ಗೋವಾ ಗಡಿಯಲ್ಲಿ ಖಾಕಿ ದಾಳಿ,ಆಕ್ರಮ ಮರಳು ದಾಸ್ತಾನು ಪತ್ತೆ…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಗೋವಾ ಗಡಿಯಲ್ಲಿ ಆಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆದಿದೆ‌,ಪಕ್ಕದ ಗೋವಾ ರಾಜ್ಯಕ್ಕೆ ಬೆಳಗಾವಿಯಿಂದ ಆಕ್ರಮ ಮರಳು ಸಾಗಿಸುವ ದಂಧೆ ನಿರಂತರವಾಗಿ ನಡೆದಿದ್ದು ಇಂದು ಬೆಳಗ್ಗೆ ಪೋಲೀಸರು ಕಾರ್ಯಾಚರಣೆ ನಡೆಸಿ ಆಕ್ರಮ ಮರಳು ದಾಸ್ತಾನು ಪತ್ತೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಅಸೋಗಾ ಗ್ರಾಮದಲ್ಲಿ ಆಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳನ್ನು ವಶಕ್ಕೆ ಪಡೆದು,ಪ್ರಕರಣ ದಾಖಲಿಸಿ ಈ ಪ್ರಕರಣವನ್ನು ಪೋಲೀಸರು ಖಾನಾಪೂರ ತಹಶೀಲ್ದಾರ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಇನ್ನುವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿಲ್ಲ.ಜಿಲ್ಲೆಯ ನದಿಗಳು,ಜಲಾಶಯಗಳು,ಹಳ್ಳಗಳು ಬತ್ತಿಹೋಗಿದ್ದು ಇಲ್ಲಿ ಆಕ್ರಮವಾಗಿ ಮರಳುಗಾರಿಕೆ ನಡೆಸುವ ಆಕ್ರಮ ದಂಧೆ ಶುರುವಾಗಿದ್ದು,ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲೆಯ ಪೋಲೀಸರು ಕಾರ್ಯಾಚರಣೆ ಆರಂಭಿಸಿ ಆಕ್ರಮ ಮರಳು ದಂಧೆಗೆ ಲಗಾಮು ಹಾಕುತ್ತಿದ್ದಾರೆ.

found illegal sand storage near asoga village . It belongs to Prasad manerikar , with panchanam handed over to tahashildar khanapur

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *