Breaking News

ಬಿಜೆಪಿ ಬೆಂಬಲಿಸದಂತೆ ಬಹುಭಾಷಾ ನಟ ಪ್ರಕಾಶ ರೈ ಸಲಹೆ

ಬೆಳಗಾವಿ-ಕೇಂದ್ರದಲ್ಲಿ  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ನೀಡಿದ ಭವರಸೆಗಳನ್ನು ಈಡೇರಿಸದೇ ಕೋಮು ಸಂರ್ಘಗಳು ಹೆಚ್ಚಾಗುವುದಕ್ಕೆ ಕಾರಣವಾಗಿರುವ ಬಿಜೆಪಿ  ಪಕ್ಷಕ್ಕೆ ನಾಗರಿಕರು ಬೆಂಬಲಿಸದಂತೆ ಬಹುಭಾಷಾ ಖ್ಯಾತ ನಟ ಪ್ರಕಾಶ ರೈ ಸಲಹೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಸ್ತುತ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುವುದಿಲ್ಲ. ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸುವುದು ಖಚಿತ. ಈಗಾಗಲೇ ಬಿಜೆಪಿ ವಿರುದ್ದ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಪ್ರತಿರೋಧ ವ್ಯಕ್ತವಾಗುತ್ತಿದೆ. ನನ್ನನ್ನು ಬೆಂಬಲಿಸುವವರಿಗೆ ಇಂಥಹದೇ ಪಕ್ಷವನ್ನು ಬೆಂಬಲಿಸಿ ಎಂದು ಹೇಳುವುದಿಲ್ಲ. ಬದಲಾಗಿ ಬಿಜೆಪಿಯನ್ನು ವಿರೋಧಿಸಿ ಎಂದು ಮಾತ್ರ ಹೇಳುವೆ ಎಂದು ಹೇಳಿದ್ದಾರೆ.

ಸಂವಿಧಾನಾತ್ಮಕವಾಗಿ ಪ್ರಮಾಣವಚನ ಸ್ವೀಕರಿಸಿ, ಸಂವಿಧಾನ ಬದಲಿ ಎಂದು ಹೇಳಿದವರನನು ಹೇಗೆ ನಂಬಲು ಸಾಧ್ಯ? ಇಂಥ ಹೇಳಿಕೆ ನೀಡುವವರ ಮೇಲೆ ಕ್ರಮ ತೆಗೆದುಕೊಳ್ಳದ ಪಕ್ಷ ಸಾಮಾಜಿಕ ಹಿತಾಸಕ್ತಿ ಹೇಗೆ ಕಾಪಾಡಲು ಸಾಧ್ಯ. ಇಂಥ ಪಕ್ಷ ಅಧಿಕಾರದಲ್ಲಿರುವುದು ಸೂಕ್ತವಲ್ಲ. ತಮ್ಮ ಹೋರಾಟ ಯಾವುದೇ ರಾಜಕೀಯ ಪಕ್ಷದ ಪರವಾದುದಲ್ಲ.  ತಾವು ಯಾವ ರಾಜಕೀಯ ಪಕ್ಷಕ್ಕೂ ಸೇರುವುದಿಲ್ಲ. ಕೋಮಭಾವ ವಿನಾಶಕ್ಕೆ ಜನಜಾಗೃತಿ ಅಭಿಯಾನ ನಡೆಸುತ್ತಿದ್ದು,  ಮುಂಬರುವ ದಿನಗಳಲ್ಲಿ ಹಲವಾರ ಪ್ರಜ್ಞಾವಂತರು ಇದಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ರೈ ಹೇಳಿದ್ದಾರೆ.

ಇಂದು ದೇಶಕ್ಕೆ ರಾಷ್ಟ್ರೀಯ ಪಕ್ಷಗಳ ಅವಶ್ಯಕತೆಯಿಲ್ಲ. ಸ್ಥಳೀಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಂಡು ಒಕ್ಕೂಟ ವ್ಯವಸ್ಥೆಯ ಹಿತಾಸಕ್ತಿ ಕಪಾಡಿಕೊಂಡು ಹೋಗುವ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದ ಅವರು, ಗೌರಿ ಲಂಕೇಶ ಹತ್ಯೆ ಆಘಾತ ತಂದಿದೆ. ಸಾವನ್ನು ವಿಜೃಂಭಿಸುವುದು ಮನುಷ್ಯತ್ವದ ಲಕ್ಷಣವಲ್ಲ. ಇನ್ನೊಬ್ಬ ಗೌರಿ ಹತ್ಯೆಯಾಗದಂತೆ ತಾವು ಹೋರಾಟದ ಕಣಕ್ಕೆ ಇಳಿಯಬೇಕಾಯಿತು ಎಂದು ಹೇಳಿದರು.

ತಮಿಳುನಾಡಿನಲ್ಲಿ ಕಾವೇರಿ  ನೀರಿನ ಹಂಚಿಕೆ ವಿಷಯ ಕುರಿತು ಕಲಾವಿದರು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ರೈ ಅವರು, ಯಾವುದೇ ರಾಜಕೀಯ ಪಕ್ಷಕ್ಕೆ ವಾಸ್ತವಾಗಿ ಕಾವೇರಿ ನದಿ ನೀರಿನ ಹಂಚಿಕೆ ಬಗೆ ಹರಿಸುವ ಉದ್ದೇಶ ಇಲ್ಲ. ರಾಜಕೀಯ ಉದ್ದೇಶಕ್ಕೆ ಬಳಗೆ ವಸ್ತವಾಗಿದೆ. ಕಾವೇರಿ ಬಗ್ಗೆ ಕಾಳಜಿ ಇದ್ದರೆ ತಜÐರ ಜೊತೆ ಸೇರಿ ಸೂಕ್ತ ರ್ಚೆಚೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಅದು ಪಕ್ಷಗಳಿಗೆ ಬೇಕಾಗಿಲ್ಲ. ಪರಿಸರ ನಾಶ, ಅಕ್ರಮ ಮರಳು ದಂಧೆ, ಗಣಿಗಾರಿಕೆಗಳ ಕಾರಣದಿಂದಾಗಿ ಕಾವೇರಿ ನದಿ ನೀರು ಕೊರತೆಯುಂಟಾಗುವ ದೊಡ್ಡ ಸಮಸ್ಯೆ ಎದುರಾಗುತ್ತಿದೆ.  ಈ ದಂಧೆಗಳನ್ನು ನಿಲ್ಲಿಸಲು ಸೂಕ್ತಕ್ರಮ ತೆಗೆದುಕೊಂಡು ಕಾವೇರಿ ನದಿ ಯಾವತ್ತೂ ತುಂಬಿ ಹರಿಯುವಂತೆ ಸರ್ಕಾರಗಳು ಮಾಡುವುದಿಲ್ಲ ಎಂದು ಪ್ರಕಾಶ ರೈ ಆರೋಪಿಸಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *