ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿ ವಿಚಾರ.
ಕಾನೂನಿನಲ್ಲಿ ಕೆಲ ಒಳ್ಳೆಯ ಅಂಶ ಕಾನೂನಿನಲ್ಲಿ ಇವೆ.
ಕೆಲವೊಂದು ಲೋಪಗಳು ಸಹ ಕಾನೂನಲ್ಲಿ ಇವೆ.
ಕಸಾಯಿ ಖಾನೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
13 ವರ್ಷದ ಮೇಲ್ಪಟ್ಟ ಗೋವುಗಳ ಹತ್ಯೆಗೆ ಅವಕಾಶ.
ಇದು ಸರಿಯಾದ ಕ್ರಮ ಅಲ್ಲ ಬ್ಯಾನ್ ಅಂದ್ರೆ ಸಂಪೂರ್ಣವಾಗಿ ಬ್ಯಾನ್ ಆಗಬೇಕು ಎಂದುಬೆಳಗಾವಿಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,
ರಫ್ತು ಸಹ ಸಂಪೂರ್ಣ ಬ್ಯಾನ್ ಆಗಬೇಕು.
ಚೆಕ್ ಪೋಸ್ಟ್ ಗಳಲ್ಲಿ ಬೀಗಿ ಕ್ರಮ ಕೈಗೊಳ್ಳಬೇಕು.
ದುಡ್ಡು ತಗೊಂಡು ಬಿಡುವ ಕೆಲ ಆಗುತ್ತಿದೆ.
ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚನೆ ಮಾಡಬೇಕು.ಎಂದು ಪ್ರಮೋದ ಮುತಾಲಿಕ ಒತ್ತಾಯಿಸಿದರು.
ಜನವರಿ 1 ರಂದು ಹೊಸ ವರ್ಷ ನಮ್ಮದಲ್ಲ ಅಂತ ಎಲ್ಲರಿಗೂ ಗೊತ್ತಿದೆ.ದುರ್ದೈವದ ಸಂಗತಿ ಎಂದರೇ ಅನೇಕ ದೇವಾಲಯ ಆಚರಣೆ ಮಾಡಿವೆ. ಧರ್ಮಸ್ಥಳ, ಇಸ್ಕಾನ್ ಹೊಸ ವರ್ಷದ ಆಚರಣೆ ಮಾಡಿದ್ದು ನೋವಿನ ಸಂಗತಿಯಾಗಿದೆ.ಈ ಕುರಿತುವೀರೇಂದ್ರ ಹೆಗ್ಗಡೆ ಇದನ್ನು ಕ್ಷಮೆ ಕೋರಬೇಕು.ಹೊಸ ವರ್ಷದ ಆಚರಣೆ
ವಾಪಸ್ ಪಡೆಯಬೇಕು ಎಂದು ನಮ್ಮ ಆಗ್ರಹವಾಗಿದ್ದು, ರವಿಶಂಕರ್ ಗೂರುಜಿ ವೇಷ ಹಾಕಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ್ದು ನಾಚಿಕಿಗೇಡು ಸಂಗತಿ ಎಂದು ಪ್ರಮೋದ ಮುತಾಲಿಕ ವಾಗ್ದಾಳಿ ಮಾಡಿದರು.
ಮುಂದಿನ ವರ್ಷ ಆಚರಣೆ ಮಾಡಲ್ಲ ಎಂದು ಹೇಳಬೇಕು.ಇಲ್ಲವಾದಲ್ಲಿ ದೇವಾಲಯ, ಮಠದ ಮುಂದೆ ಧರಣಿ ಮಾಡುತ್ತೇವೆ.ಮಠ, ದೇವಾಲಯದಲ್ಲಿ ಹೊಸ ವರ್ಷದ ಆಚರಣೆ ವಿಚಾರ. ಇದು ಮತಾಂತರಕ್ಕೆ ಪ್ರೇರಣೆ ನೀಡಿದಂತೆ ಆಗಿದೆ.ಪಾದ್ರಿಗಳು ಇದನ್ನು ಹಿಡಿದು ಪ್ರಚಾರ ನಡೆಸುತ್ತಿದ್ದಾರೆ ಎಂದು ಮುತಾಲಿಕ ಆರೋಪಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುತಾಲಿಕ್ ಸ್ಪರ್ಧೆ ಮಾಡುವ ವಿಚಾರ, ಈ ವಿಚಾರವಾಗಿ ರಾಜ್ಯದ ನಾಯಕರನ್ನ ಭೇಟಿ ಮಾಡಲಾಗುತ್ತಿದೆ . ನಾಯಕರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ನೋಡೊಣ ನಮ್ಮ ಯೋಗಾ ಏನಿದೆ ಅಂತಾ.. ಟಿಕೆಟ್ ಸಿಗದೇ ಇದ್ರೆ ಸ್ಪರ್ದೆ ಮಾಡಲ್ಲ… ಬೆಳಗಾವಿ ಜಿಲ್ಲೆಗೆ ಅಮಿಶ್ ಶಾ ಭೇಟಿ ಹಿನ್ನೆಲೆ. ಅವರನ್ನು ಭೇಟಿಮಾಡು ಪ್ರಯತ್ನ ನಡೆದಿದೆ. ರಾಜ್ಯದ ಅಧ್ಯಕ್ಷ ನಳಿನ ಕುಮಾರ್ ಕಟೀಲ್ ಮುಖಾಂತರ ಭೇಟಿ ಮಾಡುವ ಪ್ರಯತ್ನ ನಡೆದಿದೆ.ಎಂದು ಪ್ರಮೋದ ಮುತಾಲಿಕ ತಿಳಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ