ಬೆಳಗಾವಿ- ಇಂದು ವೀರರಾಣಿ ಕಿತ್ತೂರು ಚನ್ಬಮ್ಮಾಜಿಯ ವಿಜಯೋತ್ಸವ ಕಾಂಗ್ರೆಸ್ಸಿನ ಕುಡಿಗಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರು ತಮ್ಮ ಮನೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವೀರರಾಣಿಯ ಇತಿಹಾಸದ ಗತವೈಭವವನ್ನು ಸ್ಮರಿಸಿದರು.
ರಾಹುಲ್ ಮತ್ತು ಪ್ರಿಯಾಂಕಾ ಕೋವೀಡ್ ಹಿನ್ನಲೆಯಲ್ಲಿ ಮನೆಯಲ್ಲಿಯೇ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ವಿಜಯೋತ್ಸವವನ್ನು ಆಚರಿಸುವ ಮೂಲಕ ಎಲ್ಲರ ಗಮನ ಸೆಳೆಸರು.
ಈ ಸಂಧರ್ಭದಲ್ಲಿ ಮಾತನಾಡಿದ ರಾಹುಲ್ ವೀರರಾಣಿ ಚನ್ನಮ್ಮನ ಹೋರಾಟದ ಇತಿಹಾಸ ನಮಗೆಲ್ಲರಿಗೂ ಸ್ಪೂರ್ತಿ ಮತ್ತು ಪ್ರೇರಣಾದಾಯಕವಾಗಿದ್ದು ಅವರ ಧೈರ್ಯ ಮತ್ತು ಶೌರ್ಯ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದರಿಂದಲೇ ವೀರಮಾತೆಯನ್ನು ಇತಿಹಾಸಕಾರರು ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆ ಎಂದು ಕರೆಯುತ್ತಾರೆ ಎಂದು ರಾಹುಲ್ ಹೇಳಿದರು
ರಾಹುಲ್ ಸಹೋದರಿ ಪ್ರಿಯಾಂಕಾ ಅವರು ಮಾತನಾಡಿ,ತೊಟ್ಟಲು ತೂಗುವ ಕೈ ಜಗತ್ತನ್ನು ಆಳುವವರನ್ನು (ಬ್ರಿಟಿಷರನ್ನು) ಸೋಲಿಸಬಹುದು ತೋರಿಸಿಕೊಟ್ಟ ದೇಶದ ಮೊದಲ ರಾಣಿ ಕಿತ್ತೂರು ಚನ್ನಮ್ಮ. ಚನ್ನಮ್ಮನ ಇತಿಹಾಸ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿ ಜಾಗತಿಕ ಮಟ್ಟದಲ್ಲಿ ತಲುಪಿಸುವ ಕಾರ್ಯವನ್ನು ಸರಕಾರಗಳು ಮಾಡಬೇಕೆಂದು ಮನವಿ ಮಾಡಿಕೊಂಡರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ಪುತ್ರರಾದ ರಾಹುಲ್ ಮತ್ತು ಪ್ರಿಯಾಂಕಾ ಗೋಕಾಕಿನ ತಮ್ಮ ಮನೆ ಹಿಲ್ ಗಾರ್ಡನ್ ದಲ್ಲಿ ಕಿತ್ತೂರು ಉತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.