ಬೆಳಗಾವಿ- ದಿ.ಸುರೇಶ್ ಅಂಗಡಿ ಅವರು ಸಂಸದರಾಗಿ,ಕೇಂದ್ರದ ರಾಜ್ಯ ರೇಲ್ವೆ ಮಂತ್ರಿಗಳಾಗಿ,ಅಲ್ಪಾವಧಿಯಲ್ಲಿಯೇ ಮಾಡಿರುವ ಕ್ರಾಂತಿಯನ್ನು ಈ ರಾಜ್ಯದ ಜನ ಎಂದಿಗೂ ಮರೆಯಲು ಸಾದ್ಯವಿಲ್ಲ ಎಂದು,ಬಿಜೆಪಿ ಯುವ ಮುಖಂಡ ರಾಜೀವ ಟೋಪಣ್ಣವರ ಹೇಳಿದ್ದಾರೆ,
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಸಾವಗಾಂವ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ, ಮಂಗಲಾ ಸುರೇಶ್ ಅಂಗಡಿ ಅವರ ಪರವಾಗಿ ಮತಯಾಚಿಸಿದ ಅವರು,ಸುರೇಶ್ ಅಂಗಡಿ ಅವರ ಪ್ರಯತ್ನದ ಫಲವಾಗಿ ಬೆಳಗಾವಿ ನಗರ ಮೊದಲ ಹಂತದಲ್ಲೇ ಸ್ಮಾರ್ಟ್ ಸಿಟಿ,ಪಟ್ಟಿಯಲ್ಲಿ ಸೇರಲು ಸಾದ್ಯವಾಯಿತು,ಬೆಳಗಾವಿಗೆ ಪಾಸ್ ಪೋರ್ಟ್ ಕೇಂದ್ರ,ಕದ್ರೀಯ ವಿದ್ಯಾಲಯದ ಹೆಚ್ಚುವರಿ ಶಾಖೆ,ಬೆಳಗಾವಿ ನಗರದಲ್ಲಿ ರೇಲ್ವೇ ಮೇಲ್ಸೇತುವೆ ಸೇರಿದಂತೆ ಸುರೇಶ ಅಂಗಡಿ ಅವರು ಬೆಳಗಾವಿ ಜಿಲ್ಲೆಗೆ ಅಗಣಿತ ಕೊಡುಗೆಗಳನ್ನು ನೀಡಿದ್ದು ಅವರ ಪತ್ನಿ ತಾಯಿ ಮಂಗಲಾ ಅಂಗಡಿ ಅವರಿಗೆ ದಾಖಲೆ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ದಿ.ಸುರೇಶ್ ಅಂಗಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ ಎಂದು ರಾಜೀವ ಟೋಪಣ್ಣವರ ಮತದಾರರಲ್ಲಿ ಮನವಿ ಮಾಡಿಕೊಂಡರು,
ಸುರೇಶ್ ಅಂಗಡಿ ಅವರು ಬೆಳಗಾವಿ-ಕಿತ್ತೂರು- ಧಾರವಾಡ ಹೊಸ ರೈಲು ಮಾರ್ಗವನ್ನು ಮಂಜೂರು ಮಾಡಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ,ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು,ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದರೆ ಮಾತ್ರ ಅಭಿವೃದ್ಧಿ ಸಾದ್ಯವಾಗಿದ್ದು,ಕಾಂಗ್ರೆಸ್ಸಿನ ಟೀಕೆಗಳಿಗೆ ಕಿವಿಗೊಡದೇ ಬಿಜೆಪಿಗೆ ಮತ ನೀಡಿ ಬೆಳಗಾವಿ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ರಾಜೀವ ಟೋಪಣ್ಣವರ ಮತಯಾಚಿಸಿದರು,
ಬುಡಾ ಅದ್ಯಕ್ಷ ಗೂಳಪ್ಪ ಹೊಸಮನಿ ಮಾತನಾಡಿ,ಸುರೇಶ್ ಅಂಗಡಿ ಅವರ ಸಾಧನೆ ಅಪಾರ,ಅವರ ನಯ ವಿನಯ,ಎಲ್ಲರನ್ನು ಪ್ರೀತಿಸುವ ಗುಣ,ಅವರ ಸಾಮಾಜಿಕ ಕಳಕಳಿಯನ್ನು ನೋಡಿ ಜನ ಅವರನ್ನು ಮೆಚ್ಚುತ್ತಿದ್ದರು,ಸುರೇಶ್ ಅಂಗಡಿ ಅವರು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ,ಅವರು ಮಾಡಿರುವ ಸೇವೆ ಇಂದಿಗೂ ಜೀವಂತವಾಗಿದ್ದು,ಈ ಬಾರಿಯ ಚುನಾವಣೆಯಲ್ಲಿ ಮಂಗಲಾ ಅಂಗಡಿ ಅವರು ದಾಖಲೆ ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯೆಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಸುರೇಶ ಅಂಗಡಿ ಅವರ ಪುತ್ರಿ ಸ್ಪೂರ್ತಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.ಮನೆಮನೆಗೆ ತೆರಳಿ ಮತಯಾಚಿಸುವ ಸಂಧರ್ಭದಲ್ಲಿ ಬಿಜೆಪಿ ಕಾರ್ಯಕರ್ತರು,ರಕ್ತದ ಕಣ,ಕಣ,ಕುಣಿಯುತಿದೆ,ಅಂಗಡಿ,ಅಂಗಡಿ ಎನ್ನುತ್ತಿದೆ..ಎಂದು ಘೋಷಣೆ ಕೂಗುವ ಮೂಲಕ,ದಿ.ಸುರೇಶ್ ಅಂಗಡಿ ಅವರನ್ನು ಸ್ಮರಿಸಿದರು.