Breaking News

ರಾಹುಲ್, ಮೃಣಾಲ್‌ ಇಬ್ಬರೂ ಸಹ ಲೋಕಸಭೆ ಟಿಕೆಟ್ ಕೇಳಿಲ್ಲ.

ಬೆಳಗಾವಿ- ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಇವತ್ತು ಅನೇಕ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದು,ರಾಹುಲ್ ಜಾರಕಿಹೊಳಿ, ಮೃಣಾಲ್‌ ಹೆಬ್ಬಾಳಕರ ಇಬ್ಬರೂ ಸಹ ಲೋಕಸಭೆ ಟಿಕೆಟ್ ಕೇಳಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಲೋಕಸಭೆ ಚುನಾವಣೆಗೆ ಕಾರ್ಯಕರ್ತರ ಹಂತದಲ್ಲಿ ತಯಾರಿ ನಡೆಯುತ್ತಿದೆ.
ಅಭ್ಯರ್ಥಿ ಗಳನ್ನ ಗುರುತಿಸುವ ಕಾರ್ಯ ಆಗಬೇಕಿದೆ.ಚಳಿಗಾಲದ ಅಧಿವೇಶನದ ಸಂಧರ್ಭದಲ್ಲಿ ಸಭೆ ಮಾಡಿ ತೀರ್ಮಾನ ಮಾಡ್ತಿವಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಅಭ್ಯರ್ಥಿ ಆಯ್ಕೆ ಗೆ ಮಾನದಂಡ ಅಂದ್ರೆ, ಗೆಲ್ಲುವವನು ಆಗಿರಬೇಕು.ಆ ಸಮುದಾಯದಲ್ಲಿ ಗುರುತಿಸಿಕೊಂಡಿರಬೇಕು.ಪಕ್ಷ, ಕಾರ್ಯಕರ್ತರ ಬಗ್ಗೆ ಒಲವು, ಸಂಪರ್ಕ ಇರಬೇಕು.ಜಾತಿ ಜೊತೆಗೆ ಜನಪ್ರಿಯತೆ ಸಹ ಆ ಅಭ್ಯರ್ಥಿ ಹೊಂದಿರಬೇಕು.ಅಭ್ಯರ್ಥಿ ಯಾರು ಅನ್ನೋದು ಇನ್ನೂ ಬ್ಲ್ಯಾಂಕ್ ಇದೆ.ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಟಾರ್ಗೆಟ್ 20 ಸ್ಥಾನ ಗೆಲ್ಲುವುದಿದೆ ಎಂದರು.

ಸಮಾಜ, ಪಕ್ಷ ದ ಜಿಲ್ಲಾ ನಾಯಕರು, ಹೈಕಮಾಂಡ್ ಒಪ್ಪಬೇಕು.ಅಂತಹ ಅಭ್ಯರ್ಥಿ ಆಯ್ಕೆ ಆಗಲಿದೆ.ನಾಲ್ಕು ರಾಜ್ಯಗಳ ಚುನಾವಣೆ ಬಳಿ ಕಾರ್ಯಾಧ್ಯಕ್ಷರ ನೇಮಕ ಆಗಲಿದೆ.ಲೋಕಸಭೆ ಚುನಾವಣೆಗೆ ಸಚಿವರು ನಿಲ್ಲಬೇಕೆಂದು ಪಕ್ಷದ ವರಿಷ್ಠರು ಎಲ್ಲಿಯೂ ಸೂಚನೆ ಕೊಟ್ಟಿಲ್ಲ.
ಎಲ್ಲಿಯೂ ಮಂತ್ರಿಗಳು ನಿಲ್ಲಬೇಕೆಂದು ಹೇಳಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.

ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಸಾಧುನವರ ಹೆಸರು ಚರ್ಚೆ ಆಗಲಿದೆ.ಎಲ್ಲಾ ಆಕಾಂಕ್ಷಿಗಳ ಹೆಸರು ಚರ್ಚೆ ಆಗಲಿದೆ.ಜನೆವರಿ ಒಳಗೆ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಗಳ ಆಯ್ಕೆ ಆದ್ರೆ ಒಳ್ಳೆಯದು.ಅಭ್ಯರ್ಥಿ ಆಯ್ಕೆಗೂ ಮುನ್ನ ಅರ್ಜಿಗಳನ್ನ ಕರೆಯುತ್ತೇವೆ.ಲೋಕಸಭೆ ಅರ್ಜಿಗಳನ್ನು ನಾವು ಫ್ರೀಯಾಗಿ ತಗೊತಿವಿ.ಲಿಂಗಾಯತ, ಕುರುಬ ಸಮುದಾಯದಕ್ಕೆ ಟಿಕೆಟ್ ಕೊಡಲು ಚಿಂತನೆ ನಡೆದಿದೆ.
ಇವೆರಡೂ ಸಮಾಜ ದೊಡ್ಡದಾಗಿವೆ.ರಾಹುಲ್ ಜಾರಕಿಹೊಳಿ, ಮೃಣಾಲ್‌ ಹೆಬ್ಬಾಳಕರ ಇಬ್ಬರೂ ಸಹ ಲೋಕಸಭೆ ಟಿಕೆಟ್ ಕೇಳಿಲ್ಲ.ಇಬ್ಬರೂ ಎಲ್ಲಿಯೂ ಆಸಕ್ತಿ ಇಲ್ಲವೇ ಇಲ್ಲ.ಯಾರು ಆಕಾಂಕ್ಷಿ ಗಳ ಅನ್ನೋದು ಡಿಸೆಂಬರ್ ನಲ್ಲಿ ಚರ್ಚೆ ಆಗಲಿದೆ.
ವಿಧಾನ ಸಭೆ ಚುನಾವಣೆ ಯಲ್ಲಿ ಸೋತವರು ಸ್ಪರ್ಧೆ ಮಾಡಬಹುದು.ಬೆಳಗಾವಿ ಲೋಕಸಭೆಗೆ ಲಿಂಗಾಯತ,
ಚಿಕ್ಕೋಡಿ ಲೋಕಸಭೆಗೆ ಕುರುಬ ಸಮುದಾಯಕ್ಕೆ ಕೊಡುವ ಚಿಂತನೆ ನಡೆದಿದೆ ಎಂದ ಸತೀಶ್ ಜಾರಕಿಹೊಳಿ ಹೇಳಿದ್ರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *