇಷವಾಗಿ ಹಣ ಹಂಚಿಕೆಯ ಕೊನೆಯ ಪ್ರಯತ್ನ ನಡೆಯುವದು ಇದೇ ಖತ್ತಲ್ ರಾತ್ರಿಯಲ್ಲಿ ಎನ್ನುವದು ವಿಶೇಷ…

ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಬಿಜೆಪಿಯ ಅರುಣ ಶಹಾಪೂರ,ಕಾಂಗ್ರೆಸ್ಸಿನ ಪ್ರಕಾಶ್ ಹುಕ್ಕೇರಿ,ಪಕ್ಷೇತರ,ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಬನ್ನೂರ ನಡುವೆ ತ್ರಿಕೋಣ ಸ್ಪರ್ದೆ ಏರ್ಪಟ್ಟಿದೆ.ಈ ಮೂವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಇಳಿ ವಯಸ್ಸಿನಲ್ಲೂ ಕುದುರೆ ಓಡಾಡಿದಂತೆ ಓಡಾಡುತ್ತಿದ್ದಾರೆ.ಗೆಲುವಿಗಾಗಿ ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ.ವಿಜಯಪೂರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಹಣ ಹಂಚಿಕೆ ಮಾಡಿದೆ ಎಂದು ಶಾಸಕ ಅಭಯ ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.

ವಿಜಯಪೂರದಲ್ಲಿ ಇರುವ ಕಾಂಗ್ರೆಸ್ ನಾಯಕನ ಫಾರ್ಮಹೌಸ್ ನಲ್ಲಿ 17.40 ಲಕ್ಷ ₹ ಹಣದ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಯ ಕರ ಪತ್ರಗಳು ಸಿಕ್ಕಿದ್ದು ,ಪ್ರಕಾಶ್ ಹುಕ್ಕೇರಿ ಅವರನ್ನು ಚುನಾವಣಾ ಕಣದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಚುನಾವಣಾ ಅಧಿಕಾರಿ ಅಮಲನ್ ಬಿಸ್ವಾಸ್ ಅವರಿಗೆ ದೂರು ನೀಡಿದೆ.

ಪ್ರಕಾಶ್ ಹುಕ್ಕೇರಿ ಅವರ ಓಡಾಟ ನೋಡಿದ ಬಿಜೆಪಿ ನಿನ್ನೆ ಸಿಎಂ ಬೊಮ್ಮಾಯಿ ಅವರನ್ನು ಬೆಳಗಾವಿಗೆ ಕರೆಯಿಸಿ ಕೆ.ಎಲ್.ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರನ್ನು ಈ ಚುನಾವಣೆಯಲ್ಲಿ ಸಂಪೂರ್ಣವಾಗಿ ಸದುಪಯೋಗ ಮಾಡಿಕೊಳ್ಳುವ ಕಸರತ್ತು ಕೂಡಾ ನಡೆಯಿತು.ಸಿಎಂ ಬೊಮ್ಮಾಯಿ ಪ್ರಚಾರದ ಕೊನೆಯ ದಿನ ಬೆಳ್ಳಂ ಬೆಳಗ್ಗೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಪ್ರಭಾಕರ ಕೋರೆ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿ ನಂತರ ಜೀರಗೆ ಭವನದಲ್ಲಿ ಬೃಹತ್ ಪ್ರಚಾರ ಸಭೆ ನಡೆಸಿ ಪ್ರಭಾಕರ ಕೋರೆ ಅವರು ಬಿಜೆಪಿ ಅಭ್ಯರ್ಥಿಗಳಾದ ಅರುಣ ಶಹಾಪೂರ,ಮತ್ತು ಹಣಮಂತ ನಿರಾಣಿ ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು, ಪ್ರಕಾಶ್ ಹುಕ್ಕೇರಿ ಮ್ಯಾಟ್ರಿಕ್ ಫೇಲ್ ಎಂದು,ಅರುಣ ಶಹಾಪೂರ್ ಅವರನ್ನು ಹೊಗಳಿದ ನಂತರ,,ಬಿಜೆಪಿ ನಾಯಕರು ನಮ್ಮ ಇಬ್ನರೂ ಅಭ್ಯರ್ಥಿಗಳು ಗೆಲ್ಲುತ್ತಾರೆ.ಎಂದು ಹೇಳತೊಡಗಿದರು.

ಪ್ರಕಾಶ್ ಹುಕ್ಕೇರಿ ವರ್ಕರ್,ಅವರೊಬ್ಬ ಕೆಲಸಗಾರ,ಶಾಸಕರಾಗಿ,ಮಂತ್ರಿಯಾಗಿ,ಸಂಸದರಾಗಿ ,ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ, ಅವರೊಬ್ಬ ಕೆಲಸಗಾರ, ಮಹಾನ್ ಸೇವಕ ಎನ್ನುವ ಇಮೇಜ್ ಕೂಡಾ ಇದೆ.ಪ್ರಕಾಶ್ ಹುಕ್ಕೇರಿ ಅವರ ಸಮಾಜ ಸೇವೆಯನ್ನು ಎಲ್ಲರೂ ಪ್ರಶಂಸೆ ಮಾಡುತ್ತಾರೆ.ಆದ್ರೆ ಈ ಚುನಾವಣೆಯಲ್ಲಿ ಬಿಜೆಪಿ ನಾಯಕರು ಪ್ರಕಾಶ್ ಹುಕ್ಕೇರಿ ಅವರನ್ನು ಮುದಿ ಎತ್ತು,ಮ್ಯಾಟ್ರೀಕ್ ಫೇಲ್,ಅವರು ಕೇವಲ ಹತ್ತು ಹೆಜ್ಜೆ ನಡೆದು ತೋರಿಸಲಿ, ಪ್ರಕಾಶ್ ಹುಕ್ಕೇರಿ ಶಿಕ್ಷಕರು ಅಲ್ಲ,ಎನ್ನೂವ ಆರೋಪ ಮಾಡಿದ್ದರು.ಈಗ ಬಿಜೆಪಿ ಪ್ರಕಾಶ್ ಹುಕ್ಕೇರಿ ಹಣ ಹಂಚಿಕೆ ಮಾಡಿದ್ದಾರೆ,ಎನ್ನುವ ಆರೋಪ ಮಾಡಿ,ಅವರನ್ನು ಚುನಾವಣೆಯ ಕಣದಿಂದಲೇ ವಜಾ ಮಾಡಬೇಕು ಎಂದು ಪಟ್ಡು ಹಿಡಿದಿದೆ.

ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ ಶಿಕ್ಷಕರ ಪರವಾಗಿ ಕೆಲಸ ಮಾಡಿಲ್ಲ,ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿಲ್ಲ, ಅಧಿಕಾರದ ಅವಧಿಯಲ್ಲಿ ಶಿಕ್ಷಕರನ್ನು ಭೇಟಿಯಾಗಿಲ್ಲ ಎಂದು ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರದ ಅವಧಿಯಲ್ಲಿ ಅರುಣ ಶಹಾಪೂರ ಅವರನ್ನು ಟೀಕಿಸಿದ್ದರು.

ವಾಯುವ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರು ವ್ಯವಸ್ಥಿತವಾಗಿ ಪ್ರಚಾರ ಮಾಡಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ್ ಅವರು ವಾಯುವ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ,ವಿಜಯಪುರ, ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದಾರೆ,ಮತಯಾಚನೆ ಮಾಡಿದ್ದಾರೆ.

ವಾಯುವ್ಯ ಶಿಕ್ಷಕರ ಮತಕ್ಷೇತ್ರ ಈಗ ತೀವ್ರ ಕುತೂಹಲ ಕೆರಳಿಸಿದೆ.ಇಲ್ಲಿ ತ್ರಿಕೋಣ ಸ್ಪರ್ದೆ ಏರ್ಪಟ್ಟಿದೆ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆದಿದ್ದು, ಮೂವರಲ್ಲಿ ಯಾರು ಪಾಸ್ ಆಗ್ತಾರೆ,ಯಾರು ಫೇಲ್ ಆಗ್ತಾರೆ, ಎನ್ನುವದನ್ನು ಕಾಯ್ದು ನೋಡಬೇಕಾಗಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *