ಬೆಳಗಾವಿ- ತಲಾಠಿಯೊಬ್ಬ ತನ್ನ ಕಾರಿನಲ್ಲಿ 1 ಕೋಟಿ 10 ಲಕ್ಷ ರೂ ಸಾಗಿಸುತ್ತಿರುವಾಗ ಪೋಲೀಸರು ದಾಳಿ ಮಾಡಿ ದಾಖಲೆ ಇಲ್ಲದ ಈ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಲಗತ್ತಿ ಚೆಕ್ ಪೋಸ್ಟ್ ಹತ್ತಿರ ಗ್ರಾಮ ಲೆಕ್ಕಾಧಿಕಾರಿಯ ಕಾರು ನಿಲ್ಲಿಸಿ ಪೋಲೀಸರು ತಪಾಸಣೆ ಮಾಡಿದ ಸಂಧರ್ಭದಲ್ಲಿ ತಲಾಠಿ ಕಾರಿನಲ್ಲಿ ಕೋಟಿ ಹತ್ತು ಲಕ್ಷ ಪತ್ತೆಯಾಗಿದ್ದು ಪೋಲೀಸರು ವಶಕ್ಕೆ ಪಡೆದಿದ್ದಾರೆ.ದಾಖಲೆ ಇಲ್ಲದೆ ಸಾಗಿಸ್ತಿದ್ದ 1 ಕೋಟಿ 10 ಲಕ್ಷ ನಗದು ಜಪ್ತಿಯಾಗಿದೆ.
ನಿಪ್ಪಾಣಿ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ವಿಠ್ಠಲ್ ಢವಳೇಶ್ವರ, ಕಾರಿನಲ್ಲಿ ಈ ಹಣ ಪತ್ತೆಯಾಗಿದೆ.ಬೆಳಗಾವಿಯಿದ ಬಾಗಲಕೋಟೆಗೆ ಹಣ ಸಾಗಿಸ್ತಿದ್ದ ಎಂಬ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದೆ.ಖಚಿತ ಮಾಹಿತಿ ಮೇರೆಗೆ ರಾಮದುರ್ಗ ಡಿವೈಎಸ್ಪಿ ಎಂ ಪಾಂಡುರಂಗ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ.ಅಪಾರ ಪ್ರಮಾಣದ ಹಣ ಸಿಕ್ಕ ಹಿನ್ನೆಲೆ ಆದಾಯ ತೆರಿಗೆ ಅಧಿಕಾರಿಗಳಿಗೆ ಪ್ರಕರಣ ಹಸ್ತಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					