ಕೊಂಬುಗಳಿಗೆ ಪ್ರಮಾಣ ಪತ್ರ ಇದೇ ಅಂತೆ


ಸ್ಫೊಟಕ ಮಾಹಿತಿ:

ಬೆಳಗಾವಿ:ಮಂಗಳವಾರ ಮಧ್ಯಾಹ್ನ ಶೆಟ್ಟಿ ಗಲ್ಲಿಯಲ್ಲಿ ದಾಳಿ ಮಾಡಿ ಕಾಡು ಪ್ರಾಣಿಗಳ ಕೋಟಿಗಟ್ಟಲೆ ಎನ್ನಲಾದ ಕೊಂಬುಗಳಿಗೆ ಸ್ವತಃ ಅರಣ್ಯ ಇಲಾಖೆಯೇ ಕಳೆದ ಎರಡು ದಶಕಗಳ ಹಿಂದೆಯೇ ಅಧಿಕೃತವಾಗಿ ಕೊಂಬುಗಳ ಓನರ್ಶಿಪ್ ಪ್ರಮಾಣಪತ್ರ ಆಗಿನ ಬೆಳಗಾವಿ RFO ಅವರಿಂದ ಕೊಡಲ್ಪಟ್ಟಿದ್ದು ಸದ್ಯ ಬೆಳಕಿಗೆ ಬಂದಿದೆ.

ದಿನಾಂಕ ೨೦. ೦೧. ೧೯೯೮ರಂದೇ ಖಂಜರಗಲ್ಲಿಯ ಶೇರಖಾನ್ ಮಹಮ್ಮದೀಯ ಖಾನ್ ಸೌದಾಗರ ಎಂಬುಔರಿಗೆ ಕೊಡಲ್ಪಟ್ಟ ಸರಕಾರಿ certificate ಲಭ್ಯವಾಗಿದ್ದು ಈಗ ಆ ವ್ಯಕ್ತಿ ಮೃತಪಟ್ಟಿದ್ದು ಆತನ ಮಗ ಸಲೀಂಖಾನ್ ಎಂಬಾತ ಇಂದು ಬಂಧನಕ್ಕೊಳಗಾಗಿದ್ದಾನೆ. ಸುಮಾರು 1ಟನ್ ವಿವಿಧ ಬಗೆಯ ಕೊಂಬುಗಳು ದೊರೆತಿದ್ದು, ಇವು ನಿಜವಾಗಿಯೂ ಅಕ್ರಮವಾಗಿದ್ದರೆ ಇಷ್ಟು ಪ್ರಮಾಣ ಹೇಗೆ ಇಷ್ಟು ದಿವಸ ಬಚ್ಚಿಟ್ಟುಕೊಂಡು ಉಳಿದವು. ಕೋರ್ಟನಲ್ಲೂ ಕೂಡ ಇದರ ಬಗ್ಗೆ ವ್ಯಾಜ್ಯ ಇರುವ ಮಾಹಿತಿ ಇದೆ. ಸದರಿ ಸಿಕ್ಕ ಕೊಂಬುಗಳ ಬಗ್ಗೆ ಅರಣ್ಯ ಇಲಾಖೆಯೂ ವ್ಯಾಪಕ ತನಿಖೆ ಪ್ರಾರಂಭಿಸಿದ್ದು ಮಾಹಿತಿ ಕಲೆಗೆ ಇಳಿದಿದೆ. ಬಂಧಿತ ಸಲೀಂಖಾನ್ ಈಗ ಪೊಲೀಸ ಮತ್ತು ಅರಣ್ಯ ಸಿಬ್ಬಂಧಿ ವಿಚಾರಣೆಗೆ ಒಳಗಾಗಿದ್ದು ಪ್ರಕರಣ ಟ್ವಿಸ್ಟ್ ಮತ್ತು ಕುತೂಹಲ ಕೆರಳಿಸಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *