Breaking News

ಗಣೇಶ ಮಂಟಪದಲ್ಲಿ ಯಾರ ಪೋಟೋ ಹಾಕಬೇಕು,ಆಮ್ ಆದ್ಮಿ ಪಕ್ಷ ಹೇಳಿದ್ದೇನು ಗೊತ್ತಾ..??

ಬೆಳಗಾವಿ
ನಗರದಲ್ಲಿ ಚಿರತೆ ಕಳೆದ ಇಪ್ಪತ್ತು ದಿನಗಳಿಂದ ರಸ್ತೆ ಮೇಲೆ ಓಡಾಡಿ,ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು,ಕಾಟಾಚಾರದ ಚಿರತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜಕುಮಾರ ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರತೆ ಅರಣ್ಯ ಸಚಿವರನ್ನು ಭೇಟಿಯಾಗಲು ಬಂದಿರಬಹುದು,ಅದರಲ್ಲಿ ತಪ್ಪೇನಿದೆ.ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಉಡಾಫೆಯ ಹೇಳಿಕೆ ನೀಡಿದ್ದಾರೆ.ಬೆಳಗಾವಿ ಮಹಾನಗರದಲ್ಲಿ ಚಿರತೆ ನುಗ್ಗಿ ನಗರದ ಜನತೆ ಭಯಭೀತರಾಗಿದ್ದು, ಚಿರತೆ ಹಿಡಿದು ಅದನ್ನು ಕಾಡಿಗೆ ಸ್ಥಳಾಂತರ ಮಾಡುವ ವಿಚಾರವನ್ನು ಅರಣ್ಯ ಸಚಿವರು ಲೇವಡಿ ಮಾಡುವ ಮೂಲಕ ಸಚಿವ ಉಮೇಶ್ ಕತ್ತಿ ಬೆಳಗಾವಿ ಜನತೆಯ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಟೋಪಣ್ಣವರ ಕಿಡಿಕಾರಿದ್ದಾರೆ.

ಸಚಿವ ಉಮೇಶ್ ಕತ್ತಿ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವದು ಬಹಿರಂಗ ಸತ್ಯವಾಗಿದ್ದು,ಅವರ ಹೊಂದಾಣಿಕೆ ರಾಜಕಾರಣಕ್ಕೆ ಕ್ಷೇತ್ರದ ಜನ ಮರುಳಾಗಬಾರದು.ಉಮೇಶ್ ಕತ್ತಿ ಅವರು ಗಂಭೀರವಾಗಿರುವ ವಿಚಾರಗಳನ್ನು ಲೇವಡಿ ಮಾಡುತ್ತಾರೆ.ಎಂದು ಟೋಪಣ್ಣವರ ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಚಿರತೆ ಹಿಡಿಯಲು ಎಕ್ಸಪರ್ಟ್ ಗಳು ಬರಲಿ

ಬೆಳಗಾವಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯು ನಡೆಸುತ್ತಿರುವ ಕಾರ್ಯಾಚರಣೆಯ ವಿಧಾನ ಸರಿ ಇಲ್ಲ.ಕಬ್ಬಿನ ತೋಟದಲ್ಲಿ ಮಂಗಗಳು ಹೊಕ್ಕಾಗ ಮಂಗಗಳನ್ನು ಓಡಿಸುವ ರೀತಿಯಲ್ಲಿ,ಚಿರತೆ ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದು, ಚಿರತೆ ಹಿಡಿಯಲು ಎಕ್ಸಪರ್ಟ್ ತಂಡವನ್ನು ಬೆಳಗಾವಿಗೆ ಕರೆಸುವಂತೆ ಒತ್ತಾಯಿಸಿದ್ದಾರೆ.
ದೇಶದ ಸ್ವಾತಂತ್ಯಕ್ಕಾಗಿ ಜನಜಾಗೃತಿ ಮೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶ ಉತ್ಸವ ಈಗ ರಾಷ್ಟ್ರೀಯ ಉತ್ಸವವಾಗಿದ್ದು,ಈ ಉತ್ಸವದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ಥಳೀಯ ಮಹಾಪುರುಷರನ್ನು ಸ್ಮರಿಸುವಂತೆ ಟೋಪಣ್ಣವರ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ಗಣೇಶ ಉತ್ಸವದ ಮಂಟಪಗಳಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರ ಹಾಕುವದರ ಜೊತೆಗೆ,ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆ,ವೀರರಾಣಿ ಕಿತ್ತೂರು ಚನ್ನಮ್ಮಾಜಿ,ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪೋಟೋ ಹಾಕುವದರ ಮೂಲಕ ನಾಡಿನ ಇತಿಹಾಸಪುರುಷರನ್ನು ಸ್ಮರಿಸುವದು ನಾಡಿನ ಜನರ ಕರ್ತವ್ಯವಾಗಿದ್ದು ಈ ವಿಚಾರದಲ್ಲಿ ರಾಜಕಾರಣ ಮಾಡುವದು ಸರಿಯಲ್ಲ ಎಂದು ರಟೋಪಣ್ಣವರ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷವು ನಾಡಿನ ಸಂಸ್ಕೃತಿ,ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಗಣೇಶ ಉತ್ಸವ ಮಂಡಳಗಳಿಗೆ,ವೀರರಾಣಿ,ಕಿತ್ತೂರು ಚನ್ನಮ್ಮಾ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗು ಸಾರ್ವಜನಿಕ ಗಣೇಶ ಉತ್ಸವದ ಹರಿಕಾರ ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರಗಳನ್ನು ಹಂಚುವ ಮೂಲಕ ಜಿಲ್ಲೆಯ ಯುವಕರಲ್ಲಿ ಸ್ಥಳೀಯ ಮಹಾಪುರುಷರನ್ನು ಸ್ಮರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *