ಹೃದಯಾಘಾತದಿಂದ ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐ ಸಾವು!
ಗೋಕಾಕ: ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಳೆದ ಇಪ್ಪತ್ತು ದಿನಗಳ ಹಿಂದೆ ವರ್ಗಾವಣೆಯಾಗಿ ಗೋಕಾಕ ಗ್ರಾಮೀಣ ಠಾಣೆಗೆ ಅಪರಾಧ ವಿಭಾಗಕ್ಕೆ ಆಗಮಿಸಿದ್ದರು.
ನಿನ್ನೆ ರಾತ್ರಿ ದಿನ ನಿದ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಪಿಎಸ್ಐ ಪಕೀರಪ್ಪಾ ವಾಯ್ ತಳವಾರ (55) ಮೂಲತಃ ಬೀಳಗಿ ತಾಲೂಕು ಶಿರಗುಪ್ಪಿ ಗ್ರಾಮದವರಾಗಿದ್ದಾರೆ.
ಕಳೆದ ಇಪ್ಪತ್ತು ದಿನಗಳ ಹಿಂದೆ ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಈ ಘಟನೆ ಗೋಕಾಕ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ