ಬೆಳಗಾವಿ- ವಾಸ್ಕೋ ನಿಜಾಮುದ್ದೀನ್ ರೈಲಿನ ಜನರಲ್ ಡಬ್ಬಿಯಲ್ಲಿ ಪ್ರವಾಸ ಮಾಡಿ,ಇತರ ಪ್ರಯಾಣಿಕರೊಂದಿಗೆ,ಫ್ರೆಂಡ್ ಶೀಪ್ ಮಾಡಿ ಅವರಿಗೆ ಮತ್ತಿನ ಚಾಕಲೇಟ್ ನೀಡಿ ಪ್ರಯಾಣಿಕರನ್ನು ಲೂಟಿ ಮಾಡುತ್ತಿದ್ದ ಚಾಕಲೇಟ್ ಗ್ಯಾಂಗ್ ರೇಲ್ವೆ ಪೋಲೀಸರ ಬಲೆಗೆ ಬಿದ್ದಿದೆ.
ರೈಲಿನಲ್ಲಿ ಪ್ರಯಾಣಿಕನೊಬ್ಬನಿಗೆ,ಮತ್ತಿನ ಚಾಕಲೇಟ್ ಕೊಟ್ಟು ಆತನಿಗೆ ಸಮೋಸಾ ತಿನ್ನಿಸಿ,ಆತನ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದ,ಬಿಹಾರ ಮೂಲದ ಮೂವರು ದರೋಡೆಕೋರ ರನ್ನು ಬೆಳಗಾವಿ ರೆಲ್ವೆ ಪೋಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಮಹ್ಮದ ಮುಕ್ತಾರ,ಶಾದಾಬ್,ಮತ್ತು ಅನ್ವರ್ ಆಲಂ ಎಂಬ ಮೂವರು ಆರೋಪಿಗಳನ್ನು ಬಂಧಿಸಿರುವ ಬೇಳಗಾವಿ ರೇಲ್ವೆ ಪೋಲೀಸ್ ವಿಭಾಗದ ಪೋಲೀಸರು ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ