ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಾಮ್ರಾಜ್ಯ ಇರೋದು ಒಂದೇ ಆದ್ರೆ ಈ ಸಾಮ್ರಾಜ್ಯದಲ್ಲಿ ಅನೇಕ ಜನ ಸಾಮ್ರಾಟರಿದ್ದಾರೆ, ಈ ಎಲ್ಲ ಸಾಮ್ರಾಟರನ್ನು, ಜಿಲ್ಲೆಯ ಜನ ಪ್ರೀತಿಯಿಂದ ಸಣ್ಣ ಸಾಹುಕಾರ್ ದೊಡ್ಡ ಸಾಹುಕಾರ್ ಅಂತಾ ಕರೀತಾರೆ,ಈ ಸಾಮ್ರಾಜ್ಯದ ಎರಡನೇಯ ಪೀಳಿಗೆ ಈಗ ಸಮಾಜ ಸೇವಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ.
ರಾಜಕೀಯ ಕ್ಷೇತ್ರದ ಮಾಸ್ಟರ್ ಮೈಂಡ್ ಎಂದೇ ಕರೆಯಲ್ಪಡುವ ಸತೀಶ್ ಜಾರಕಿಹೊಳಿ ಅವರ ಸುಪುತ್ರ ರಾಹುಲ್ ಜಾರಕಿಹೊಳಿ ಅವರು ಚಿಕ್ಕ ವಯಸ್ಸಿನಲ್ಲಿ ವರ್ಚಸ್ಸು ಗಳಿಸಿಕೊಂಡಿದ್ದಾರೆ.ಅಕ್ಟೋಬರ್ 2 ಭಾನುವಾರ ಅವರ ಜನುಮದಿನ,ಶುಭಕೋರಿ ಅವರ ಅಭಿಮಾನಿಗಳು ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಹಾಕಿರುವ ಬ್ಯಾನರ್ ಮತ್ತು ಕಟೌಟ್ ನೋಡಿದ್ರೆ ಅವರು ಎಷ್ಟು ಪ್ರೀತಿ ಗಳಿಸಿದ್ದಾರೆ ಎನ್ನುವ ಲೆಕ್ಕ ಸಿಗುತ್ತೆ.
ವಯಸ್ಸು ಇಪ್ಪತ್ತ ಮೂರು ಸತೀಶ್ ಫೌಂಡೇಶನ್ ಮೂಲಕ ರಾಹುಲ್ ಜಾರಕಿಹೊಳಿ ಅವರು ಮಾಡಿರುವ ಸಾಧನೆ ನೂರಾರು,ಸರಳತೆಯ ಸಂಸ್ಕಾರವನ್ನು ಮೈಗೂಡಿಸಿಕೊಂಡಿರುವ ಅವರು,ಅಲ್ಪಾವಧಿಲ್ಲಿ ಅಪಾರ ಜನ ಮೆಚ್ಚುಗೆ ಗಳಿಸಿದ್ದಾರೆ.ತಂದೆ ಸತೀಶ್ ಜಾರಕಿಹೊಳಿ ಅವರ ಗರಡಿಯಲ್ಲಿ ಸರಳತೆಯನ್ನು ಪರಳಗಿಸಿಕೊಂಡು ಆಡಂಬರದಿಂದ ದೂರಾಗಿ,ಜನಸಾಮಾನ್ಯರಿಗೆ ಹತ್ತಿರವಾಗಿರುವದರಿಂದಲೇ ರಾಹುಲ್ ತಂದೆಗೆ ತಕ್ಕ ಮಗನಾಗಿ ಹೊರಹೊಮ್ಮಿದ್ದಾರೆ.
ಸತೀಶ್ ಫೌಂಡೇಶನ್ ಮೂಲಕ,ಬಡ ವಿಧ್ಯಾರ್ಥಿಗಳಿಗೆ ಸಹಾಯ,ನೊಂದವರಿಗೆ ಸ್ಪಂದಿಸಿ,ಯುವ ಸಮುದಾಯಕ್ಕೆ ಜಿಮ್ ಸಲಕರಣೆಗಳನ್ನು ವಿತರಿಸಿ,ಅವರ ಹತ್ತಿರ ಸಹಾಯ ಕೇಳಲು ಹೋದವರ ಅಳಲು ಕೇಳಿ,ಅನೇಕ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಮುಂದಕ್ಕೆ ಸಾಗಿರುವ ರಾಹುಲ್ ಯುವ ಸಮುದಾಯದ ಭರವಸೆಯ ಬೆಳಕಾಗಿದ್ದಾರೆ.ಅಕ್ಟೋಬರ್ 2 ಭಾನುವಾರ ಬೆಳಗ್ಗೆ 11-00 ಗಂಟೆಗೆ, ಬೆಳಗಾವಿಯ ಕೆಪಿಟಿಸಿಎಲ್ ಹಾಲ್ ನಲ್ಲಿ ರಾಹುಲ್ ಜಾರಕಿಹೊಳಿ ಅಭಿಮಾನಿಗಳು ಅದ್ಧೂರಿಯಾಗಿ ಜನುಮ ದಿನ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.ರಾ ಹುಲ್ ಜಾರಕಿಹೊಳಿ ಅವರಿಗೆ ಬೆಳಗಾವಿ ಸುದ್ದಿ ಡಾಟ್ ಕಾಮ್ ಬಳಗದ ಪರವಾಗಿ ಜನುಮ ದಿನದ ಶುಭಾಶಯಗಳು..