Breaking News

ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ

ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ 63ನೇ ಜನ್ಮದಿನ ಪ್ರಯುಕ್ತ, ಅವರ ಸುಪುತ್ರ ರಾಹುಲ್ ಜಾರಕಿಹೊಳಿ ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.

ರಾಜ್ಯ ಕಾಂಗ್ರೆಸ್ ಯುವ ಘಟಕದ ಪ್ರದಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅವರು ರೂ.2 ಲಕ್ಷ ಪಾವತಿಸಿದ್ದಾರೆ. 2025ರ ಜೂನ್ 1ರಿಂದ 2026ರ ಮೇ 31ರವರೆಗಿನ ಅವಧಿಗೆ ಈ ಸಿಂಹವನ್ನು ರಾಹುಲ್ ಅವರು ದತ್ತು ಪಡೆದಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ಪವನ ಕುರನಿಂಗ ತಿಳಿಸಿದ್ದಾರೆ. ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಕಳೆದ ತಿಂಗಳು ಈ ಸಿಂಹವನ್ನು ಪ್ರವಾಸಿಗರ ವೀಕ್ಷಣೆಗಾಗಿ ಮುಕ್ತಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Check Also

ನಾಳೆ ಬೆಳಗಾವಿಯಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮಕ್ಕೆ ಗಣ್ಯರ ದಂಡು

ಪತ್ರಿಕಾ ದಿನಾಚರಣೆ ನಾಳೆ; ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಬೆಳಗಾವಿ: ಬೆಳಗಾವಿ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಪತ್ರಿಕಾ …

Leave a Reply

Your email address will not be published. Required fields are marked *