Breaking News

ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಮಹಾರಾಷ್ಟ್ರದಲ್ಲೂ ಫೇಮಸ್..!!

ಬೆಳಗಾವಿ- ಬೆಳಗಾವಿ ಮಹಾನಗರ,ವಿಭಿನ್ನ, ವಿಶಿಷ್ಟ,ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ.ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಪಕ್ಕದ ಮಹಾರಾಷ್ಟ್ರದಲ್ಲೂ ಪ್ರಭಾವ ಬೀರಿದೆ.

ಅಂತರ್ ರಾಜ್ಯಗಳಲ್ಲಿ ಗಮನ ಸೆಳೆದಿರುವ ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ಓಟವನ್ನು ಬೆಳಗಾವಿಯ ಕುಲಕರ್ಣಿ ಗಕ್ಲಿಯ ಗವಳಿ ಸಮಾಜದವರು ಆಯೋಜನೆ ಮಾಡಿದ್ಸರು ಈ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ (ಕಣಬರ್ಗಿ) ಅವರು ಪ್ರಾಯೋಜಕತ್ವ ನೀಡಿದ್ದರು. ಎಮ್ಮೆಗಳ ರೇಸ್ ನಲ್ಲಿ ವಿಜೇತರಾದವರಿಗೆ ಮುರುಘೇಂದ್ರಗೌಡ್ರು ನಗದು ಬಹುಮಾನ ನೀಡಿ,ಗವಳಿ ಸಮಾಜ ಆಯೋಜಿಸಿದ ಎಮ್ಮೆಗಳ ಓಟದಲ್ಲಿ ಭಾಗವಹಿಸಿದರಿಗೆ ಪ್ರೋತ್ಸಾಹ ನೀಡಿದರು.

ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಆಕರ್ಷಕವಾಗಿತ್ತು.ಈ ಸ್ಪರ್ಧೆಯಲ್ಲಿ ಬೆಳಗಾವಿ,ಸಾಂಗ್ಲಿ,ಮೀರಜ,ಕೊಲ್ಹಾಪೂರ ಸೇರಿದಂತೆ ಕರ್ನಾಟಕ ಮಹಾರಾಷ್ಟ್ರ ಸೇರಿ,ಹಲವಾರು ಪ್ರದೇಶಗಳಿಂದ ನೂರಾರು ಎಮ್ಮೆಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಕೊಲ್ಹಾಪೂರದ ಧನಾಜಿ ಜಾಂಭಳೆ ಪ್ರಥಮ,ಬೆಳಗಾವಿ ಚವ್ಹಾಟಗಲ್ಲಿಯ ಕಾಳಭೈರವ ಪ್ರಸನ್ನ,ಎರಡನೇಯ ಸ್ಥಾನ,ಮಿರಜನ ವಿನಾಯಕ ಪವಾರ, ಹಾಗೂ ಕೊಲ್ಹಾಪೂರದ ಶಿವಾಜಿ ಭೋಸಲೆ,ಮೂರನೇಯ ಸ್ಥಾನ ಪಡೆದು ಎಮ್ಮೆಗಳ ರೇಸ್ ನಲ್ಲಿ ಬಹುಮಾನ ಹಾಗೂ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *