Breaking News

ಶಬ್ದ ಕೇಳಿತು …ಪ್ರಾಣ ಉಳಿಯಿತು….ಆದ್ರೆ ಮನೆ ಕುಸಿಯಿತು…!!!

ಬೆಳಗಾವಿ- ಖಾನಾಪೂರ ಪ್ರದೇಶದಲ್ಲಿ ಮಳೆ ವಿಪರೀತಾಗಿ ಸುರಿಯುತ್ತಿದೆ. ಪ್ರತಿದಿನ ಮನೆಗಳು ಕುಸಿದು ಬೀಳುವ ಪ್ರಕರಣಗಳು ಖಾನಾಪೂರ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿವೆ. ನಿನ್ನೆ ತಡರಾತ್ರಿಯೂ ಮನೆಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾದ ಮತ್ತೊಂದು ಘಟನೆ ನಡೆದಿದೆ.

ಖಾನಾಪೂರ ತಾಲ್ಲೂಕಿನ ಕಸಮಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾವಂತ್ ತೇಗೂರ್ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ತುಂಬು ಗರ್ಭಿಣಿ ಪ್ರಣಾಪಾಯದಿಂದ ಪಾರಾಗಿದ್ದಾಳೆ.

ತಡರಾತ್ರಿ ಮಳೆಯ ಜೊತೆ ಬೀರುಗಾಳಿ ಬೀಸಿದೆ.ಮಳೆಯ ಅರ್ಭಟ ಹೆಚ್ಚಾದ ಹಿನ್ನಲೆಯಲ್ಲಿ ಮನೆಯಲ್ಲಿ ಮಲಗಿದ್ದವರು ನಿದ್ದೆಯಿಂದ ಎಚ್ಚರವಾಗಿದ್ದಾರೆ.ಮನೆಯ ಗೋಡೆ ಬಿರುಕು ಬಿಡುವ ಶಬ್ದ ಕೇಳಿದಾಕ್ಷಣ ಮನೆಯಲ್ಲಿದ್ದ ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು ಆರು ಜನ ಮನೆಯಿಂದ ಹೊರಗಡೆ ಓಡಿ ಹೋಗುವದಷ್ಟೆ ತಡ ಮನೆಯ ಗೋಡೆ ಕುಸಿದು ಬಿದ್ದಿದೆ.ಮನೆಯಲ್ಲಿ ಆರು ಜನ ಸುರಕ್ಷಿತವಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ, ನಂದಗಡ ಠಾಣಾ ವ್ಯಾಪ್ತಿಯ ಕಸಮಳಗಿಯಲ್ಲಿ ಈ ಘಟನೆ ನಡೆದಿದೆ.

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *