ಬೈಕ್ ಮೇಲೆ ಮರ ಬಿದ್ದು ಯುವಕನ ಸಾವು,ಇಬ್ಬರಿಗೆ ಗಾಯ

ಬೆಳಗಾವಿ- ಬೈಕ್ ಮೇಲೆ ಗೆಳೆಯರು ಸೇರಿಕೊಂಡು ಪಕ್ಕದ ಊರಿಗೆ ಹೋಗುವಾಗ ರಸ್ತೆ ಪಕ್ಕದ ಅಕೇಶಿಯಾ ಮರ ಬೈಕ್ ಮೇಲೆ ಬಿದ್ದು 20 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಪಕ್ಕದ ಬೆಳಗುಂದಿ ಕರ್ಲೆ ರಸ್ತೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದ್ದು ಬೈಕ್ ಮೇಲೆ ಮರ ಬಿದ್ದ ಪರಿಣಾಮ 20 ವರ್ಷದ ಸೋಮನಾಥ ಮುಚ್ಚಂಡಿಕರ್ ಸ್ಥಳದಲ್ಲೇ ಸಾವನ್ನೊಪ್ಪಿದ್ದಾನೆ. ಸ್ವಪ್ನೀಲ್ ದೇಸಾಯಿ,ವಿಠ್ಠಲ ತಳವಾರ ಎಂಬಾತ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಗಾಯಾಳು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ಲೆ- ಬೆಳಗುಂದಿ ರಸ್ತೆಯಲ್ಲಿ ಈ ಘಟನೆ ನಡೆದಿದೆ‌. ಈ ಯುವಕರು ಬೈಕ್ ಮೇಲೆ ಸಂಚರಿಸುತ್ತಿರುವಾಗ ಮರ ಬೈಕ್ ಮೇಲೆ ಬಿದ್ದಿದೆ. ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *