ಬೆಳಗಾವಿ- ಕರ್ನಾಟಕ,ಮಹಾರಾಷ್ಟ್ರ ಮತ್ತು ಗೋವಾ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣ ಅಂತರಾಷ್ಟ್ರೀಯ ವಿಮಾನ ನಿಲ್ಧಾಣವಾಗಲು ಅರ್ಹವಾಗಿದ್ದು,ಇದನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವನ್ನಾಗಿ ಮೇಲ್ದರ್ಜೆಗೆರಿಸುವಂತೆ ಆಪ್ ಮುಖಂಡ ರಾಜೀವ ಟೋಪಣ್ಣವರ ಒತ್ತಾಯಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ಧಾಣ ಪ್ರಯಾಣಿಕರ ಓಡಾಟದ ವಿಚಾರದಲ್ಲಿ ರಾಜ್ಯದಲ್ಲೇ ಎರಡನೇಯ ಸ್ಥಾನ ಪಡೆದಿತ್ತು,ಇದನ್ನು ಸಹಿಸಲಾಗದ ಹುಬ್ಬಳ್ಳಿಯ ಬಿಜೆಪಿ ನಾಯಕರು ಖಾಸಗಿ ವಿಮಾನ ಸಂಸ್ಥೆಗಳ ಮೇಲೆ ಒತ್ತಡ ಹೇರಿ, ಬೆಳಗಾವಿಯ 12 ವಿಮಾನ ಸೇವೆಗಳನ್ನು ರದ್ದು ಮಾಡಿದ್ದಾರೆ.ಬೆಳಗಾವಿಗೆ ಘೋರ ಅನ್ಯಾಯವಾಗಿದ್ದರೂ ಬೆಳಗಾವಿಯ ಸಂಸದೆ ಮಂಗಲಾ ಅಂಗಡಿ,ಈರಣ್ಣಾ ಕಡಾಡಿ ಅವರು ಕಾಟಾಚಾರಕ್ಕೆ ಕೇಂದ್ರದ ಮಂತ್ರಿಗಳಿಗೆ ಮನವಿ ಅರ್ಪಿಸಿ ಕೈತೊಳೆದುಕೊಂಡಿದ್ದು ದುರ್ದೈವದ ಸಂಗತಿಯಾಗಿದೆ.ಎಂದು ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣ ಐತಿಹಾಸಿಕ ವಿಮಾನ ನಿಲ್ದಾಣವಾಗಿದ್ದು ಈ ನಿಲ್ಧಾಣದಿಂದ ವಿಮಾನಗಳ ಹಾರಾಟ ಹೆಚ್ಚಾಗಿ,ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿ ಈ ನಿಲ್ಧಾಣ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿ ಪಡೆಯುತ್ತಿರುವಾಗಲೇ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಬೆಳಗಾವಿಯ 12 ವಿಮಾನ ಸೇವೆಗಳು ರದ್ದಾಗಿ, ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣವನ್ನು ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆದಿದ್ದು,ಈ ವಿಚಾರದಲ್ಲಿ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಪ್ರತಿಭಟಿಸಿ ಬೆಳಗಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಟೋಪಣ್ಣವರ ಒತ್ತಾಯಿಸಿದ್ದಾರೆ.
ಬೆಳಗಾವಿಯಿಂದ ರದ್ದಾದ ವಿಮಾನಗಳ ಸೇವೆಯನ್ನು ಆರಂಭಿಸಬೇಕು,ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ಧಾಣವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಜೊತೆಗೆ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಹೆಸರು ನಾಮಕರಣ ಮಾಡುವಂತೆ ಆಮ್ ಆದ್ಮಿ ಪಕ್ಷ ಟ್ವೀಟರ್ ಅಭಿಯಾನ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲಿದ್ದು ಈ ಅಭಿಯಾನದಲ್ಲಿ ಬೆಳಗಾವಿಯ ಎಲ್ಲ ಜನತೆ ಪಾಲ್ಗೊಂಡು ಕೇಂದ್ರ ಸರ್ಕಾರದ ಗಮನಸೆಳೆಯಲು ಸಹರಿಸುವಂತೆ ಆಪ್ ಮುಖಂಡ ರಾಜೀವ ಟೋಪಣ್ಣವರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.