ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ಹೀಗೊಂದು ಪ್ರತಿಭಟನೆ….!!!
ಬೆಳಗಾವಿ- ಇವತ್ತು ಬೆಳ್ಳಂ ಬೆಳಗ್ಗೆ ಬೆಳಗಾವಿಯ ಡಿಸಿ ಕಚೇರಿ ಎದುರು ಯಾರೂ ಉಹಿಸಲಾಗದ ರೀತಿಯಲ್ಲಿ ಪ್ರತಿಭಟನೆ ನಡೆಯಿತು. ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧಗೊಳಿಸಿದ ಶವ ತಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಸವದತ್ರಿ ತಾಲ್ಲೂಕಿನ ಏಣಗಿ ಗ್ರಾಮದಲ್ಲಿ ಹಿಂದೂ- ಮುಸ್ಲೀಂ ಎರಡೂ ಸಮಾಜದವರಿಗೆ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ.ನಮಗೆ ರಸ್ತೆ ಮಾಡಿಸಿ ಕೊಡಿ ಎಂದು ಆಗ್ರಹಿಸಿ ಮುಸ್ಲೀಂ ಸಮಾಜಕ್ಕೆ ಸೇರಿದ ಶವವನ್ನು ಡಿಸಿ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಈ ವಿಚಾರ ಬೆಳಗಾವಿ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅವರು ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ಆರಂಭಿಸಿದರು.
ಬೆಳಗಾವಿ ಡಿಸಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ಮಾಡಿದ ಏಣಗಿ ಗ್ರಾಮಸ್ಥರು.ಬೇಕೆ ಬೇಕು ನ್ಯಾಯ ಬೇಕು ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ದೌಡಾಯಿಸಿಗ್ರಾಮಸ್ಥರ ಮನವೊಲಿಕೆಗೆ ಪೊಲೀಸರ ಪ್ರಯತ್ನ ಮುಂದುವರೆಸಿದರು.
ಬೆಳಗ್ಗೆ 6ಗಂಟೆಗೆ ಅಬ್ದುಲ್ ಖಾದರ್ ಶವ ತಂದು ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಡಿಸಿ ನಿತೇಶ್ ಪಾಟೀಲ.ಶೀಘ್ರವೇ ಸ್ಮಶಾನ ಭೂಮಿ ಕೊಡುವ ಭರವಸೆ ನೀಡಿದರುಡಿಸಿ ಜೊತೆಗೆ ಗ್ರಾಮಸ್ಥರ ನಡುವಿನ ಸಂಧಾನ ಸಭೆ ಯಶಸ್ವಿಯಾಯಿತು.ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತ ಮುಖಂಡರು ಹೈಡ್ರಾಮಾ ನಡೆಸಿದರು.
ಸ್ಮಶಾನ ಭೂಮಿ ಮಂಜೂರಾಗುವವರೆಗೆ ಶವ ಹಸ್ತಾಂತರ ಬೇಡ ಎಂದು ಪಟ್ಟು ಹಿಡಿದರು.ರೈತ ಹೋರಾಟಗಾರ ಜಯಶ್ರೀ, ಅಶೋಕ ಅವರನ್ನು ಪೊಲೀಸರು ಅವರ
ಕೊರಳಪಟ್ಟಿ ಹಿಡಿದು ವಾಹನದಲ್ಲಿ ಕೂಡಿಸಿದ ವಶಕ್ಕೆ ಪಡೆದರು.ನಂತರ.ಪೊಲೀಸರೇ ಹೆಗಲು ಕೊಟ್ಟು ಶವವನ್ನ ಹೊತ್ತು ಲಾರಿಗೆ ಹಾಕಿ ಗ್ರಾಮಕ್ಕೆ ರವಾನೆ ಮಾಡಿದ ಘಟನೆ ನಡೆಯಿತು.