

ಬೆಳಗಾವಿ- ನಾಲ್ಕು ದಿನದ ಹಿಂದೆಯಷ್ಟೇ ಮಗನ ಮದುವೆ ಮಾಡಿದ ತಾಯಿ ಇಂದು ಮಗ,ಮತ್ತು ಸೊಸೆಯ ಜೊತೆ,ಇಂದು ಯಲ್ಲಮ್ಮನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಮರಳಿ ಮನೆಗೆ ಬರುವಾಗ ವಿಧಿಯ ಅಟ್ಟಹಾಸ ಎಂತಹದ್ದು ನೋಡಿ ಎಲ್ಲರನ್ನೂ ಬಾರದ ಲೋಕಕ್ಕೆ ಕಳುಹಿಸಿತು…
ಬೆಳಗಾವಿಯ ಮಹಿಳಾ ಪೋಲೀಸ್ ಠಾಣೆಯಲ್ಲಿ ಸಬ್ ಇನೆಸ್ಪೆಕ್ಟರ್ ಎಂದು ಕರ್ತವ್ಯ ನಿಭಾಯಿಸುತ್ತಿದ್ದ,ಲಕ್ಷ್ಮೀ ನೆಲವಡೆ ಅವರು ನಿವೃತ್ತಿಯಾಗಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿತ್ತು ಜನೇವರಿ 21 ರಂದು ಮಗ ಪ್ರಸಾದನ ಮದುವೆ ಮುಗಿಸಿ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ಇಂದು ಬೆಳಿಗ್ಗೆ ಮಗ ಪ್ರಸಾದ ಸೊಸೆ ಅಂಕಿತಾ ಮತ್ತು ಸೊಸೆಯ ಸೋದರತ್ತಿಯ ಮಗಳು ದೀಪಾ ಎಲ್ಲರೂ ಸೇರಿ ಕಾರಿನಲ್ಲಿ ಸವದತ್ತಿಗೆ ತೆರಳಿದ್ದರು.
ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಮರಳುತ್ತಿರುವಾಗ,ಮುರಗೋಡ ಪೋಲೀಸ್ ಠಾಣೆಯ ಚಚಡಿ ಕ್ರಾಸ್ ಬಳಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟರು.
ಸೇವೆಯಿಂದ ನಿವೃತ್ತಿಯಾಗುತ್ತಿದ್ದೇನೆ,ಅಷ್ಟರೊಳಗೆ ಮಗನ ಮದುವೆ ಮಗಿಸಿ ಫೆಬ್ರುವರಿ 28 ಕ್ಕೆ ನಿವೃತ್ತಿಯಾಗಲಿದ್ದ ಪಿಎಸ್ಐ ಲಕ್ಷ್ಮೀ ನೆಲವಡೆ ನಾಲ್ಕು ದಿನಗಳ ಹಿಂದಷ್ಟೇ ಸಂಗಾತಿ ಜೀವನಕ್ಕೆ ಕಾಲಿಟ್ಟಿದ್ದ ಮಗ ಪ್ರಸಾದ ಸೊಸೆ ಅಂಕೀತಾ,ಜೊತೆ ಬದುಕಿನ ಪಯಣ ಮುಗಿಸಿದ್ದು ದುರ್ದೈವ ನಾಲ್ಕು ದಿನದ ಹಿಂದಷ್ಟೇ ಜರುಗಿದ್ದ ಮದುವೆಗೆ ಬಂದಿದ್ದ ಸೊಸೆ ಅಂಕೀತಾ ಅವರ ಸೋದರತ್ತೆಯ ಮಗಳು ದೀಪಾ ಕೂಡಾ ಇಂದು ನವದಂಪತಿಗಳ. ಜೊತೆಗೆ ತೆರಳಿ ಬದುಕು ಮುಗಿಸಿದ್ದು ವಿಧಿಯಾಟ….
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ