ರಮ್ಮಾ ಹೇಳಿಕೆಗೆ ಪುಟ್ಟಣಯ್ಯ ಕಿಡಿ ನಟಿ ರಮ್ಯಾ ಹೇಳಿಕೆಗೆ ರೈತ ಮುಖಂಡ, ಶಾಸಕ ಕೆ.ಎಸ. ಪುಟ್ಟಣಯ್ಯ ಬೆಳಗಾವಿಯಲ್ಲಿ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಿಯೂ ರೈತರು, ಬರಗಾಲದ ಬಗ್ಗೆ ಚರ್ಚೆಯಾಗುತ್ತಿಲ್ಲ. ಬರಿ ರಮ್ಮಾ.. ರಮ್ಮಾ.. ರಮ್ಯಾನ ಮಡಿಕೊಂಡು ರಮ್ಮಿ ಆಡ್ತಾಕುತ್ಕೊಂಡಿದ್ದಾರೆ ಎಲ್ಲ್ರು. ಏನವಳು ರಮ್ಮಾ ದೇಶಕ್ಕೆ. ತಿಳುವಳಿಕೆ ಇಲ್ಲದೇ ಎರಡು ಮಾತಾಡವ್ಳೆ ಹೋಗ್ಲಿ ಬೀಡು ಅನ್ನದೇ ಮಹತ್ವ ಕೊಡ್ತಿದ್ದಾರೆ. ಅವಳಿಗೆ ಈ ಜಗತ್ತಿನ ಬಗ್ಗೆ ಏನ ಗೊತ್ತಿಲ್ಲ. ಕೃಷಿನೂ ಗೊತ್ತಿಲ್ಲ ಧರ್ಮಾನೂ ಗೊತ್ತಿಲ್ಲ. ಅನಾವಶ್ಯಕವಾಗಿ ತಿಳುವಳಿಕೆ ಇಲ್ಲದೇ ಮಾತನಾಡಬಾರದು.ತೀಳಿದು ಮಾತಾಡೊದನ್ನ ಪ್ರ್ಯಾಕ್ಟಿಸ್ ಮಾಡೆಂದು ರಮ್ಯಾಗೆ ಶಾಸಕ ಪುಟ್ಟಣಯ್ಯ ಕಿವಿಮಾತು ಹೇಳಿದ್ದಾರೆ. ಜತೆಗೆ ದೇಶದ ಸ್ವಾತಂತ್ರ್ಯದಲ್ಲಿ ಇಡೀ ದೇಶದ ಜನತೆಯ ತ್ಯಾಗ ಮತ್ತು ಬಲಿದಾನವಿದೆ. ರೈತರ ವಿಚಾರ ಇಟ್ಕೊಂಡು ನಾನು ರಾಜಕಾರಣ ಮಾಡಲ್ಲ. ನಾನು ಮನಸ್ಸು ಮಾಡಿದ್ರೆ ಕ್ಯಾಬಿನೇಟ್ ರ್ಯಾಂಕಗೆ ಹೋಗ್ತಿನಿ. ಮಂತ್ರಿಗಿರಿ ನನಗೆ ಇಷ್ಟ ಇಲ್ಲ. ನಾನು ಮನಸ್ಸು ಮಾಡಿದ್ರೆ ನಾಳೇನೆ ಸಚಿವನಾಗಿ, ಮಂಡ್ಯ ಉಸ್ತುವಾರಿ ಆಗ್ತಿನಿ. ಆಸೆ ಇದ್ದಿದ್ರೆ ಹೋಗ್ತಿದ್ದೆ. ನಾವು ರಿಯಲ್ ಸಾಯಿಲ್ಸ್ ಸನ್ ಹೊರತು ಡುಪ್ಲಿಕೇಟ್ ಸಾಯಿಲ್ಸ್ ಸನ್ ಅಲ್ಲ.ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಟ್ಟರು
ನಿಯೋಗಕ್ಕೆ ಗೋವಾ ಸ್ಪಂದಿಸಿಲ್ಲ:
ಮಹದಾಯಿ ವಿವಾದ ಮಾತುಕತೆಯಿಂದ ಬಗೆ ಹರಿಸಿಕೊಳ್ಳಬೇಕೆಂದು ರಾಜ್ಯದಿಂದ ರೈತ ಮುಖಂಡರು ಮತ್ತು ಕನ್ನಡಪರ ಮುಖಂಡರ ನಿಯೋಗ ನಿನ್ನೆ ಗೋವಾ ಸಿಎಂ ಮತ್ತು ನೀರಾವರಿ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಆದ್ರೆ ಗೋವಾ ಸರ್ಕಾರ ಮಾತ್ರ ನಿಯೋಗದ ಮನವಿಗೆ ಸ್ಪಂದಿಸಿಲ್ಲ ಎಂದು ಶಾಸಕ ಕೆ.ಎಸ. ಪುಟ್ಟಣಯ್ಯ ಅಸಮಾಧಾನ ಹೊರಹಾಕಿದ್ದಾರೆ. ಗೋವಾ ಸಿಎಂ ಅವರು ಇನ್ನು ಆರು ತಿಂಗಳಲ್ಲಿ ಗೋವಾದಲ್ಲಿ ಚುನಾವಣೆ ಇರೊದರಿಂದ ಏನು ಮಾತನಾಡಲಾರೇ. ಜಲ ವಿವಾದ ಸೂಕ್ಷ್ಮ ವಿಚಾರವಾಗಿದೆ.ಮಹದಾಯಿ ಮಧ್ಯಂತರ ತೀರ್ಪು ಅಂತಿಮ.ನ್ಯಾಯಾಧೀಕರಣದಿಂದ ನಮ್ಮ ಪರ ಅಥವಾ ನಿಮ್ಮ ಪರವಾಗಿ ಬರಲಿ ಆಗ ಯೋಜನೆ ಮಾಡೋಣ. ಆಗೆನಾದ್ರು ತೊಂದ್ರೆಯಾದ್ರೆ ಎರಡೂ ರಾಜ್ಯದವರು ಕುಳಿತು ಮಾತನಾಡೋಣ ಎಂದು ಹೇಳಿದ್ದಾರೆ ಎಂದು ಶಾಸಕ ಪುಟ್ಟಣಯ್ಯ ಹೇಳಿದ್ರು. ಜತೆಗೆ ರಾಜ್ಯದಲ್ಲಿ ನೀರಾವರಿ ಸಮಸ್ಯೆ ಉಲ್ಬಣಗೊಂಡಿದೆ. ತಮಿಳುನಾಡಿಗೆ ಈಗಾಗಲೇ 35 ಟಿಎಂಸಿ ನೀರು ಹೋಗುತ್ತಿದೆ. ಹೀಗಾಗಿ ಪ್ರಧಾನಮಂತ್ರಿಗಳು ರಾಷ್ಟ್ರೀಯ ಜಲ ನೀತಿ ತಿದ್ದುಪಡಿ ಮಾಡಬೇಕಿದೆ. ಜಲನೀತಿ ತಿದ್ದುಪಡಿ ಮಾಡುವಂತೆ ನಾನು ಭೇಟಿ ಮಾಡಿ ಪ್ರಧಾನಮಂತ್ರಿ ಅವರನ್ನ ಒತ್ತಾಯಿಸಲ್ಲಿದ್ದೇನೆ. ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ