Breaking News

ಬೆಳಗಾವಿಯಲ್ಲಿ ರಾಹುಲ್ ಭರ್ಜರಿ ಸೇವೆ….!!

ಚುನಾವಣೆ ಬಂದಾಗ ಭಾಷಣ ಮಾಡುವ ವ್ಯಕ್ತಿಗಳು ನಮಗೆ ಬೇಕಿಲ್ಲ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಸತೀಶ್‌ ಜಾರಕಿಹೊಳಿ ಫೌಂಡೇಶನ್‌ನಿಂದ ವಿವಿಧ ದೇವಸ್ಥಾನ ಹಾಗೂ ಮಸಿದಿಗಳಿಗೆ ಕುರ್ಚಿ-ಸೌಂಡ್‌ ಸಿಸ್ಟಮ್‌ ವಿತರಣೆ
ಬೆಳಗಾವಿ: ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಇಂದು(ಸೋಮವಾರವೂ) ಪ್ರತಿ ಲೀಟರ್ ಪೆಟ್ರೋಲ್‍ಗೆ 42 ಪೈಸೆ, ಡಿಸೇಲ್‍ಗೆ 39 ಪೈಸೆ ಏರಿಕೆಯಾಗಿದೆ. ಆದರೆ ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ದೂರಿದರು.

ನಗರದ ಜಾಧವ ನಗರ ಕಚೇರಿಯಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ನಿಂದ ಬೆಳಗಾವಿ ದಕ್ಷಿಣ, ಉತ್ತರ ಮತ ಕ್ಷೇತ್ರದ ವಿವಿಧ ದೇವಸ್ಥಾನದ ಕಮಿಟಿ ಹಾಗೂ ಮಸಿದಿಗಳಿಗೆ ಕುರ್ಚಿಗಳು ಮತ್ತು ಸೌಂಡ್‌ ಸಿಸ್ಟಮ್‌ ವಿತರಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 109.43 ರೂ., ಡಿಸೇಲ್ 93.24 ರೂ.ಗೆ ಏರಿಕೆಯಾಗಿದೆ. ಕಳೆದ ಎರಡು ವಾರಗಳಿಂದ ತೈಲ ಬೆಲೆಯಲ್ಲಿ ಒಟ್ಟು 8.40 ರೂ. ದರ ಏರಿಕೆಯಾಗಿದೆ. ಆದರೆ ಯಾರು ಇದರ ಬಗ್ಗೆ ಚರ್ಚಿಸುತ್ತಿಲ್ಲ. ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ ಎಂದು ತಿಳಿಸಿದರು.

ಕಾರಣ ಜನ ಸಾಮಾನ್ಯರು ದೇಶದ ಎಲ್ಲಾ ರೀತಿಯ ಬೆಳವಣಿಗೆಗಳನ್ನು ಗಮನಿಸಬೇಕು. ಚುನಾವಣೆ ಬಂದಾಗ ಭಾಷಣ ಮಾಡುವ ವ್ಯಕ್ತಿಗಳು ನಮಗೆ ಬೇಕಿಲ್ಲ. ಅಭಿವೃದ್ಧಿ ಪರ ನಿಲ್ಲವ ವ್ಯಕ್ತಿಗಳನ್ನು ನಾವು ಬೆಂಬಲಿಸಬೇಕೆಂದು ಕರೆ ನೀಡಿದರು.

ಯಮಕನಮರಡಿ ಮತಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಮೂಲಕ ಹಲವು ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಘಟಪ್ರಭ ಸೇವಾದಳದಲ್ಲಿ ಆರ್ಮಿ, ಪೊಲೀಸ್‌ ತರಬೇತಿ ಸೇರಿದಂತೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಫೌಂಡೇಶನ್‌ ಕ್ರೀಡೆಗೂ ಆದ್ಯತೆ ನೀಡುತ್ತಿದ್ದು, ಕೆಲವು ದಿನಗಳಿಂದ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳುತ್ತಿರುವ ಗ್ರಾಮಗಳಲ್ಲಿ ಕಬಡ್ಡಿ ಮ್ಯಾಟ್‌ ನ್ನು ನೀಡಲಾಗುತ್ತಿದ್ದು, ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಕಾಂಗ್ರೆಸ್‌ ಸದಸ್ಯತ್ವದ ಬಗ್ಗೆ ಮಾತನಾಡಿದ ಯುವ ನಾಯಕ ರಾಹುಲ್‌, ಬೆಳಗಾವಿ ಜಿಲ್ಲೆಯಲ್ಲಿಯೇ ಯಮಕನಮರಡಿ ಮತಕ್ಷೇತ್ರದಲ್ಲಿ ಹೆಚ್ಚಿನ ಸದಸ್ಯತ್ವ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ ಮಾತನಾಡಿ, ಕ್ಷೇತ್ರದ ಸಮಸ್ಯೆ ಹೇಳಿಕೊಳ್ಳುವ ಅಗತ್ಯ ಯಮಕನಮರಡಿ ಕ್ಷೇತ್ರದಲ್ಲಿ ಇಲ್ಲ. ಸಮಸ್ಯೆ ಹೇಳುವ ಮನ್ನವೇ ನಮಗೆ ಶಾಸಕ ಸತೀಶ್ ಜಾರಕಿಹೊಳಿ ಅವರು ಪರಿಹಾರ ಕಲ್ಪಿಸುತ್ತಾರೆ. ಅವರಂತಹ ಶಾಸಕರು ಸಿಕ್ಕಿದ್ದು ನಮ್ಮ ಪುಣ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶ್ರೀ ರೇಣುಕಾ ದೇವಿ ಕಮಿಟಿ ಬುರಡಗಲ್ಲಿ, ಶ್ರೀ ದುರ್ಗಾದೇವಿ ದೇವಸ್ಥಾನ ಅಂಬೇಡ್ಕರ್‌ ಗಲ್ಲಿ ಕುಡಚಿ, ಶ್ರೀ ಹರಿಭಕ್ತ ಭಜನಾ ಮಂಡಳಿ ಕನಬರ್ಗಿ, ಬಸವಣ್ಣ ಮಹಾದೇವ ಮಂದಿರ ನೆಹರೂ ನಗರ, ಶಿವಾಲಯ ಮಂದಿರ, ಹೆ.ಡಿ. ಕುಮಾರಸ್ವಾಮಿ ಲೇಔಟ್, ಶ್ರೀ ವಿಠ್ಠಲ ಮಂದಿರ ಕೋಳಿ ಗಲ್ಲಿ, ಅಬ್ದುಲ್ ಮಜೀದ್ ಜಾಲಗಾರ ಮತ್ತು ಘೀ ಗಲ್ಲಿ, ಅಹಮದಿಯಾ ಮಸ್ಜಿದ್‌ ರುಕ್ಷ್ಮೀಣಿ ನಗರ ಬೆಳಗಾವಿ ಇವರಿಗೆ ಕುರ್ಚಿ ಮತ್ತು ಸೌಂಡ್‌ ಸಿಸ್ಟಮ್‌ ವಿತರಿಸಲಾಯಿತು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅಂಬೇಡ್ಕರ್ ಭವನ್ ಫಿಶ್ ಮಾರ್ಕೆಟ್, ಹಜರತ ಮಿರ್ಜಾವಾಲೆ ರೆಹತುಲ್ಲಾ ಅಲಿ ಮಸ್ಕಿದ್‌ ಖಾಸಬಾಗ, ಗಣಪತಿ ದೇವಸ್ಥಾನ ಕಲ್ಮೇಶ್ವರ ರೋಡ್, ವಾಲ್ಮೀಕಿ ಸಮುದಾಯ ಭವನ ಹುಂಚ್ಯಾನಟ್ಟಿ, ವಾಲ್ಮೀಕಿ ಸಮುದಾಯ ಭವನ ಮಚ್ಚೆ, ವಾಲ್ಮೀಕಿ ಸಮುದಾಯ ಭವನ ಪೀರಣವಾಡಿ, ಶ್ರೀ ವಿಠ್ಠಲ ರುಕ್ಮಾಯಿ ಮಂದಿರ ಮಜಗಾವ್, ಶ್ರೀಕೃಷ್ಣ ಮಂದಿರ ಟಿಳಕವಾಡಿ, ಅರೇಬಿಯಾ ಮದರಾಸ್ ದಾಮಣೆ ಕಮಿಟಿಗಳಿಗೆ ಕುರ್ಚಿ ಮತ್ತು ಸೌಂಡ್‌ ಸಿಸ್ಟಮ್‌ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅರುಣ ಕಟಾಂಬಳೆ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ಪರಶುರಾಮ ಡಗೆ, ರಘು ಲೋಕುರ್, ಅಣ್ಣು ಕಟಾಂಬಳೆ, ಕಿರಣ ಪಾಟೀಲ್,ಫಜಲ್ ಮಕಾಂದರ, ಮಲಗೌಡ ಪಾಟೀಲ್, ಬೆಳಗಾವಿ ಮಹಾ ನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯರು ಸೇರಿದಂತೆ ಯಮಕನಮರಡಿ ಮತಕ್ಷೇತ್ರದ ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *