ಬೆಳಗಾವಿ (20)- ಬಡಾಲ ಅಂಕಲಗಿ ಪಿಕೆಪಿಎಸ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣಕ್ಕೆ ಹಿನ್ನಡೆಯಾಗಿದೆ
12 ನಿರ್ದೇಶಕ ಸ್ಥಾನದ ಪೈಕಿ ಎಲ್ಲಾ ಸ್ಥಾನವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಬಣ ಜಯ ಸಾಧಿಸಿದೆ. ಜನೆವರಿ 18 ಕ್ಕೆ ನಡೆದ ಚುನಾವಣೆ ಅತ್ಯಂತ ಪ್ರತಿಷ್ಠಿತವಾವಿತ್ತು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಬಣ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಬಣದ ನಡುವೆ ನೇರಾ ಹಣಾಹಣಿ ಏರ್ಪಟ್ಟಿತ್ತು
ರಾಜೇಂದ್ರ ಅಂಕಲಗಿ, ದೊಡ್ಡಗೌಡ ನಿಂಗನಗೌಡ ಪಾಟೀಲ್, ಮುಶಪ್ಪ ರಾಮನಗೌಡ ಹಟ್ಟಿ, ಸಿದ್ದಪ್ಪ ಯಲ್ಲಪ್ಪ ಚಾಪಗಾಂವ್, ಸಿದ್ದಯ್ಯ ಕಲ್ಲಯ್ಯ ಗಣಾಚಾರಿ, ನಾಗಪ್ಪ ಕಲ್ಲಪ್ಪ ಕಾಳೆನಟ್ಟಿ, ಶಿವಪ್ಪ ಸತ್ಯಪ್ಪ ಬೆಳಗಾಂ, ಸಿದ್ದಪ್ಪ ಯಲ್ಲಪ್ಪ ಢವಣಿ, ನಿರ್ಮಾಲಾ ರಾಮಗೌಡ ಪಾಟೀಲ್, ರುದ್ರವ್ವ ಬಸಪ್ಪ ಗುಗರಿ, ಶಿವಲಿಂಗ ಶಿವಪ್ಪ ಕಾಳೇನಟ್ಟಿ, ಅವಿರೋಧವಾಗಿ ರುದ್ರವ್ವ ನಾಗಪ್ಪ ಯಡಾಲ್ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಗುಂಪಿಗೆ ಭರ್ಜರಿ ಜಯವಾಗಿದ್ದು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುಂಪಿಗೆ ಸೋಲಾಗಿದೆ.
ಗೆಲುವಿನ ಬಗ್ಗೆ ಮಾತನಾಡಿದ ರಾಜೇಂದ್ರ ಅಂಕಗಲಿ, ಈ ಚುನಾವಣೆಯಲ್ಲಿ ಬಡಾಲ ಅಂಕಲಗಿ ಪ್ರಜ್ಞಾವಂತ ಮತದಾರು ಹಣ, ಅಧಿಕಾರದಿಂದ ಚುನಾವಣೆಯಲ್ಲಿ ಗೆಲ್ಲಲ್ಲು ಆಗಲ್ಲ ಎಂಬುದು ತೋರಿಸಿಕೊಟ್ಟಿದ್ದಾರೆ.
ಚುನಾವಣೆಯಲ್ಲಿ ಸದಸ್ಯರು ನಮ್ಮ ಗುಂಪು ಬೆಂಬಲಿಸಿದ್ದಕ್ಕೆ ಧನ್ಯವಾದ. ಸದಸ್ಯರ ನಿರೀಕ್ಷೆಯಂತೆ ಮುಂದಿನ ದಿನದಲ್ಲಿ ಕೆಲಸ ಮಾಡುತ್ತೇನೆ ಎಂದು ರಾಜೇಂದ್ರ ಅಂಕಲಗಿ ಹೇಳಿದ್ದಾರೆ.