ಬೆಳಗಾವಿ- ನಿಪ್ಪಾಣಿ ಹತ್ರ ನಮಗೆ ಜಾಗೆ ಕೊಡಿ ಇಲ್ಲಿ ನಾವು ಕೈಗಾರಿಕೆಗಳನ್ನು ಆರಂಭ ಮಾಡ್ತೀವಿ ಅಂತ ಕೊಲ್ಹಾಪೂರದ ಉದ್ಯಮಿಗಳ ದಂಡು ಮುಖ್ಯಮಂತ್ರಿ ಗಳನ್ನು ಭೇಟಿ ಆಗಿತ್ತು ಈಗ ಅವರಿಗಾಗಿಯೇ 348 ಎಕರೆ ಜಮೀನು ಅಕ್ವಾಯರ್ ಮಾಡಿಕೊಂಡ್ರೂ ಉದ್ಯಮಿಗಳು ಕೈಗಾರಿಕೆ ಸ್ಥಾಪಿಸಲು ಮುಂದೆ ಬರುತ್ತಿಲ್ಲ ಎಂದು ಕೈಗಾರಿಕಾ ಸಚಿವ ಆರ್ ವ್ಹಿ ದೇಶಪಾಂಡೆ ಕೊಲ್ಹಾಪೂರದ ಉದ್ಯಮಿಗಳ ವಿರುದ್ಧ ತಮ್ಮ ಅಸಮಾಧಾನ ವ್ಯೆಕ್ತಪಡಿಸಿದರು
ಬೆಳಗಾವಿಯಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಮಹಾರಾಷ್ಟ್ರ ಉದ್ಯಮಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಮೂರ್ನಾಲ್ಕು ಬಾರಿ ಅವರ ಜೊತೆ ನಾನೂ ಸಭೆ ನಡೆಸಿ ಅವರಿಗಾಗಿಯೇ 348 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದೇವೆ ಈಗ ಅವರನ್ನು ಸಂಪರ್ಕ ಮಾಡಿದರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಕೈಗಾರಿಕೆ ಸ್ಫಾಪಿಸುತ್ತೇವೆ ಅಂತಾನೂ ಹೇಳುತ್ತಿಲ್ಲ ಇಲ್ಲಾನೂ ಅಂತ ಹೇಳುತ್ತಿಲ್ಲ ಎಂದು ದೇಶಪಾಂಡೆ ಮಹಾರಾಷ್ಟ್ರ ಉದ್ಯಮಿಗಳ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದರು
ಕೈಗಾರಿಕೆ ಸ್ಥಾಪಿಸಲು ಬೆಳಗಾವಿಯಲ್ಲಿ ಉತ್ತಮ ವಾತಾವರಣವಿದೆ ವಾನ ಸಂಪರ್ಕ,ರೈಲು ಸಂಪರ್ಕದ ಜೊತೆಗೆ ಎಲ್ಲ ರೀತಿಯ ಸೌಲಭ್ಯಗಳು ಬೆಳಗಾವಿಯಲ್ಲಿ ಇವೆ ಉದ್ಯಮಿಗಳು ಇಲ್ಲಿ ಕೈಗಾರಿಕೆ ಆರಂಭಿಸಲು ಮುಂದೆ ಬಂದರೆ ಅವರಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸುತ್ತೇವೆ ಎಂದು ದೇಶಪಾಂಡೆ ತಿಳಿಸಿದರು
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ವಿತರಿಸಲು ಬೆಳಗಾವಿಯಲ್ಲಿ ವಿಭಾಗಮಟ್ಟದ ಬೃಹತ್ ಸಮಾವೇಶ ಏರ್ಪಡಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವರಾದ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಸಭೆ ನಡೆಸಿ ಸಮಾವೇಶದ ಅಂತಿಮ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಭಾರ ಜಿಲ್ಲಾಧಿಕಾರಿ ರಾಮಚಂದ್ರನ್ ಮತ್ತಿತರು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.