ಬೆಳಗಾವಿ- ಬೆಳಗಾವಿಯಲ್ಲಿ ಪೋಲೀಸ್ ಇನೆಸ್ಪೆಕ್ಟರ್ ಅವರನ್ನು ಹವಾಲ್ದಾರ್ ಎಂದು ಕರೆಯುವ ಪೋಲೀಸ್ ಠಾಣೆಯೊಂದು ಬೆಳಗಾವಿ ನಗರದಲ್ಲೇ ಇದೆ..
ಇವರು ಪೋಲೀಸ್ ಇನೆಸ್ಪೆಕ್ಟರ್ ಹುದ್ದೆಯಲ್ಲಿದ್ದರೂ ಠಾಣೆಯ ಸಿಬ್ಬಂಧಿಗಳು,ಪಿಸಿಗಳು,ಎಲ್ಲರೂ ಇವರನ್ನು ಹವಾಲ್ದಾರ್ ಸರ್ ಎಂದೇ ಕರೆಯುತ್ತಾರೆ.
ಠಾಣೆಯ ವ್ಯಾಪ್ತಿಯ ಜನರೂ ಪೋಲೀಸ್ ಇನೆಸ್ಪೆಕ್ಟರ್ ಅವರನ್ನು ಹವಾಲ್ದಾರ್ ಸರ್ ಎಂದೇ ಕರೆಯುತ್ತಾರೆ. ಈ ರೀತಿ ಯಾಕೆ ? ಎನ್ನುವ ಪ್ರಶ್ನೆ ಹಲವಾರು ದಿನಗಳಿಂದ ಕಾಡುತ್ತಿತ್ತು
ಈ ರೀತಿಯ ಸನ್ನಿವೇಶಕ್ಕೆ ಕಾರಣವಾಗಿರುವ ಠಾಣೆ ಬೆಳಗಾವಿಯ ಶಹಾಪೂರ್ ಪೋಲೀಸ್ ಠಾಣೆ,ಈ ಠಾಣೆಯ ಇನೆಸ್ಪೆಕ್ಟರ್ ಅವರ ಸರ್ ನೇಮ್ ಹವಾಲ್ದಾರ್ ಹೀಗಾಗಿ ಅವರು ಪಿಐ ಆಗಿದ್ದರೂ ಜನ ಅವರನ್ನು ಹವಾಲ್ದಾರ್ ಸರ್ ಎಂದೇ ಕರೆಯುತ್ತಾರೆ.
ಬೆಳಗಾವಿ ನಗರದಲ್ಲಿ ಈ ಹಿಂದೆ ಒಂದು ಘಟನೆ ನಡೆದಿತ್ತು,ಠಾಣೆಯೊಂದರ ಹವಾಲ್ದಾರ್ ರೊಬ್ಬರು ನ್ಯಾಯವಾದಿಗಳ ಜೊತೆ ಜಗಳಾಡಿದ್ದರು,ಇದನ್ನು ಬೆಳಗಾವಿ ವಕೀಲರು ಪ್ರತಿಭಟನೆ ಮಾಡಿ ಹವಾಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಸಂಧರ್ಭದಲ್ಲಿ ಎಲ್ಲರೂ ಶಹಾಪೂರ ಪೋಲೀಸ್ ಠಾಣೆಯ ಪಿಐ ರಾಘವೇಂದ್ರ ಹವಾಲ್ದಾರ್ ಎಂದೇ ತಿಳಿದುಕೊಂಡಿದ್ದರು ಆದ್ರೆ ನ್ಯಾಯವಾದಿಯ ಜೊತೆ ಜಗಳಾಡಿದ್ದು ಬೇರೆ ಠಾಣೆಯ ಹವಾಲ್ದಾರ್ ಎನ್ನುವ ವಿಷಯ ಆಮೇಲೆ ಗೊತ್ತಾಯಿತು..
ಬೆಳಗಾವಿ ಶಹಾಪೂರ್ ಠಾಣೆಯ ಪಿಐ ರಾಘವೇಂದ್ರ ಹವಾಲ್ದಾರ್ ಅವರು ಎಸಿಪಿ,ಎಸ್ ಪಿ ಹುದ್ದೆಗೆ ಬಡ್ತಿ ಹೊಂದಿದರೂ ಜನ ಅವರನ್ನು ಹವಾಲ್ದಾರ್ ಸರ್ ಎಂದೆ ಕರೆಯಬೇಕಾಗುತ್ತದೆ ಎಂತಹ ವಿಪರ್ಯಾಸ ನೋಡಿ ಇದು…