ಬೆಳಗಾವಿ- ಕಳೆದ ವರ್ಷ ಶೇ 62.,02 ಫಲಿತಾಂಶ ಗಿಟ್ಟಿಸಿಕೊಂಡು ರಾಜ್ಯದಲ್ಲಿಯೇ 16 ನೇಯ ಸ್ಥಾನ ಪಡೆದಿದ್ದ ಬೆಳಗಾವಿ ಜಿಲ್ಲೆ ಪ್ರಸಕ್ತ ವರ್ಷ ಪಿಯುಸಿ ದ್ವಿತೀಯ ವರ್ಷ ದ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು ಈ ಬಾರಿಯ ಪಿಯುಸಿ ಫಲಿತಾಂಶ ಶೇ 44.25 ರಷ್ಟಾಗಿದ್ದು ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ 28 ನೇಯ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ
ಬೆಳಗಾವಿ ಜಿಲ್ಲೆಯ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಕೆಯ ಫಲಿತಾಂಶ ಕೇವಲ 44.25 ರಷ್ಟಾಗಿದ್ದು ರಾಜ್ಯದ 132 ಕಾಲೇಜುಗಳಲ್ಲಿ ಶುನ್ಯ ಫಲತಾಂಶ ಪ್ರಕಟವಾಗಿದೆ ಅಂತರ್ಜಾಲದಲ್ಲಿ ಪ್ರಕಟಗೊಂಡಿರುವ ಪಿಯುಸಿ ಫಲತಾಂಶ ನೋಡಲು ನಗರದ ಸೈಬರ್ ಕೆಫೆಗಳಲ್ಲಿ ಫುಲ್ ರಶ್ ಆಗಿದೆ
ಈ ಬಾರಿಯ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವ್ಹಿ ಕ್ಯಾಮರಾಗಳನ್ನು ಅಳವಡಿಸಿ ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ನೈಜ ಫಲಿತಾಂಶ ಹೊರಬಿದ್ದಿದೆ