Breaking News

ರಾಜಕೀಯಕ್ಕೆ ಬರುವ ಮೊದಲು ಡಿಕೆಶಿ ಆಸ್ತಿ ಎಷ್ಟಿತ್ತು ?- ಪ್ರಲ್ಹಾದ ಜೋಶಿ ಪ್ರಶ್ನೆ

ಅವರೇನು ಸತ್ಯ ಹರಿಶ್ಚಂದ್ರ ಅಲ್ಲ,
ಆಸ್ತಿ ಸಾಮ್ರಾಜ್ಯದಂತೆ ವಿಸ್ತರಿಸಿದೆ ಏಲಿಂದ ಬಂತು: ತಿವಿದ ಜೋಶಿ

ಬೆಳಗಾವಿ:
ಅಕ್ರಮ ಆಸ್ತಿ ವಿವಾದದ ಪ್ರಕರಣ ಇನ್ನೂ ಕೊರ್ಟ್ ನಲ್ಲಿದೆ ಅದಕ್ಕಾಗಿ ಸಿಬಿಐ ದಾಳಿ ನಡೆಸಿದ್ದಾರೆ.‌ ರಾಜಕೀಯಕ್ಕೆ ಬರುವ ಮೊದಲು ಡಿಕೆಶಿ ಆಸ್ತಿ ಎಷ್ಟಿತ್ತು ಸ್ಪಷ್ಟಪಡಿಸಲಿ , ಅಧಿಕಾರಕ್ಕೆ ಬಂದ್ ಬಳಿಕ ಆಸ್ತಿ ಸಾಮ್ರಾಜ್ಯದಂತೆ ವಿಸ್ತರಿಸಿದೆ ಏಲಿ ಬಂತು ಎಂದು ಸ್ಪಷ್ಟವಾಗಿ ಹೇಳಲಿ ಅವರೇನು ಸತ್ಯ ಹರಿಶ್ಚಂದ್ರಲ
ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಡಿ.ಕೆ.ಶಿಗೆ
ತುವಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಬಂಧನ ಆಗುತ್ತದೆ ನಾ ಎಂಬ ಮಾಧ್ಯಮದವರ ಪ್ರಶ್ನೆಗೆ ನಾನೆಲ್ಲಿ ಹೇಳಿದ್ದೇನೆ ಎನ್ನುವ ಉತ್ತರ ನೀಡುವ ಮೂಲಕ ಜಾರಿಕೊಂಡರು.
ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತಂತ್ರಗಾರಿಕೆ ಬಳಸಿ ಮನೆಗಳ ಮೇಲೆ ದಾಳಿ ಮಾಡಿಸುತ್ತದೆ ಎನ್ನುವ ಕಾಂಗ್ರೆಸ್ ಆರೋಪ ಇದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವ್ಯಕ್ತಿಯ ಮನೆ ಮೇಲೆ ದಾಳಿ ಮಾಡುವ ಮುಂಚೆ ಮೊದಲೇ ಆರು ತಿಂಗಳ ದಾಳಿ ಮಾಡುವ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಂಡಿರುತ್ತಾರೆ. ಅವರ ಆಸ್ತಿ ಎಲ್ಲಿದೆ ಎನಿದೆ ಎನ್ನುವದನ್ನು ಮಾಹಿತಿ ಕೂಡಾ ಕಲೆ ಹಾಕುತ್ತಾರೆ ಹಾಗೂ ಆಲೋಚನೆ ಮಾಡಲಾಗುತ್ತದೆ. ಆದರೆ ದಾಳಿ ಎಂದಾಕ್ಷಣ ಅದೇ ಕ್ಷಣದಲ್ಲಿ ದಾಳಿ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು

ಜಿಲ್ಲೆಯ ಮಹದಾಯಿ ನದಿ ವಿಚಾರವಾಗಿ ಕೇಂದ್ರ ಸರಕಾರ ಉಪ ಚುನಾವಣೆ ಸಂದರ್ಭದಲ್ಲಿ ಆದೇಶ ಮಾಡಿ ಉಪಚುನಾವಣೆ ಮುಗಿದ ಬಳಿಕ ಆದೇಶ ವಾಪಸ ಪಡೆಯುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರಹ್ಲಾದ ಜೋಶಿ ಅವರು ಸಮರ್ಪಕವಾಗಿ ಉತ್ತರ ನೀಡಲಿಲ್ಲ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *