Breaking News

ಕಾಂಗ್ರೆಸ್ ನಾಯಕರಿಗೆ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಸುಣ್ಣ ಬಣ್ಣ ಹಚ್ವುವ ಯೋಗ್ಯತೆಯೂ ಇಲ್ಲ- ಟೋಪಣ್ಣವರ

ಬೆಳಗಾವಿಯ ಕಾಂಗ್ರೆಸ್ ಬಾವಿ,ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಅವರು ಏಕೈಕ ಕಾಂಗ್ರೆಸ್ ಅಧಿವೇಶನ ಮಾಡಿದ ಐತಿಹಾಸಿಕ ಸ್ಥಳ,ಈ ಸ್ಥಳದಿಂದಲೇ ಕಸಗೂಡಿಸಿ, ಮಾದ್ಯಮಗಳಿಗೆ ಬ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಆಂದೋಲನ ಎಂಬ ಪೋಜು ಕೊಟ್ಟ ಕಾಂಗ್ರೆಸ್ ನಾಯಕರು ಲಕ್ಷಾಂತರ ರೂ ಖರ್ಚು ಮಾಡಿ ಕಟೌಟ್ ಬ್ಯಾನರ್ ಹಚ್ಚಿ ಪ್ರಜಾಧ್ವನಿ ಎಂಬ ಬಸ್ ಯಾತ್ರೆ ಆರಂಭಿಸಿರುವ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಬೆಳಗಾವಿಯ ಐತಿಹಾಸಿಕ ಮಹಾತ್ಮಾ ಗಾಂಧಿ ಅವರ ಸ್ಮಾರಕಕ್ಕೆ ಸುಣ್ಣ ಬಣ್ಣ ಹಚ್ವುವ ಯೋಗ್ಯತೆ ಇಲ್ಲ,ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಆರೋಪಿಸಿದ್ದಾರೆ.

ಬೆಳಗಾವಿ- ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಸಂಘಟನಾತ್ಮಕ ವಾಗಿ ಹಳ್ಳಿ ಹಳ್ಳಿಗಳಲ್ಲಿ ಬೆಳೆಯುತ್ತಿದೆ. ರಾಜ್ಯದ ಕಾಂಗ್ರೆಸ್ ನಾಯಕರಿಗೆ ಆಮ್ ಆದ್ಮಿ ಪಕ್ಷದ ಭೀತಿ ಎದಿರಾಗಿದ್ದು, ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ನಕಲು ಮಾಡುತ್ತಿದೆ ಎಂದು ಆಪ್ ಮುಖಂಡ ರಾಜೀವ ಟೋಪಣ್ಣವರ ಆರೋಪಿಸಿದ್ದಾರೆ.

ಆಮ್ ಆದ್ಮಿ ಪಕ್ಷ ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಅನೇಕ ಕಠಿಣ ಕ್ರಮಗಳನ್ನು ಜರುಗಿಸಿದೆ. ಜನಪರವಾದ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದು ಡಿಕೆ ಶಿವಕುಮಾರ್ ಮತ್ತು ಸಿದ್ರಾಮಯ್ಯನವರು ಆಮ್ ಆದ್ಮಿಯ ಪೊರಕೆ ಹಿಡಿದು ಕಸಗೂಡಿಸಿ ಬ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ ಎನ್ನುವ ಸಂದೇಶ ನೀಡಿದ್ದು ಹಾಸ್ಯಾಸ್ಪದವಾಗಿದೆ ಎಂದು ಟೋಪಣ್ಣವರ ಲೇವಡಿ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಜಾಬ್ ನಲ್ಲಿ ಬಡ ಕುಟುಂಬಗಳಿಗೆ,300 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಕೊಡುತ್ತಿದೆ.ಕರ್ನಾಟಕದ ಕಾಂಗ್ರೆಸ್ ನಾಯಕರು ಪ್ರತಿ ಬಡಕುಟುಂಬಕ್ಕೆ 200 ಯುನಿಟ್ ವಿದ್ಯತ್ ನೀಡುವದಾಗಿ ಪ್ರಚಾರ ಮಾಡುವ ಮೂಲಕ ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ನಕಲು ಮಾಡುತ್ತಿದೆ. ಎಂದು ಟೋಪಣ್ಣವರ ಆರೋಪಿಸಿದ್ದಾರೆ.

ಕರ್ನಾಟಕದ ಕಾಂಗ್ರೆಸ್ ನಾಯಕರ ಹತ್ತಿರ ಹೊಸ ಯೋಜನೆಗಳಿಲ್ಲ,ಬಡವರ ಉದ್ಧಾರಕ್ಕಾಗಿ ಹೊಸ ಆಲೋಚನೆಗಳಿಲ್ಲ,ಆಮ್ ಆದ್ಮಿ ಪಕ್ಷದ ಪೊರಕೆ ಹಿಡಿದು,ಆಪ್ ಪಕ್ಷದ ಯೋಜನೆಗಳನ್ನೇ ಮುಂದಿಟ್ಟುಕೊಂಡು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದು ರಾಜ್ಯದ ಜನ ಕಾಂಗ್ರೆಸ್ಸಿನ ನಕಲು ಮನಸ್ಥಿತಿಗೆ ಸೊಪ್ಪು ಹಾಕುವದಿಲ್ಲ ಎಂದು ರಾಜೀವ ಟೋಪಣ್ಣವರ ಹೇಳಿದ್ದಾರೆ.

ಬೆಳಗಾವಿಯ ವೀರಸೌಧ ಮಹಾತ್ಮಾ ಗಾಂಧೀಜಿಯವರು ಅಧಿವೇಶನ ನಡೆಸಿದ ಐತಿಹಾಸಿಕ ಸ್ಥಳ,ಈ ಐತಿಹಾಸಿಕ ಸ್ಥಳದಿಂದ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ನೀಡಿರುವ ಕಾಂಗ್ರೆಸ್ ಮಹಾತ್ಮಾ ಗಾಂಧಿಜಿಯವರ ವೀರಸೌಧ ಕಟ್ಟಡಕ್ಕೆ ಸುಣ್ಣಬಣ್ಣ ಹಚ್ಚದೇ ಐತಿಹಾಸಿಕ ಕಟ್ಟಡಕ್ಕೆ ಅವಮಾನ ಮಾಡಿದೆ ಎಂದು ಟೋಪಣ್ಣವರ ಕಿಡಿಕಾರಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *